ಕುಮಟಾ: ತಾಲೂಕಿನಲ್ಲಿ ಇಂದು 13 ಕರೊನಾ ಪ್ರಕರಣಗಳು ದಾಖಲಾಗಿದೆ. ತಾಲೂಕಿನ ಮೂರೂರು, ಉಪ್ಪಾರಕೇರಿ, ಮಳವಳ್ಳಿ, ಶಶಿಹತ್ಲ, ಹಣ್ಣೇಮಠ ಹಾಗೂ ಪಟ್ಟಣ ವ್ಯಾಪ್ತಿಯ ಬಸ್ತಿಪೇಟೆ, ಮೂರುಕಟ್ಟೆ ಹಳೆ ಮೀನು ಮಾರುಕಟ್ಟೆ, ಕೆ.ಎಸ್.ಆರ್.ಟಿ.ಸಿ ಕ್ವಾಟ್ರಸ್ ಸೇರಿದಂತೆ ಹಲವಾರು ಕಡೆಗಳಲ್ಲಿ ಸೋಂಕು ಪತ್ತೆಯಾಗಿದೆ.
ತಾಲೂಕಿನ ಮುರೂರಿನ 37 ವರ್ಷದ ಮಹಿಳೆ, ಮಳವಳ್ಳಿಯ 41 ವರ್ಷದ ಪುರುಷ, 35 ವರ್ಷದ ಪುರುಷ, ಹಣ್ಣೇಮಠದ 32 ವರ್ಷದ ಪುರುಷ, 10 ವರ್ಷದ ಬಾಲಕ, ಶಶಿಹಿತ್ಲದ 53 ವರ್ಷದ ಪುರುಷ, ಉಪ್ಪಾರಕೇರಿಯ 60 ವರ್ಷದ ವೃದ್ಧ, 56 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ಪಟ್ಟಣ ವ್ಯಾಪ್ತಿಯ ಬಸ್ತಿಪೇಟೆಯ 52 ವರ್ಷದ ಪುರುಷ, 45 ವರ್ಷದ ಪುರುಷ, ಮೂರುಕಟ್ಟೆಯ 28 ವರ್ಷದ ಪುರುಷ, ಹಳೆ ಮೀನು ಮಾರುಕಟ್ಟೆಯ 53 ವರ್ಷದ ಮಹಿಳೆ, ಕೆ.ಎಸ್.ಆರ್.ಟಿ.ಸಿ ಕ್ವಾಟ್ರಸ್‌ನ 22 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ. ಇಂದು 13 ಹೊಸ ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ 1635 ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ 10 ಪಾಸಿಟಿವ್:
ಹೊನ್ನಾವರ: ತಾಲ್ಲೂಕಿನಲ್ಲಿ ಇಂದು 10 ಜನರಲ್ಲಿ ಕರೊನಾ ದೃಢಪಟ್ಟಿದೆ. ಹೊನ್ನಾವರ ಪಟ್ಟಣ ವ್ಯಾಪ್ತಿಯ ಮೂವರು ಮತ್ತು ಗ್ರಾಮೀಣ ಭಾಗದಲ್ಲಿ ಏಳು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಾಡಗೇರಿ-3, ಚಂದ್ರಣಿ-2, ದುಗ್ಗುರ-ನಗರಬಸ್ತಿಯಲ್ಲಿ ತಲಾ ಒಬ್ಬರಿಗೆ ಪಾಸಿಟಿವ್ ಬಂದಿದೆ.
ಹೊನ್ನಾವರ ಪಟ್ಟಣದ ಪ್ರಭಾತನಗರದ 68 ವರ್ಷದ ಪುರುಷ, ಪಟ್ಟಣದ ಬ್ಯಾಂಕ್ ಉದ್ಯೋಗಿ 33 ವರ್ಷದ ಪುರುಷ, ಪಟ್ಟಣದ 3 ವರ್ಷದ ಮಗುವಿಗೆ ಸೋಂಕು ದೃಢಪಟ್ಟಿದೆ. ಗ್ರಾಮೀಣ ಭಾಗವಾದ ಮಾಡಗೇರಿಯ 57 ವರ್ಷದ ಮಹಿಳೆ, 30 ವರ್ಷದ ಮಹಿಳೆ, 2 ವರ್ಷದ ಮಗು, ಚಂದ್ರಾಣಿಯ 50 ವರ್ಷದ ಮಹಿಳೆ, 20 ವರ್ಷದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ.
ದುಗ್ಗುರಿನ 25 ವರ್ಷದ ಯುವಕ, ನಗರಬಸ್ತಿಯ 71 ವರ್ಷದ ಪುರುಷ ಸೇರಿದಂತೆ ಇಂದು ಒಟ್ಟು 10 ಜನರಲ್ಲಿ ಕರೊನಾ ದೃಢಪಟ್ಟಿದೆ. ಇಂದು ತಾಲೂಕಾ ಆಸ್ಪತ್ರೆಯಿಂದ ಮೂವರು ಡಿಸ್ಚಾರ್ಜ್ ಆಗಿದ್ದಾರೆ. 57 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ವಿಸ್ಮಯ ನ್ಯೂಸ್, ದೀಪೇಶ್ ನಾಯ್ಕ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ
ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ
ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.