ಅಂಕೋಲಾದಲ್ಲಿಂದು 8, ಶಿರಸಿಯಲ್ಲಿ 7 ಕೊವಿಡ್ ಕೇಸ್

ಅಂಕೋಲಾದಲ್ಲಿ ಗುಣಮುಖ2 : ಸಕ್ರಿಯ 68
ಅಂಕೋಲಾ ಪಟ್ಟಣ ವ್ಯಾಪ್ತಿಯಲ್ಲಿ ಕೋವಿಡ್ ಟೆಸ್ಟ್ ವೇಳೆ ಗೊಂದಲಮಯ ವಾತವಾರಣ

ಅಂಕೋಲಾ : ತಾಲೂಕಿನಲ್ಲಿ ಶನಿವಾರ 8 ಹೊಸ ಕೊವಿಡ್ ಕೇಸ್‍ಗಳು ದಾಖಲಾಗಿದೆ. ಮೊರಳ್ಳಿಯಲ್ಲಿ 4, ಕಸಬಾಕೇಣಿ, ಹೊಸಗದ್ದೆ, ಲಕ್ಷ್ಮೇಶ್ವರ ಮತ್ತು ಬಾಸಗೋಡ ಹತ್ತಿರದ ಪ್ರದೇಶದಲ್ಲಿ ತಲಾ 1 ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಗುಣಮುಖರಾದ 2 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್‍ಲ್ಲಿರುವ 52 ಮಂದಿ ಸಹಿತ ಒಟ್ಟೂ 68 ಪ್ರಕರಣಗಳು ಸಕ್ರಿಯವಾಗಿದೆ.

ಕೋವಿಡ್ ಟೆಸ್ಟ್ ವೇಳೆ ಗೊಂದಲಮಯ ವಾತವಾರಣ :
ಪುರಸಭೆ ವ್ಯಾಪ್ತಿಯ ಕಣಕಣೇಶ್ವರ ದೇವಸ್ಥಾನದ ಎದುರು ಕೊವಿಡ್ ಟೆಸ್ಟ್ ಕ್ಯಾಂಪ್ ಹಮ್ಮಿಕೊಳ್ಳಲಾಗಿತ್ತು. ಶನಿವಾರ ಸಂತೆ ಮತ್ತಿತರ ಕಾರಣಗಳಿಂದ ಜನ ಜಂಗುಳಿಯು ಹೆಚ್ಚಿದ್ದು, ಮಾಸ್ಕ ಧರಿಸದೇ ಓಡಾಡುವವರನ್ನು ಕಡ್ಡಾಯ ತಪಾಸಣೆ ಒಳಪಡಿಸಲು ಸಂಬಂಧಿಸಿದ ಸಿಬ್ಬಂದಿಗಳು ಮುಂದಾದಾಗ ಇಬ್ಬರು ವ್ಯಕ್ತಿಗಳು ಏರು ಧ್ವನಿಯಲ್ಲಿ ಕೊರೊನಾ ವಾರಿಯರ್ಸ್ ಗಳ ಬಳಿ ತಗಾದೆ ತೆಗೆದಾಗ, ಇದೇ ವೇಳೆ ಸಾರ್ವಜನಿಕರು ಗುಂಪುಗೂಡಿದರು ಎನ್ನಲಾಗಿದೆ. ಕೆಲ ಕಾಲ ದೇವಸ್ಥಾನದ ಮುಂಬಾಗಿಲು ಮುಚ್ಚಿಸಿದ್ದರಿಂದ ಹಬ್ಬದ ದಿನ ಭಕ್ತರು ಬಂದು ಹೋಗಲು ತೊಂದರೆಯಾಗುತ್ತದೆ ಎಂದು ಸ್ಥಳೀಯರು ಆಕ್ಷೇಪಿಸಿದ ಘಟನೆಯು ನಡೆದು ಒಟ್ಟಾರೆಯಾಗಿ ಗೊಂದಲದ ವಾತವರಣ ಮೂಡಿತ್ತು.

ಪೊಲೀಸರ ಸಮ್ಮುಖದಲ್ಲಿ ವಾತವರಣ ತಿಳಿಯಾಯಿತು. ಇಂದು ತಾಲೂಕಿನ ವಿವಿಧಡೆ ಯಿಂದ 12 ರ್ಯಾಟ ಮತ್ತು 179 ಆರ್‍ಟಿಪಿಸಿಆರ್ ಸೇರಿದಂತೆ ಒಟ್ಟೂ 191 ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಶಿರಸಿಯಲ್ಲಿ 6 ಕೇಸ್ ದೃಢ

ಶಿರಸಿ ನಗರದಲ್ಲಿಂದು 6 ಕೊರೊನಾ ಕೇಸ್ ದಾಖಲಾಗಿದ್ದು, ಮೂರು ಮಂದಿ ಗುಣಮುಖರಾಗಿದ್ದಾರೆ.

ಇಲ್ಲಿನ ಗೋಳಿ ಊರತೋಟದಲ್ಲಿ 2, ಕಾನಗೋಡಿನ ಗೋಪುರ 1, ಬನವಾಸಿಯ ತಿಗಣಿಯಲ್ಲಿ 1, ಪೆಡೆಂಬಿಳಿನಲ್ಲಿ 2 ಕೇಸ್ ಪಾಸಿಟಿವ್ ಬಂದಿದದೆ. ಈವರೆಗೆ 1377 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 1238 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version