ಮಾಹಿತಿ
Trending

ರಾಜ್ಯ ಮಟ್ಟದ ಅಂತರ್ಜಾಲ ಸ್ವರಚಿತ ಕಾವ್ಯ ವಾಚನ ಸ್ಪರ್ಧೆ 2020

ನೀವು ಭಾಗವಹಿಸಲು ಹೀಗೆ ಮಾಡಿ

ರಾಜ್ಯದಲ್ಲಿಯೇ ತನ್ನ ವೈಶಿಷ್ಟ ಪೂರ್ಣವಾದ ಸಾಹಿತ್ಯ ಸಂಗೀತ ಕಾರ್ಯಕ್ರಮದ ಮೂಲಕ ಗುರುತಿಸಿಕೊಳ್ಳುತ್ತಿರುವ ಉತ್ತರ ಕನ್ನಡ ಜಿಲ್ಲೆಯ ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ಸಂಘಟನೆಯು ರಾಜ್ಯ ಮಟ್ಟದ ಅಂತರ್ಜಾಲ ಸ್ವರಚಿತ ಕವನ ವಾಚನ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ನಿನಾದ ಪ್ರಧಾನ ಸಂಚಾಲಕಿ ರೇಷ್ಮಾ ಉಮೇಶ ಹಾಗೂ ಸಂಚಾಲಕ ಉಮೇಶ ಮುಂಡಳ್ಳಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕವಿಗಳ ವಾಚನದ ವಿಡಿಯೋವನ್ನು ನಮ್ಮ ನಿನಾದ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗುವುದು. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದ್ದು, ನಿರ್ಣಯ ಕ್ಲಿಷ್ಟಕರ ಸಂದರ್ಭದಲ್ಲಿ ವೀಕ್ಷಕರ ಅಭಿಪ್ರಾಯ ವನ್ನೂ ಪರಿಗಣಿಸಲಾಗುದು.

ಮೊದಲ ಮೂರು ವಿಜೇತರಿಗೆ ನಗದು ಜೊತೆಗೆ ಪ್ರಶಸ್ತಿ ಫಲಕ ಹಾಗೂ ಪ್ರಶಂಸಾ ಪತ್ರವನ್ನು ನೀಡಲಾಗುವುದು. ಉಳಿದಂತೆ ನಿರ್ಣಾಯಕರ ಮೆಚ್ಚುಗೆ ಪಡೆದ ಐವರು ಹಾಗೂ ವೀಕ್ಷಕರ ಮೆಚ್ಚುಗೆ ಪಡೆದ ಐವರು ಕವಿಗಳಿಗೆ ಇ ಪ್ರಶಂಸಾ ಪತ್ರ ನೀಡಲಾಗುವುದು.

ಸ್ಪರ್ಧೆಗೆ ಮುಕ್ತ ಅವಕಾಶವಿದ್ದು ತಾವೇ ಬರೆದ ಕವಿತೆಯೊಂದಿಗೆ ಮಾತ್ರ ಯಾರೂ ಕೂಡ ಭಾಗವಹಿಸಬಹುದಾಗಿದೆ.

ಕವನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಕವಿಗಳು ಸೆಪ್ಟೆಂಬರ್ 25 ರ ಒಳಗೆ ತಮ್ಮ ಸಂಪೂರ್ಣ ವಿಳಾಸದೊಂದಿಗೆ 9945840552 ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ನಂತರ ಬಂದ ಹೆಸರನ್ನು ಪರಿಗಣಿಸಲಾಗುವುದಿಲ್ಲ. ನೊಂದಣಿ ಮುಗಿದ ನಂತರ ಕವನ ವಾಚನ ವಿಡಿಯೋ ಕಳಿಸಲು ತಿಳಿಸಲಾಗುವುದು.

ನಿಬಂಧನೆಗಳು

  • ಕವನಗಳು ಸ್ವರಚಿತವಾಗಿರಬೇಕು.
  • ಕವನಗಳನ್ನು ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡುವ ಕಾರಣ ಕೃತಿಚೌರ್ಯ ಮಾಡಿದಲ್ಲಿ ತಾವೇ ಹೊಣೆಗಾರರಾಗಿರುತ್ತೀರಿ
  • ಒಂದು ವಿಭಾಗದಲ್ಲಿ ಮಾತ್ರ ಸ್ಪರ್ಧೆ ಇದ್ದು ಯಾವುದೇ ವಯಸ್ಸಿನ ನಿರ್ಬಂಧ ಇರುವುದಿಲ್ಲ.
  • ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ
ಉಮೇಶ ಮುಂಡಳ್ಳಿ
ಸಂಚಾಲಕರು ನಿನಾದ ಸಾಹಿತ್ಯ ಸಂಗೀತ ಸಂಚಯ
ತೀರ್ಥ ನಿವಾಸ ಚಿತ್ರಾಪುರ ಭಟ್ಕಳ ಸಂಪರ್ಕಿಸಬಹುದಾಗಿದೆ.

Back to top button