Follow Us On

Google News
Info
Trending

ಎಸ್.ಎಸ್.ಎಲ್.ಸಿ ಮರು-ಮೌಲ್ಯಮಾಪನದಲ್ಲಿ 15 ಅಂಕ ಹೆಚ್ಚಳ

ಅಲಗೇರಿಯ ಪ್ರತಿಭಾನ್ವಿತ ಬಾಲೆ ಸೋನಾಲಿ ಸಾಧನೆ.

ಅಂಕೋಲಾ : ನಿರ್ಮಲ ಹೃದಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸೋನಾಲಿ ಬಿ.ನಾಯ್ಕ ಇವಳಿಗೆ ಎಸ್.ಎಸ್.ಎಲ್.ಸಿ ಉತ್ತರ ಪತ್ರಿಕೆ ಮರು-ಮೌಲ್ಯಮಾಪನದಲ್ಲಿ 15 ಅಂಕಗಳು ಹೆಚ್ಚಳವಾಗಿದೆ. ಈ ಮೊದಲು ಇದೇ ವಿದ್ಯಾರ್ಥಿನಿಗೆ ಪ್ರಥಮ ಭಾಷೆ ಇಂಗ್ಲೀಷನಲ್ಲಿ 94 ಅಂಕಗಳು ಲಭಿಸಿತ್ತಾದರೂ ತನ್ನ ನಿರೀಕ್ಷೆಗಿಂತ ಕಡಿಮೆ ಅಂಕಗಳು ಬಂದಿದ್ದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು. ಪರಿಷ್ಕøತ ಫಲಿತಾಂಶದಲ್ಲಿ ಭಾಷಾ ವಿಷಯಕ್ಕೆ 109 ಅಂಕಗಳು ದೊರೆಯುವ ಮೂಲಕ ಅವಳ ಒಟ್ಟಾರೆ ಫಲಿತಾಂಶ (ಶೇ90.08) ಂ+ ಗ್ರೇಡ್‍ಗೆ ಏರಿಕೆಯಾಗಿದೆ.


ಸಾಮಾನ್ಯ ಕುಟುಂಬದಿಂದ ಬಂದಿರುವ ಸೋನಾಲಿ ನಾಯ್ಕ ತನ್ನ ಶೈಕ್ಷಣಿಕ ಪ್ರಗತಿಯ ಜೊತೆ ಜೊತೆಯಲ್ಲಿಯೇ ಚಿತ್ರಕಲೆ-ನೃತ್ಯಾಭ್ಯಾಸಗಳನ್ನು ಕರಗತ ಮಾಡಿಕೊಂಡಿದ್ದು, ಪ್ರತಿಭಾನ್ವಿತೆಯಾಗಿ ಗಮನ ಸೆಳೆಯುತ್ತಿದ್ದಾಳೆ. ಈ ವಿದ್ಯಾರ್ಥಿನಿಯ ಭವಿಷ್ಯ ಉಜ್ವಲವಾಗಲಿ ಎಂಬುದು ಗುರುವೃಂದ, ಊರ ನಾಗರಿಕರು ಮತ್ತು ಕುಟುಂಬದ ಹಿತೈಷಿಗಳ ಹಾರೈಕೆಯಾಗಿದೆ.


ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button
Idagunji Mahaganapati Chandavar Hanuman