ಕರೊನಾ ಹಿನ್ನಲೆ: ಅಂಕೋಲಾ ತಾಲೂಕು ಮೂಲದ ಖ್ಯಾತ ವೈದ್ಯ ಹುಬ್ಬಳ್ಳಿಯಲ್ಲಿ ವಿಧಿವಶ

ಅಂಕೋಲಾದಲ್ಲಿಂದು 15, ಶಿರಸಿಯಲ್ಲಿ 17 ಮಂದಿಗೆ ಪಾಸಿಟಿವ್
ದಿನವೊಂದರಲ್ಲಿಯೇ ತ್ರಿಶತಕ ದಾಟಿದ ಗಂಟಲು ದ್ರವ ಪರೀಕ್ಷೆ

ಅಂಕೋಲಾ : ತಾಲೂಕಿನಲ್ಲಿ ಸೋಮವಾರ ಒಟ್ಟೂ 15 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದೆ. ಸೋಂಕುಮುಕ್ತರಾದ 12 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂಐಸೋಲೇಶನಲ್ಲಿರುವ 60 ಮಂದಿ ಸಹಿತ ತಾಲೂಕಿನಲ್ಲಿ ಒಟ್ಟೂ 99 ಪ್ರಕರಣಗಳು ಸಕ್ರಿಯವಾಗಿದೆ.

ಇಂದು ಅಚವೆ, ಕಾಕರಮಠ, ಗಾಬಿತಕೇಣಿ, ವಂದಿಗೆ, ಬೊಳೆ, ಕಲ್ಲೇಶ್ವರ, ವಾಜಂತ್ರಿಕೇರಿ, ಪುರಲಕ್ಕಿಬೇಣಾ, ಬೊಬ್ರುವಾಡ, ಬೇಲೇಕೇರಿ ಸೇರಿದಂತೆ ತಾಲೂಕಿನ ನಾನಾ ಪ್ರದೇಶಗಳಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ವಾರಿಯರ್ಸ್ ಯೋಧ-ವೈದ್ಯ ನಿಧನ :

ಮೂಲತಃ ಅಂಕೋಲಾ ತಾಲೂಕಿನ ಬೊಳೆ ಗ್ರಾಮದ ಹುಬ್ಬಳ್ಳಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ರಾಮಕೃಷ್ಣ ಜೋಗಿ ನಾಯಕ (70) ಸೋಮವಾರ ಬೆಳಿಗ್ಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರಲ್ಲಿ ಕೊವಿಡ್ ಧೃಡಪಟ್ಟಿತ್ತು ಎನ್ನಲಾಗಿದೆ. ತನ್ನದೇ ಆದ ಖಾಸಗಿ ಆಸ್ಪತ್ರೆ ತೆರದು ಜನಾನುರಾಗಿ ಸೇವೆ ನೀಡಿ ಹೆಸರಾಗಿದ್ದ ಇವರು, ತನ್ನ ಜೀವದ ಅಪಾಯದ ಅರಿವಿದ್ದೂ ರೋಗಿಗಳ ಚಿಕಿತ್ಸೆಗೆ ಮುಂದಾಗಿ ನಿಜವಾದ ಕೊರೊನಾ ವಾರಿಯರ್ಸ್ ಯೋಧನಾಗಿ ಗುರುತಿಸಿಕೊಂಡಂತಾಗಿದೆ. ಇವರ ನಿಧನಕ್ಕೆ ಕಾರವಾರ ಕ್ರಿಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ ಸೇರಿದಂತೆ ಹಲವು ಗಣ್ಯರು ಮತ್ತು ಊರ ನಾಗರಿಕರು ಸಂತಾಪ ವ್ಯಕ್ತ ಪಡಿಸಿದ್ದಾರೆ.

