ಶರಾವತಿ ನದಿ ತೀರದ ಜನರಿಗೆ ಕೊನೆಯ ಮುನ್ನೆಚ್ಚರಿಕೆ

ಭರ್ತಿಯಾಗುತ್ತಿದೆ ಲಿಂಗನಮಕ್ಕಿ
ಜನ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

[sliders_pack id=”1487″]

ಹೊನ್ನಾವರ: ಶಿವಮೊಗ್ಗ ಜಿಲ್ಲೆಯಲ್ಲಿ ದಾರಾಕಾರ ಮಳೆ ಸುರಿಯುತ್ತಿದ್ದು, ಜಲಾಶಯಕ್ಕೆ ನೀರು ವ್ಯಾಪಕವಾಗಿ ನೀರು ಹರಿದು ಬರುತ್ತಿದೆ. ಈ ಹಿನ್ನಲೆಯಲ್ಲಿ ಇದೆ ರೀತಿಯಲ್ಲಿ ಮಳೆ ಮುಂದುವರಿದರೆ ಜಲಾಶಯದ ಹಿತದೃಷ್ಟಿಯಿಂದ ನೀರುಬಿಡುವುದು ಅನಿವಾರ್ಯ ಎಂದು ಸೂಚನೆ ನೀಡಲಾಗಿದೆ.


ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಇಂದಿನ ನೀರಿನ ಮಟ್ಟ 1812.30 ಕ್ಕೆ ತಲುಪಿದ್ದು, ನೀರಿನ ಒಳ ಹರಿವು 44 ಸಾವಿರ ಕ್ಯೂಸೆಕ್ ಇದೆ. ಇದೆ ರೀತಿ ಮಳೆ ಮುಂದುವರಿದರೆ ನೀರು ಬಿಡುವುದು ಅನಿವಾರ್ಯ ಎಂದು ಎಚ್ಚರಿಕೆ ನಿಡಲಾಗಿದೆ. ಜಲಾಶಯ ಭರ್ತಿಯಾಗಲು ಕೇವಲ 5 ಅಡಿ ಮತ್ರ ಬಾಕಿ ಉಳಿದಿದೆ.


ಲಿಂಗನಮಕ್ಕಿ ಜಲಾಶಯದಿಂದ ಬಿಟ್ಟ ನೀರು ಗೇರುಸೋಪ್ಪಾ ಜಲಾಶಯಕ್ಕೆ ಹರಿದು ಬರುತ್ತದೆ. ಇದು ಬ್ಯಾಲೇನ್ಸಿಂಗ್ ಡ್ಯಾಮ್ ಆಗಿರುವುದರಿಂದ ಲಿಂಗನಮಕ್ಕಿ ಜಲಾಶಯದಿಂದ ಬಿಟ್ಟಷ್ಟು ನೀರನ್ನು ಬಿಡುವುದು ಅನಿವಾರ್ಯವಾಗಿದೆ.


ಹೀಗಾಗಿ ಶರಾವತಿ ನದಿ ತೀರದ ಜನರು ತಮ್ಮ ಜನ ಜಾನುವಾರು ಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ.

ಶ್ರೀಧರ್ ನಾಯ್ಕ, ವಿಸ್ಮಯ ನ್ಯೂಸ್, ಹೊನ್ನಾವರ

Exit mobile version