ಕುಮಟಾದಲ್ಲಿ 8, ಹೊನ್ನಾವರದಲ್ಲಿ 5 ಪಾಸಿಟಿವ್
ಹೊನ್ನಾವರದಲ್ಲಿ ಎಲ್ಲಾ ಗ್ರಾಮೀಣ ಭಾಗದಲ್ಲೇ ದಾಖಲು
ಕುಮಟಾ: ತಾಲೂಕಿನಲ್ಲಿ ಇಂದು 8 ಕರೋನಾ ಕೇಸ್ ದಾಖಲಾಗಿದೆ. ತಾಲೂಕಿನ ನಾಡುಮಾಸ್ಕೇರಿ, ಮಣಕೋಣ, ಮಳವಳ್ಳಿ, ಚೌಡಗೇರಿ ಹಾಗೂ ಪಟ್ಟಣ ವ್ಯಾಪ್ತಿಯ ಕುಂಭೇಶ್ವರ ಸೇರಿದಂತೆ ಹವಲೆಡೆ ಸೋಂಕು ಪತ್ತೆಯಾಗಿದೆ.
ತಾಲೂಕಿನ ಹಾರೂ ಮಾಸ್ಕೇರಿಯ 11 ವರ್ಷದ ಬಾಲಕಿ, 16 ವರ್ಷದ ಬಾಲಕಿ ಮಳವಳ್ಳಿಯ 25 ವರ್ಷದ ಮಹಿಳೆ, 57 ವರ್ಷದ ಮಹಿಳೆ, 95 ವರ್ಷದ ವೃದ್ಧೆ, ಮಣಕೋಣದ 45 ವರ್ಷದ ಪುರುಷ, ಚೌಡಗೇರಿಯ 51 ವರ್ಷದ ಮಹಿಳೆ, ಪಟ್ಟಣ ವ್ಯಾಪ್ತಿಯ ಕುಂಭೇಶ್ವರದ 31 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.
ಇಂದು 8 ಹೊಸ ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1,614 ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ ಐದು ಪಾಸಿಟಿವ್:
ಹೊನ್ನಾವರ: ತಾಲೂಕಿನಲ್ಲಿ ಇಂದು ಐವರದಲ್ಲಿ ಕರೊನಾ ದೃಢಪಟ್ಟಿದೆ . ಇಂದು ಎಲ್ಲಾ ಪ್ರಕರಣಗಳು ಗ್ರಾಮೀಣ ಭಾಗದಲ್ಲೇ ವರದಿಯಾಗಿದೆ. ಗೇರುಸೋಪ್ಪಾ-3 ಅಗ್ರಹಾರ-ಕಡತೋಕಾದಲ್ಲಿ ತಲಾ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.
ತಾಲೂಕಿನ ಗೇರುಸೋಪ್ಪಾದ 43 ವರ್ಷದ ಪುರುಷ, 23 ವರ್ಷದ ಯುವಕ, 21 ವರ್ಷದ ಯುವಕ, ಅಗ್ರಹಾರದ 61 ವರ್ಷದ ಪುರುಷ, ಕಡತೋಕಾದ 34 ವರ್ಷದ ಮಹಿಳೆ ಸೇರಿದಂತೆ ಇಂದು 5 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇಂದು 20 ಮಂದಿ ಡಿಸ್ಚಾರ್ಜ್ ಆಗಿದ್ದು, ತಾಲೂಕಾ ಆಸ್ಪತ್ರೆಯಲ್ಲಿ 13 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಸ್ಮಯ ನ್ಯೂಸ್, ದೀಪೇಶ್ ನಾಯ್ಕ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