ತ್ರಿಶತಕ ದಾಟಿದ ಗಂಟಲು ದ್ರವ ಪರೀಕ್ಷೆ :

ತಾಲೂಕಿನ ವ್ಯಾಪ್ತಿಯ ಅಗ್ರಗೋಣ, ಕಾಮಗೆ, ಸಕಲಬೇಣ, ಕೋಟೆವಾಡ-ಮೀನು ಮಾರುಕಟ್ಟೆ ಪ್ರದೇಶಗಳಲ್ಲಿ ಒಟ್ಟಾರೆಯಾಗಿ 309 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಕೋವಿಡ್ ಟೆಸ್ಟ್ ಮಾಡುತ್ತಾರೆ ಎನ್ನುವ ಸುದ್ದಿ ಕೇಳಿ, ಕೆಲ ಪ್ರದೇಶಗಳಲ್ಲಿ ಕೆಲ ಜನರು ಪರೀಕ್ಷೆಗೊಳಪಡಲು ಅಂಜಿದಂತೆ ಕಂಡು ಬಂದಿದ್ದು, ಪರೀಕ್ಷಾ ಸ್ಥಳದಿಂದ ಅತಿ ದೂರವೇ ಉಳಿದರು ಎನ್ನಲಾಗಿದೆ.

ವೃದ್ಧರ, ಅಶಕ್ತರ, ಈ ಹಿಂದಿನ ನಾನಾ ಕಾರಣಗಳಿಂದ ಅನಾರೋಗ್ಯಕ್ಕೊಳಗಾದವರ ಗಂಟಲು ದ್ರವ ಮಾದರಿ ಸಂಗ್ರಹಿಸಿ, ಅವರೆಲ್ಲರ ಆರೋಗ್ಯ ಭದ್ರತೆಗೆ ಒತ್ತು ನೀಡಲು ಜಿಲ್ಲಾಧಿಕಾರಿಗಳ ಮಾರ್ಗದರ್ಶ ನದಲ್ಲಿ ಎಸಿ ಅಜೀತ ಸೂಚನೆಯಂತೆ ತಾಲೂಕಿನಾದ್ಯಂತ ಹೆಚ್ಚು ಹೆಚ್ಚು ಗಂಟಲು ದ್ರವ ಮಾದರಿ ಸಂಗ್ರಹಿಸಲು ಆರೋಗ್ಯ ಇಲಾಖೆ ಮತ್ತು ಸಂಬಂಧಿಸಿದ ಇತರೇ ಕೊರೊನಾ ವಾರಿಯರ್ಸ್‍ಗಳು ಸೇವೆ ಸಲ್ಲಿಸುತ್ತಿದ್ದಾರೆ.

ಸಮುದಾಯದಲ್ಲಿ ಸೋಂಕು ಹರಡಿದೆಯೇ ಎನ್ನುವುದನ್ನು ಪತ್ತೆ ಹಚ್ಚಲು, ಅಲ್ಲಲ್ಲಿ ರ್ಯಾಂಡಮ್ ಟೆಸ್ಟ್ ಸಹ ನಡೆಸಲಾಗುತ್ತಿದೆ. ಜನತೆ ಸಹ ತಾವೇ ಮುಂದೆ ಬಂದು ಆರೋಗ್ಯ ಕಾಳಜಿಗೆ ಒತ್ತು ನೀಡುವುದರ ಜೊತೆ, ಸಮುದಾಯದ ಹಿತ ದೃಷ್ಟಿಯಿಂದ ಆಡಳಿತದ ಜೊತೆ ಸಹಕರಿಸ ಬೇಕೆನ್ನುವುದು ಅಧಿಕಾರಿಗಳ ಕೋರಿಕೆಯಾಗಿದೆ.

ಶಿರಸಿಯಲ್ಲಿಂದು 17 ಮಂದಿಗೆ ಸೋಂಕು‌ ದೃಢ

ಶಿರಸಿ: ತಾಲೂಕಿನಲ್ಲಿ ಇಂದು 17 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ದಾಮನಬೈಲ್ 1, ವಿದ್ಯಾನಗರ 1, ಪಡಿಗೇರಿ 1, ಮಾರಿಕಾಂಬಾ ನಗರ 1, ಬಾಪೂಜಿ ನಗರ 1, ಕೊಡಗಿಬೈಲ್ 1, ಟಿಎಸ್‍ಎಸ್ ರಸ್ತೆಯಲ್ಲಿ 1, ಕೋಳಿಗಾರ್ 2, ಹೆಗಡೆಕಟ್ಟಾ 1, ಶಾಂತಿನಗರ 1, ಹನುಮಗೇರಿ 1, ಗಾಂಧಿನಗರ 1, ಹೀಪನಳ್ಳಿ 1, ಕರೂರ್ 1, ಪ್ರಗತಿನಗರ 1, ರಾಮನಗರದಲ್ಲಿ ಒಂದು ಕೇಸ್ ದರಢಪಟ್ಟಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version