Join Our

WhatsApp Group
Info
Trending

ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎಮ್. ನಾರಾಯಣ ಸ್ವಾಮಿ ಅವರಿಂದ ಮಾರಿಕಾಂಬೆಗೆ ಪೂಜೆ

ಶಿರಸಿ : ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಮ್. ನಾರಾಯಣ ಸ್ವಾಮಿ ಅವರು ಇಂದು ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಆಗಮಿಸಿದರು. ಶ್ರೀ ದೇವಸ್ಥಾನದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಡಾ. ವೆಂಕಟೇಶ.ಎಲ್.ನಾಯ್ಕ ಅವರನ್ನು ಆದರದಿಂದ ಬರಮಾಡಿಕೊಂಡರು. ನಂತರದಲ್ಲಿ ಶ್ರೀ ಮಾರಿಕಾಂಬೆಯ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿದರು. ಹಾಗೂ ಶ್ರೀ ದೇವಸ್ಥಾನದ ಪರಂಪರೆಯoತೆ ಅವರನ್ನು ಗೌರವಿಸಲಾಯಿತು.

ಈ ಸಮಯದಲ್ಲಿ ಶ್ರೀ ದೇವಸ್ಥಾನದ ಬಾಬುದಾರ ಮುಖ್ಯಸ್ಥರು ಹಾಗೂ ಜಿಲ್ಲಾ ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷರಾದ ಜಗದೀಶ. ಎನ್. ಗೌಡ, ಕಾಂಗ್ರೇಸ್ ಜಿಲ್ಲಾ ವಕ್ತಾರರಾದ ದೀಪಕ ದೊಡ್ಡೂರು , ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜ ದೊಡ್ಮನೆ, ಜಿಲ್ಲಾ ಕಾರ್ಯದರ್ಶಿ ಎಸ್.ಕೆ. ಭಾಗ್ವತ್, ಶ್ರೀನಿವಾಸ ನಾಯ್ಕ, ಪ್ರಶಾಂತ ಶೆಟ್ಟಿ, ಶೈಲೇಶ ಗಾಂಧಿ, ಶ್ರೀಧರ ನಾಯ್ಕ ಇತರರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Check Also
Close
Back to top button