ಮಾಹಿತಿ
Trending

ಕುಮಟಾ, ಹೊನ್ನಾವರದಲ್ಲಿ ಇಂದು ಎಲ್ಲೆಲ್ಲಿ ಕರೊನಾ ಕೇಸ್ ದಾಖಲು: Kumata, Honnavar Corona Updates

Uttara Kannada Covid 19 News

  • ಕುಮಟಾದಲ್ಲಿ 16, ಹೊನ್ನಾವರದಲ್ಲಿ 17 ಪಾಸಿಟಿವ್
  • ಕುಮಟಾ ತಂಡ್ರಕುಳಿ, ಅಳ್ವೇಕೊಡಿ, ಹೊಲನಗದ್ದೆ, ಹೆರವಟ್ಟಾ, ಗುಜರಗಲ್ಲಿ ಮುಂತಾದ ಭಾಗದಲ್ಲಿ ಸೋಂಕು
  • ಹಳದೀಪುರ 4, ಕವಲಕ್ಕಿ 3, ಹೆಬ್ಬಾನಕೇರಿ, ಕೆಳಗೀನೂರ ಭಾಗದಲ್ಲಿ ಪಾಸಿಟಿವ್
  • ಬ್ಯಾಂಕ್ ಸಿಬ್ಬಂದಿಗೂ ಅಂಟಿದ ನಂಜು
[sliders_pack id=”1487″]

ಕುಮಟಾ: ತಾಲೂಕಿನಲ್ಲಿ ಕರೊನಾ ಸೊಂಕಿತರ ಸಂಖ್ಯೆ ದಿನೆ ದಿನೆ ಏರುತ್ತಲೆ ಇದ್ದು, ಇಂದು ಒಟ್ಟು 16 ಸೋಂಕಿತ ಪ್ರಕರಣ ಪತ್ತೆಯಾಗಿದೆ. ಕುಮಟಾದ ತಂಡ್ರಕುಳಿ, ಅಳ್ವೇಕೊಡಿ, ಹೊಲನಗದ್ದೆ, ಹೆರವಟ್ಟಾ, ಹೊಸಹೆರವಟ್ಟಾ, ಗುಜರಗಲ್ಲಿ ಮುಂತಾದ ಭಾಗಗಳಲ್ಲಿ ಇಂದು ಪ್ರಕರಣ ದಾಖಲಾಗಿದೆ. ತಂಡ್ರಕುಳಿಯ 32 ವರ್ಷದ ಮಹಿಳೆ, ಹೊಲನಗದ್ದೆಯ 21 ವರ್ಷದ ಯುವಕ, ಹೊಲನಗದ್ದೆಯ 40 ವರ್ಷದ ಪುರುಷ, ಹೊಲನಗದ್ದೆಯ 74 ವರ್ಷದ ವೃದ್ಧೆ, ಕುಮಟಾದ 18 ವರ್ಷದ ಯುವಕ, ಕುಮಟಾದ 58 ವರ್ಷದ ಪುರುಷ, ಕುಮಟಾದ 52 ವರ್ಷದ ಮಹಿಳೆ, ಕುಮಟಾದ 10 ವರ್ಷದ ಬಾಲಕಿ, ಕುಮಟಾದ 8 ವರ್ಷದ ಬಾಲಕಿ, ಕುಮಟಾದ 35 ವರ್ಷದ ಮಹಿಳೆ, ಕುಮಟಾದ 42 ವರ್ಷದ ಪುರುಷನಲ್ಲಿ ಸೋಂಕು ಕಾಣಿಸಿಕೊಂಡಿದೆ.

ಹೆರವಟ್ಟಾದ 51 ವರ್ಷದ ಮಹಿಳೆ, ಅಳ್ವೇಕೊಡಿಯ 21 ವರ್ಷದ ಯುವಕ, ಗುಜರಗಲ್ಲಿಯ 62 ವರ್ಷದ ಪುರುಷ, ಹೊಸ ಹೆರವಟ್ಟಾದ 32 ವರ್ಷದ ಪುರುಷ, ಕೂಜಳ್ಳಿಯ 70 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿದೆ. ಈ 16 ಜನರೂ ಕೂಡ ಈ ಹಿಂದೆ ಸೋಂಕು ತಗುಲಿದ್ದವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರೇ ಆಗಿದ್ದಾರೆ. ಇಂದಿನ 16 ಪ್ರಕರಣ ಸೇರಿ ಕುಮಟಾ ತಾಲೂಕಿನಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 580 ರ ಗಡಿ ದಾಟಿದೆ.

ಹೊನ್ನಾವರ ತಾಲೂಕಿನಲ್ಲಿ ಇಂದು 17 ಕರೊನಾ ಸೋಂಕು ದೃಢ

ಹೊನ್ನಾವರ: ಹೊನ್ನಾವರ ತಾಲೂಕಿನಲ್ಲಿ ಇಂದು ಕರೊನಾ ಆರ್ಭಟ ಮುಂದುವರಿದಿದ್ದು, 17 ಜನರಲ್ಲಿ ಪಾಸಿಟಿವ್ ಕಂಡುಬ0ದಿದೆ. ಹೊನ್ನಾವರ ತಾಲೂಕಿನಲ್ಲಿ ಇಂದು ಮತ್ತೆ 17 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಆರು, ಗ್ರಾಮೀಣ ಭಾಗವಾದಲ್ಲಿ 9, ಹಳದೀಪುರ-4 ಕವಲಕ್ಕಿ-3 ಹೆಬ್ಬಾನಕೇರಿ-1 ಕೆಳಗಿನೂರು 1 ಹಾಗು ಹೊನ್ನಾವರ ಆಸ್ಪತ್ರೆಗೆ ಆಗಮಿಸಿದ ಕುಮಟಾದ ಇಬ್ಬರಲ್ಲಿ ಪಾಸಿಟಿವ್ ಬಂದಿದೆ.

ಹಳದೀಪುರದ 48 ವರ್ಷದ ಮಹಿಳೆ, 90 ವರ್ಷದ ಮಹಿಳೆ, 25 ವರ್ಷದ ಯುವತಿ, 40 ವರ್ಷದ ಮಹಿಳೆ, ಕೆಳಗಿನೂರ 52 ವರ್ಷದ ಪುರುಷ, ಹೆಬ್ಬಾನಕೇರಿಯ 20 ವರ್ಷದ ಯುವಕ, ಹೊನ್ನಾವರದ ಬ್ಯಾಂಕ್ ಸಿಬ್ಬಂದಿಗಳಾದ 30 ವರ್ಷದ ಯುವಕ, 53 ವರ್ಷದ ಪುರುಷ, ದುರ್ಗಾಕೇರಿಯ 47 ವರ್ಷದ ಪುರುಷ, ಅಸುರಖಾನಗಲ್ಲಿಯ 82 ವರ್ಷದ ಮಹಿಳೆ, ಕಮಟೆಹಿತ್ಲದ 34 ವರ್ಷದ ಯುವಕ, ಪಟ್ಟಣದ 40 ವರ್ಷದ ಮಹಿಳೆ, ಕವಲಕ್ಕಿಯ 80 ವರ್ಷದ ಪುರುಷ, 74 ವರ್ಷದ ಮಹಿಳೆ, 52 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಇಂದು ತಾಲೂಕಾ ಆಸ್ಪತ್ರೆಯಿಂದ ನಾಲ್ವರು ಡಿಸ್ಚಾರ್ಚ್ ಆಗಿದ್ದು, 20 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ 132 ಸೋಂಕಿತರಿಉಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 784883356

Back to top button