- ಕಾರ್ಯಾಚರಣೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮ
- ಹಂದಿಗೋಣ, ಅಳ್ವೆಕೋಡಿಯ ಅರ್ಧ ಭಾಗದ ಸುಮಾರು 100ಕ್ಕೂ ಹೆಚ್ಚು ಮನೆ ಖಾಲಿ
- ಹೊನ್ನಾವರ ತಾಲೂಕಿನಲ್ಲಿ ಇಂದು 15 ಕರೊನಾ ಕೇಸ್ ದಾಖಲು
- ಹಳದೀಪುರ, ತುಳಸಿನಗರ, ಕರ್ಕಿ, ಪ್ರಭಾತನಗರ ಮುಂತಾದ ಕಡೆ ಸೋಂಕು ಪತ್ತೆ
- 119 ಸೋಂಕಿತರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ
ಕುಮಟಾ: ಗ್ಯಾಸ್ ತುಂಬಿದ ಟ್ಯಾಂಕರ್ ವೊಂದು ರಾಷ್ಟ್ರೀಯ ಹೆದ್ದಾರಿ ಎನ್.ಎಚ್ 66ರ ಹಂದಿಗೋಣ ಸಮೀಪದ ಬೆಳಿಗ್ಗೆ ಪಲ್ಟಿಯಾಗಿದೆ. ಮಂಗಳೂರಿನಿoದ ಮುಂಬೈಗೆ ಗೆ ತೆರಳುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ರಸ್ತೆಗೆ ಅಡ್ಡವಾಗಿ ಬಿದ್ದಿದೆ.
ಆದರೆ, ಪಲ್ಟಿಯಾದ ಗ್ಯಾಸ್ ಟ್ಯಾಂಕರ್ ನಿಂದಾಗುತ್ತಿರುವ ಗ್ಯಾಸ್ ಸೋರಿಕೆಯನ್ನು ಸಂಪೂರ್ಣ ತಡೆಯಲು ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿ ಕಾರ್ಯಾಚರಣೆ ರಾತ್ರಿ ಹತ್ತು-ಹನ್ನೊಂದು ಗಂಟೆವರೆಗೂ ನಡೆಯುವ ಸಾಧ್ಯಯಿತೆ. ಮತ್ತೊಂದು ಟ್ಯಾಂಕರ್‌ಗೆ ಗ್ಯಾಸ್ ನ್ನು ಶಿಫ್ಟ್ ಮಾಡುವ ಕಾರ್ಯ ನಡೆದಿದೆ.©Copyright reserved by Vismaya tv
ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹಂದಿಗೋಣ ಹಾಗೂ ಅಳ್ವೆಕೋಡಿಯ ಅರ್ಧ ಭಾಗದ ಸುಮಾರು 100ಕ್ಕೂ ಹೆಚ್ಚು ಮನೆಗಳನ್ನು ಖಾಲಿ ಮಾಡಿಸಲಾಗಿದೆ. ಧ್ವನಿವರ್ಧಕಗಳ ಮೂಲಕ ಪೊಲೀಸರು ಮನೆಯಿಂದ ಹೊರ ಹೋಗುವಂತೆ ಘೋಷಿಸಿದ್ದು, ಭಯದಿಂದಾಗಿ ಎಲ್ಲರೂ ಸದ್ಯ ಗ್ರಾಮ ತೊರೆದು ಸಂಬoಧಿ, ಪರಿಚಯಸ್ಥರ, ಸಂಬoಧಿಕರ, ಸ್ನೇಹಿತರ ಮನೆಗಳಿಗೆ ತೆರಳಿದ್ದಾರೆ.
ಹೊನ್ನಾವರ ತಾಲೂಕಿನಲ್ಲಿ ಇಂದು 15 ಕರೊನಾ ಕೇಸ್ ದಾಖಲು
ಹೊನ್ನಾವರ: ತಾಲೂಕಿನಲ್ಲಿ ಇಂದು 15 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಪಟ್ಟಣದ ಪ್ರಭಾತನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ, ಹಳದೀಪುರ, ತುಳಸಿನಗರ, ಕರ್ಕಿ, ಮುಂತಾದ ಕಡೆ ಸೋಂಕು ದೃಢಪಟ್ಟಿದೆ.
ಹೊನ್ನಾವರ ಪಟ್ಟಣದ 39 ವರ್ಷದ ಪುರುಷ, ಪ್ರಭಾತನಗರದ 55 ವರ್ಷದ ಪುರುಷ, 22 ವರ್ಷದ ಯುವತಿ., 21 ವರ್ಷದ ಯುವತಿ, 38 ವರ್ಷದ ಮಹಿಳೆ, 18 ವರ್ಷದ ಯುವಕ, 16 ವರ್ಷದ ಬಾಲಕ, 71 ವರ್ಷದ ಮಹಿಳೆ, ತುಳಸಿನಗರದ 36 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ, ಪಟ್ಟಣದ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಾದ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ.
ಓರ್ವ ವೃದ್ಧೆ ಸಾವು:
ಹಳದಿಪುರದ 47 ವರ್ಷದ ಪುರುಷ, ಕರ್ಕಿಯ 47 ವರ್ಷದ ಮಹಿಳೆ ಸೇರಿದಂತೆ ಇಂದು 15 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ತಾಲೂಕಾ ಆಸ್ಪತ್ರೆಯಲ್ಲಿ 21 ಜನರು ಚಿಕಿತ್ಸೆ ಪಡೆಯುತ್ತಿದ್ದು, 119 ಸೋಂಕಿತರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೊಂದೆಡೆ, ಹೊನ್ನಾವರದ ಪಟ್ಟಣದ 87 ವರ್ಷದ ಮಹಿಳೆ ಶಿರಸಿಯಲ್ಲಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