Focus News
Trending

ಉತ್ತರ ಕನ್ನಡದಲ್ಲಿಂದು 236 ಕರೊನಾ ಕೇಸ್

ಜಿಲ್ಲೆಯಲ್ಲಿಂದು ಇಬ್ಬರ ಸಾವು
ಸೋಂಕಿತರ ಸಂಖ್ಯೆ 6,336ಕ್ಕೆ ಏರಿಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 236 ಕರೊನಾ ಕೇಸ್ ದಾಖಲಾಗಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ ಕಾರವಾರದಲ್ಲಿ 69, ಅಂಕೋಲಾ 33, ಕುಮಟಾ 30, ಹೊನ್ನಾವರ 27, ಭಟ್ಕಳ 1, ಶಿರಸಿ 4, ಸಿದ್ದಾಪುರ 32, ಯಲ್ಲಾಪುರ 24, ಹಳಿಯಾಳದಲ್ಲಿ 16 ಕೇಸ್ ದಾಖಲಾಗಿದೆ. ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ 82 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕಾರವಾರ 13, ಅಂಕೋಲಾ 4, ಕುಮಟಾ 13, ಹೊನ್ನಾವರ 39, ಜೋಯ್ಡಾದಲ್ಲಿ ಇಬ್ಬರು ಬಿಡುಗಡೆಯಾಗಿದ್ದಾರೆ.

ಇದೇ ವೇಳೆ ಅಂಕೋಲಾದಲ್ಲಿ ಮತ್ತು ಹೊನ್ನಾವರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. ಇಂದು 236 ಪ್ರಕರಣ ದೃಢಪಟ್ಟ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,336ಕ್ಕೆ ಏರಿಕೆಯಾಗಿದೆ. 1026 ಮಂದಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಸ್ಮಯ ನ್ಯೂಸ್, ಕಾರವಾರ

ಬೇಕಾಗಿದ್ದಾರೆ

ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568

Back to top button