ಶಿರೂರಿನಲ್ಲಿ ನಾಪತ್ತೆಯಾದವರ ಹುಡುಕಾಟಕ್ಕಾಗಿ ಆರಂಭಿಸಿದ್ದ ಕಾರ್ಯಾಚರಣೆ ಮತ್ತೆ ಸ್ಥಗಿತ: ಯಾಕೆ ನೋಡಿ?

ಅಂಕೋಲಾ: ಶಿರೂರಿನಲ್ಲಿ ಭೂ ಕುಸಿತವಾಗಿ ಒಂದು ತಿಂಗಳು ಕಳೆದಿದೆ. ಆಗಷ್ಟ್ 17 ರ ವರೆಗೂ ಕೇರಳದ ಅರ್ಜುನ್, ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಶವ ಶೋಧಕ್ಕಾಗಿ ಕಾರ್ಯಾಚರಣೆ ನಡೆಸಲಾಗುತಿತ್ತು . ಆದರೇ ಗಂಗಾವಳಿ ನದಿಯಲ್ಲಿ ಮಣ್ಣು ಮಿಶ್ರಿತ ನೀರು ಬರುತಿದ್ದು ,ಜೊತೆಗೆ ಕೆಳಭಾಗದಲ್ಲಿ ಮಣ್ಣು ಕಲ್ಲುಬಂಡೆಗಳಿದ್ದು ಜೊತೆಗೆ ಎರಡು ಮರವು ಸಹ ಇರುವುದರಿಂದ ಮುಳುಗುತಜ್ಞರಿಗೆ ಕಾರ್ಯಾಚರಣೆಗೆ ನಡೆಸಲು ತೊಡಕಾಗಿದೆ ಎನ್ನಲಾಗಿದೆ.

Recruitment News: ಅಕೌಂಟೆಂಟ್, ಕ್ಯಾಶಿಯರ್, ಡ್ರೈವರ್‌ಗೆ ಸೇರಿ ಹಲವು ಹುದ್ದೆಗಳಿಗೆ ನೇಮಕಾತಿ: 10 ರಿಂದ 15 ಸಾವಿರ ವೇತನ

ಮಣ್ಣು ತೆರವು ಮಾಡಲು ಗೋವಾ ದಿಂದ ಡ್ರಜ್ಜಿಂಗ್ ಬಾರ್ಜ್ ತರಬೇಕಿದೆ. ಇದಕ್ಕೆ ಸಮಯ ಹಿಡಿಯುತ್ತಿದೆ. ಹೀಗಾಗಿ ಜಿಲ್ಲಾಡಳಿತ ಮತ್ತೆ ಶೋಧ ಕಾರ್ಯಾಚರಣೆಯನ್ನು ಸ್ಥಗಿತ ಮಾಡಿದೆ. ಇನ್ನು ಈಶ್ವರ್ ಮಲ್ಪೆಯವರು ಸ್ಥಳದಲ್ಲೇ ಇದ್ದು ಜಿಲ್ಲಾಡಳಿತ ಶೋಧ ಕಾರ್ಯಕ್ಕೆ ಅನುಮತಿ ನೀಡಿಲ್ಲ. ಈ ಎಲ್ಲಾ ಕಾರಣದಿಂದ ಸದ್ಯ ಡ್ರಜ್ಜಿಂಗ್ ಬಾರ್ಜ ಬರುವ ವರೆಗೆ ಕಾರ್ಯಾಚರಣೆ ಸ್ಥಗಿತಮಾಡಲಾಗಿದೆ.

ವಿಸ್ಮಯ ನ್ಯೂಸ್, ವಿಲಾಸ್ ನಾಯಕ, ಅಂಕೋಲಾ

Exit mobile version