Follow Us On

Google News
Uttara Kannada
Trending

ಕುಮಟಾ, ಹೊನ್ನಾವರದಲ್ಲಿ ಎಲ್ಲೆಲ್ಲಿ ಕರೊನಾ ಕೇಸ್ ದಾಖಲು?

  • ಬರಗದ್ದೆ, ಹೊಲನಗದ್ದೆ, ವನ್ನಳ್ಳಿ, ಧಾರೇಶ್ವರ, ತೆಪ್ಪಾ, ಮೂರೂರು, ಹೆಗಡೆ, ಬಾಡ, ಬರ್ಗಿ ಮುಂತಾದ ಭಾಗಗಳಲ್ಲಿ ಸೋಂಕು ದೃಢ
  • ಹೊನ್ನಾವರದಲ್ಲಿ ಏಳು ಜನರಿಗೆ ಪಾಸಿಟಿವ್
  • ಯಲ್ಲಾಪುರದಲ್ಲಿ 20 ಮಂದಿಗೆ ಸೋಂಕು ದೃಢ

ಕುಮಟಾ: ತಾಲೂಕಿನಲ್ಲಿ ಇಂದು 28 ಕರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಬರಗದ್ದೆ 5, ಹೊಲನಗದ್ದೆ 5, ವನ್ನಳ್ಳಿಯಲ್ಲಿ 3 ಸೇರಿದಂತೆ ಧಾರೇಶ್ವರ, ತೆಪ್ಪಾ, ಮೂರೂರು, ಹೆಗಡೆ, ಸುಬಾಷ್ ರೋಡ್, ಬಂಕಿಕೋಡ್ಲಾ, ಬಾಡ, ಬರ್ಗಿ ಮುಂತಾದ ಭಾಗಗಳಲ್ಲಿ ತಲಾ ಒಂದೊಂದು ಸೋಂಕಿತ ಪ್ರಕರಣ ಪತ್ತೆಯಾಗಿದೆ. ಧಾರೇಶ್ವರದ 42 ವರ್ಷದ ಪುರುಷ, ಸುಭಾಷ್ ರೋಡ್ ಸಮೀಪದ 74 ವರ್ಷದ ವೃದ್ಧ, ಹೆಗಡೆಯ 75 ವರ್ಷದ ವೃದ್ಧ, ವನ್ನಳ್ಳಿಯ 36 ವರ್ಷದ ಪುರುಷ, ವನ್ನಳ್ಳಿಯ 25 ವರ್ಷದ ಯುವತಿ, ವನ್ನಳ್ಳಿಯ 51 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಬರಗದ್ದೆಯ 10 ವರ್ಷದ ಬಾಲಕಿ, ಬರಗದ್ದೆಯ 50 ವರ್ಷದ ಪುರುಷ, ಬರಗದ್ದೆಯ 55 ವರ್ಷದ ಪುರುಷ, ಬರಗದ್ದೆಯ 14 ವರ್ಷದ ಬಾಲಕ, ಬರಗದ್ದೆಯ 14 ವರ್ಷದ ಬಲಕಿ, ಬಂಕಿಕೋಡ್ಲಾದ 29 ವರ್ಷದ ಯುವಕ, ಚಿತ್ರಗಿಯ 72 ವರ್ಷದ ವೃದ್ಧೆ, ಮೂರೂರಿನ 71 ವರ್ಷದ ವೃದ್ಧೆಗೆ ಪಾಸಿಟಿವ್ ಬಂದಿದೆ. ಕುಮಟಾದ 64 ವರ್ಷದ ಪುರುಷ, ಕುಮಟಾದ 71 ವರ್ಷದ ವೃದ್ಧೆ, ಕುಮಟಾದ 73 ವರ್ಷದ ವೃದ್ಧೆ, ಕುಮಟಾದ 39 ವರ್ಷದ ಮಹಿಳೆ, ಬಾಡದ 52 ವರ್ಷದ ಮಹಿಳೆ, ಬರ್ಗಿಯ 52 ವರ್ಷದ ಪುರುಷಗೆ ಸೋಂಕು ಕಾಣಿಸಿಕೊಂಡಿದೆ.

