ಗೋಕರ್ಣ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಗೋಕರ್ಣದ ಮಾಣೇಶ್ವರ ದೇವಸ್ಥಾನದ ಮೇಲ್ಬಾಗದಲ್ಲಿರುವ ಗುಡ್ಡ ಕುಸಿದಿದೆ. ಈ ವೇಳೆ ದೊಡ್ಡ ಕಲ್ಲುಬಂಡೆ ಜಾರಿದೆ. ಆದರೆ, ಅದೃಷ್ಟವಶಾತ್ ದೇವಸ್ಥಾನಕ್ಕೆ ಯಾವುದೇ ಹಾನಿ ಸಂಭವಿಸಿಲ್ಲ.
ಪಕ್ಕದಲ್ಲೇ ಮನೆಗಳಿದ್ದು ಗುಡ್ಡದ ಬಲಭಾಗಕ್ಕೆ ಜಾರಿದಲ್ಲಿ ಮನೆಯ ಮೇಲೆ ಬೀಳುತಿತ್ತು. ಹಾಗೆಯೇ ಎಡಭಾಗಕ್ಕೆ ಜಾರಿದ್ದಲ್ಲಿ ದೇವಸ್ಥಾನದ ಮೇಲೆ ಬೀಳುತಿತ್ತು. ಆದರೆ ಕುಸಿತವಾದ ಪಕ್ಕದಲ್ಲೇ ಬೃಹದಾಕಾರದ ಮರವಿದ್ದ ಕಾರಣ ಗುಡ್ಡದಿಂದ ಜಾರಿದ ಕಲ್ಲುಬಂಡೆಯು ಮರದ ಬಳಿ ನಿಂತಿದ್ದು ದೊಡ್ಡ ಅನಾಹುತ ತಪ್ಪಿದಂತಾಗಿದೆ.
ವಿಸ್ಮಯ ನ್ಯೂಸ್ , ಗೋಕರ್ಣ
ಸೆಲ್ಕೋ ಸೋಲಾರ್ ದೀಪ ಬಳಸಿ, ನಿಮ್ಮ ಮನೆ ಬೆಳಗಿಸಿ
ಸೌರಶಕ್ತಿ ಅಂದರೆ ಕೇವಲ ಬೆಳಕಲ್ಲ
ಅದು ಸ್ವಾವಲಂಬಿ ಬದುಕಿಗೂ ದಾರಿ
ಇದು ಸೆಲ್ಕೋ ಸಂಸ್ಥೆಯ ಗುರಿ
ಸಂಪರ್ಕಿಸಿ: ದತ್ತಾರಾಮ ಭಟ್ಟ, ಮ್ಯಾನೇಜರ್
ಸೆಲ್ಕೋ ಸೋಲಾರ್, ಸನ್ಮಾನ ಹೊಟೇಲ್ ಹತ್ತಿರ
N.H 66, ಕುಮಟಾ
9880003735/9449360181