Follow Us On

WhatsApp Group
Uttara Kannada
Trending

ಹೊನ್ನಾವರ, ಕುಮಟಾದ ಎಲ್ಲೆಲ್ಲಿ ಕರೊನಾ ಕೇಸ್ ಪತ್ತೆ

  • ಹೊನ್ನಾವರ ತಾಲೂಕಿನಲ್ಲಿ 18 ಪಾಸಿಟಿವ್
  • ಕುಮಟಾದಲ್ಲಿಂದು 8 ಕೇಸ್ ದೃಢ
  • ಹೊನ್ನಾವರದ ಕಡತೋಕಾ, ಹೊಸಾಕುಳಿ, ಅರೇಂಗಡಿ, ಚಂದಾವರ, ಮಂಕಿಯಲ್ಲಿ ಸೋಂಕು ಪತ್ತೆ
[sliders_pack id=”1487″]

ಹೊನ್ನಾವರ: ತಾಲೂಕಿನಲ್ಲಿ ಇಂದು 18 ಕರೊನಾ ಪಾಸಿಟಿವ್ ಪತ್ತೆಯಾಗಿದೆ. ದುರ್ಗಾಕೇರಿಯಲ್ಲಿ 5 , ಕರ್ಕಿಯಲ್ಲಿ 5 ಪ್ರಕರಣ ದಾಖಲಾಗಿದೆ. ಕಡತೋಕಾ-ಹೋಸಾಕುಳಿ-ಅರೇಂಗಡಿ-ಚoದಾವರ-ಮoಕಿಯಲ್ಲಿ ತಲಾ ಒಂದೋoದು ಪ್ರಕರಣ ಕಾಣಿಸಿಕೊಂಡಿದೆ. ಹೊನ್ನಾವರ ಪಟ್ಟಣದ ಲೈಟ್ ಹೌಸ್ ಕ್ವಾಟರ್ಸ್ನ 44 ವರ್ಷದ ಪುರುಷ, ದುರ್ಗಾಕೇರಿಯ 31 ವರ್ಷದ ಮಹಿಳೆ, 3 ವರ್ಷದ ಬಾಲಕ, 32 ವರ್ಷದ ಪುರುಷ, 55 ವರ್ಷದ ಪುರುಷ, 52 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಗ್ರಾಮೀಣ ಭಾಗವಾದ ಮಂಕಿ ದೊಡ್ಡಗುಂದಾದ 28 ವರ್ಷದ ಯುವಕ., ಹೊಸಾಕುಳಿಯ 46 ವರ್ಷದ ಪುರುಷ, ಅರೇಂಗಡಿಯ 43 ವರ್ಷದ ಪುರುಷ, ಕರ್ಕಿಯ 52 ವರ್ಷದ ಪುರುಷ, 21 ವರ್ಷದ ಯುವಕ, 14 ವರ್ಷದ ಬಾಲಕ, 26 ವರ್ಷದ ಯುವತಿ, 54 ವರ್ಷದ ಪುರುಷ, ಚಂದಾವರದ ವಡಗೇರಿಯ 33 ವರ್ಷದ 33 ವರ್ಷದ ಯುವಕ, ಕಡತೋಕಾದ 90 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಇಂದು ತಾಲೂಕಾ ಆಸ್ಪತ್ರೆಯಿಂದ 10 ಜನರು ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಲ್ಲಿ 26 ಜನರು ಚಿಕಿತ್ಸೆ ಪಡೆಯುತ್ತಿದ್ದು, ಮನೆಯಲ್ಲಿ 187 ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕುಮಟಾದಲ್ಲಿಂದು 8 ಕೇಸ್ ದೃಢ

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಎಂಟು ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕುಮಟಾದ ಗಿಬ್‌ಹೈಸ್ಕೂಲ್ ಸಮೀಪ 2, ಚಿತ್ರಗಿ 2, ಹೆರವಟ್ಟಾ 2 ಸೇರಿದಂತೆ ಗುಜರಗಲ್ಲಿ, ಗಾಂಧಿನಗರದಲ್ಲಿ ತಲಾ ಒಂದೊoದು ಕೇಸ್ ದಾಖಲಾಗಿದೆ.

ಗಿಬ್‌ಹೈಸ್ಕೂಲ್ ಸಮೀಪದ 86 ವರ್ಷದ ವೃದ್ಧ, ಗಿಬ್‌ಹೈಸ್ಕೂಲ್ ಸಮೀಪದ 80 ವರ್ಷದ ವೃದ್ಧೆ, ಗುಜರಗಲ್ಲಿಯ 64 ವರ್ಷದ ಮಹಿಳೆ, ಗಾಂಧಿನಗರದ 67 ವರ್ಷದ ಪುರುಷ, ಹೆರವಟ್ಟಾದ 74 ವರ್ಷದ ವೃದ್ಧೆ, ಹೆರವಟ್ಟಾದ 84 ವರ್ಷದ ವೃದ್ಧ, ಚಿತ್ರಗಿಯ 32 ವರ್ಷದ ಪುರುಷ, ಚಿತ್ರಗಿಯ 62 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ ಮತ್ತು ಯೋಗೇಶ್ ಮಡಿವಾಳ, ಕುಮಟಾ

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

Back to top button