ಕುಮಟಾದ 16 ವರ್ಷದ ಬಾಲಕ, 13 ವರ್ಷದ ಬಾಲಕಿ, ಹೊಲನಗದ್ದೆಯ 50 ವರ್ಷದ ಪುರುಷ, ಹೊಲನಗದ್ದೆಯ 60 ವರ್ಷದ ಪುರುಷ, ಹೊಲನಗದ್ದೆಯ 26 ವರ್ಷದ ಯುವತಿ, ಹೊಲನಗದ್ದೆಯ 22 ವರ್ಷದ ಯುವಕ, ಹೊಲನಗದ್ದೆಯ 12 ವರ್ಷದ ಬಾಲಕಿ, ತೆಪ್ಪಾದ 39 ವರ್ಷದ ಮಹಿಳೆ ಸೋಂಕು ದೃಢಪಟ್ಟಿದೆ.

ಹೊನ್ನಾವರದಲ್ಲಿ ಏಳು ಜನರಿಗೆ ಪಾಸಿಟಿವ್:

ಹೊನ್ನಾವರ: ತಾಲೂಕಿನಲ್ಲಿ ಇಂದು ಏಳು ಜನರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಪಟ್ಟಣ ಭಾಗದಲ್ಲಿ 2, ಗ್ರಾಮೀಣ ಭಾಗದಲ್ಲಿ ಐವರು ಸೇರಿ ಒಟ್ಟು ಏಳು ಜನರಲ್ಲಿ ಕರೊನಾ ದೃಢಪಟ್ಟಿದೆ.


ಹೊನ್ನಾವರ ಪಟ್ಟಣದ ಪ್ರಭಾತನಗರದ 39 ವರ್ಷದ ಮಹಿಳೆ ಹಾಗೂ 37 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ. ಗ್ರಾಮೀಣ ಭಾಗವಾದ ಖರ್ವಾ ಕೊಳಗೆದ್ದೆಯ 40 ವರ್ಷದ ಮಹಿಳೆ ಮತ್ತು 17 ವರ್ಷದ ಯುವತಿ, ಕೋಡಾಣಿಯ 45 ವರ್ಷದ ಪುರುಷ, 40 ವರ್ಷದ ಮಹಿಳೆ, 51 ವರ್ಷದ ಮಹಿಳೆ ಸೇರಿದಂತೆ ಒಟ್ಟು ಏಳು ಮಂದಿಗೆ ಸೋಂಕು ದೃಢಪಟ್ಟಿದೆ. ತಾಲೂಕಾ ಆಸ್ಪತ್ರೆಯಲ್ಲಿ 26 ಜನರು ಚಿಕಿತ್ಸೆ ಪಡೆಯುತ್ತಿದ್ದು, 146 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಯಲ್ಲಾಪುರದಲ್ಲಿ 20 ಮಂದಿಗೆ ಸೋಂಕು ದೃಢ

ಯಲ್ಲಾಪುರ: ತಾಲೂಕಿನಲ್ಲಿಂದು 20 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 384 ಕ್ಕೆ ತಲುಪಿದೆ. ಸಬಗೇರಿಯಲ್ಲಿ 10, ಕಾಳಮ್ಮನಗರದದಲ್ಲಿ 4, ರವೀಂದ್ರ ನಗರದಲ್ಲಿ 3, ಗಾಂಧಿ ಚೌಕ, ಬಳಗಾರ ಹಾಗೂ ನೂತನ ನಗರಗಳಲ್ಲಿ ತಲಾ ಒಬ್ಬರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

Back to top button
Idagunji Mahaganapati Chandavar Hanuman