ಶಿರಸಿಯಲ್ಲಿ 21, ಹೊನ್ನಾವರದಲ್ಲಿ 13 ಕರೊನಾ ಕೇಸ್

ಶಿರಸಿಯಲ್ಲಿ 21 ಕೇಸ್ ದಾಖಲು
ಹೊನ್ನಾವರದಲ್ಲಿ 13 ಸೋಂಕಿತರು ಪತ್ತೆ
ತಾಲೂಕಿನಲ್ಲಿ ಓರ್ವ ಸಾವು

[sliders_pack id=”1487″]

ಹೊನ್ನಾವರ: ತಾಲೂಕಿನಲ್ಲಿ ಕರೊನಾ ಹೆಚ್ಚುತ್ತಲೇ ಇದ್ದು, ಶುಕ್ರವಾರ 12 ಪ್ರಕರಣ ದಾಖಲಾಗಿದೆ. ಕೆರೆಕೋಣದ 38 ವರ್ಷದ ಪುರುಷ, ಗೇರುಸೊಪ್ಪಾ ಕೆ.ಪಿಸಿ ಕಾಲೋನಿಯ 38 ವರ್ಷದ ಪುರುಷ, 27 ವರ್ಷದ ಯುವಕ, ಕಡತೋಕಾದ 47 ವರ್ಷದ ಪುರುಷ, 68 ವರ್ಷದ ಮಹಿಳೆ, 36 ವರ್ಷದ ಮಹಿಳೆ, 5 ವರ್ಷದ ಬಾಲಕ, 36 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.


ಕಳಸಮೊಟೆಯ 27 ವರ್ಷದ ಮಹಿಳೆ, ದೊಡ್ಡಗುಂದದ 34 ವರ್ಷದ ಮಹಿಳೆ, 34 ವರ್ಷದ ಪುರುಷ, ಹಳದೀಪುರದ 33 ವರ್ಷದ ಪುರುಷನಲ್ಲಿ ಸೋಂಕು ದೃಢವಾಗಿದೆ. ಇಂದು ಎಂಟು ಮಂದಿ ಡಿಸ್ಚಾರ್ಜ್ ಆಗಿದ್ದು, ಆಸ್ಪತ್ರೆಯಲ್ಲಿ 14 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 124 ಸೋಂಕಿತರಿಗೆ ಮನೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಸೋಂಕಿನಿoದ ಓರ್ವ ಸಾವು


ಇದೇ ವೇಳೆ, ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದ ಚಂದಾವರ ಮೂಲದ 60 ವರ್ಷದ ಪುರುಷನಿಗೆ ಕಳೆದ ಎರಡು ದಿನದ ಹಿಂದೆ ಪಾಸಿಟಿವ್ ಬಂದಿತ್ತು. ಈತ ಮಂಗಳೂರಿನ ಸುರತ್ಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈತನಿಗೆ ಕರೊನಾ ಇರುವುದು ದೃಢವಾಗಿದೆ.

ಶಿರಸಿಯಲ್ಲಿಂದು 21 ಮಂದಿಗೆ ಕರೊನಾ ದೃಢ

ಶಿರಸಿ: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಶುಕ್ರವಾರ 21 ಮಂದಿಗೆ ಪಾಸಿಟಿವ್ ಬಂದಿದೆ. ನೆಹರು ನಗರದಲ್ಲಿ 2, ಟಿಎಸ್‍ಎಸ್ ರಸ್ತೆಯಲ್ಲಿ 3, ರಾಮನಗರದಲ್ಲಿ 1, ಯಲ್ಲಾಪುರ ನಾಕಾ 3 ಕೆಎಚ್‍ಬಿ ಕಾಲೋನಿ 1, ಎಸಳೆ 2, ಯಲ್ಲಾಪುರ ರೋಡಿನಲ್ಲಿ 1, ಬನವಾಸಿ ರೋಡ್ 1, ಕರ‍್ಸೆ ಕಂಪೌಂಡ್ 1, ಮರಾಠಿಕೊಪ್ಪ 1, ಕೋಳಿಗಾರ್ 1, ಸಿ.ಪಿ ಬಝಾರ್ 1, ಬಾಪೂಜಿನ ನಗರ 2, ವಿದ್ಯಾನಗರದಲ್ಲಿ 1 ಕೇಸ್ ಪಾಸಿಟಿವ್ ಬಂದಿದೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ

ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version