ಮಾಹಿತಿ
Trending

ಉತ್ತರಕನ್ನಡದ ಇಂದಿನ ಕರೊನಾ ವಿವರ ಇಲ್ಲಿದೆ

ಹೊನ್ನಾವರದಲ್ಲಿ ಹೆಚ್ಚಿದ ಸೋಂಕು
ಕುಮಟಾ ತಾಲೂಕಿನಲ್ಲಿ 9 ಪಾಸಿಟಿವ್
ಶಿರಸಿಯಲ್ಲಿಂದು 10 ಮಂದಿಗೆ ಕೊರೊನಾ
ಜಿಲ್ಲೆಯಲ್ಲಿ 79 ಮಂದಿಗೆ ಕರೊನಾ ದೃಢ

ಹೊನ್ನಾವರ: ನಿಯಂತ್ರಣದಲ್ಲಿ ಉತ್ತರಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎನ್ನುವ ಹೊಗಳಿಕೆಯ ಮಾತು ಸರ್ಕಾರದಿಂದ ಸಿಗುತ್ತಿದ್ದಂತೆಯೇ ಸ್ವಲ್ಪ ನಿರಾಳ ಭಾವ ಉಂಟಾಗಿತ್ತು. ಆದ್ರೆ. ಈ ಮಧ್ಯೆ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಮಾತ್ರ ಗುರುವಾರ ಒಂದೇ ದಿನ 19 ಕೆಸ್‌ಗಳು ಪತ್ತೆಯಾಗಿ, ಮತ್ತೆ ಆತಂಕ ಶುರುವಾಗಿದೆ.


ಗುರುವಾರ ತಾಲೂಕಿನಲ್ಲಿ 19 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹಡಿನಬಾಳದ 24 ವರ್ಷದ ಯುವಕ, 42 ವರ್ಷದ ಪುರುಷ, 52 ವರ್ಷದ ಮಹಿಳೆ, 37 ವರ್ಷದ ಮಹಿಳೆ, ಮಾಳಕೋಡದ 28 ವರ್ಷದ ಮಹಿಳೆ, 70 ವರ್ಷದ ಪುರುಷ, ಹಳದೀಪುರದ 18 ವರ್ಷದ ಯುವಕ, 50 ವರ್ಷದ ಪುರುಷ, 60 ವರ್ಷದ ಮಹಿಳೆ, ಮುಗ್ವಾ ಸುಬ್ರಹ್ಮಣ್ಯದ 48 ವರ್ಷದ ಮಹಿಳೆ ಮತ್ತು 19 ವರ್ಷದ ಯುವತಿಗೆ ಪಾಸಿಟಿವ್ ಬಂದಿದೆ.


ಮoಕಿಯ 27 ವರ್ಷದ ಯುವಕ, ಕೋರೆ ಖರ್ವಾದ 43 ವರ್ಷದ ಪುರುಷ, ಚಿತ್ತಾರ ವಡಗೇರಿಯ 61 ವರ್ಷದ ಪುರುಷ ಹಾಗೂ 56 ವರ್ಷದ ಮಹಿಳೆ, ಅನಂತವಾಡಿಯ 48 ವರ್ಷದ ಪುರುಷ, ಮಂಕಿ ದೇವರಗದ್ದೆಯ 46 ವರ್ಷದ ಪುರುಷ, ಗೇರಸೊಪ್ಪ ಬಂಗಾರಮಕ್ಕಿಯ 36 ವರ್ಷದ ಪುರುಷ, 33 ವರ್ಷದ ಯುವಕ ಸೇರಿದಂತೆ ಒಟ್ಟೂ 19 ಮಂದಿಯಲ್ಲಿ ಸೋಂಕಿರುವುದು ದೃಢವಾಗಿದೆ.

ಇಂದು ಎರಡು ಮಂದಿ ಗುಣಮುಖರಾಗಿದ್ದಾರೆ. ತಾಲೂಕಾಸ್ಪತ್ರೆಯಲ್ಲಿ ಇಬ್ಬರು ಹಾಗೂ ಉಳಿದ ಆಸ್ಪತ್ರೆಗಳಲ್ಲಿ 10 ಮಂದಿ ಮತ್ತು ಮನೆಯಲ್ಲಿ 34 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಮಟಾದಲ್ಲಿ ಏಳು ಪಾಸಿಟಿವ್:

ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 9 ಕರೋನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಹೆಗಡೆಯಲ್ಲಿ 4 ಪ್ರಕರಣ ಸೇರಿದಂತೆ ತಿಪ್ಪಸಗಿ, ತದಡಿ, ರುದ್ರಪಾದ್ ಭಾಗದಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.


ಹೆಗಡೆಯ 29 ವರ್ಷದ ಯುವಕ, 2 ವರ್ಷದ ಮಗು, 30 ವರ್ಷದ ಮಹಿಳೆ, 36 ವರ್ಷದ ಮಹಿಳೆ, ರುದ್ರಪಾದದ 15 ವರ್ಷದ ಬಾಲಕಿ, 14 ವರ್ಷದ ಬಾಲಕ, 12 ವರ್ಷದ ಬಾಲಕಿ, ತದಡಿಯ 26 ವರ್ಷದ ಯುವಕ, ತಿಪ್ಪಸಗಿಯ 39 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ. ಇಂದು 9 ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1710ಕ್ಕೆ ಏರಿಕೆಯಾಗಿದೆ.

ಯಲ್ಲಾಪುರದಲ್ಲಿಂದು ಒಬ್ಬರಿಗೆ ಕೊರೊನಾ ದೃಢ

ಯಲ್ಲಾಪುರ: ತಾಲೂಕಿನಲ್ಲಿ ಇಂದು ಓರ್ವರಿಗೆ ಕೊರೊನಾ ಧೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 41 ಕ್ಕೆ ಏರಿದೆ.
ನಾಳೆ ಯಲ್ಲಾಪುರದ ತಾಲೂಕಾ ಆಸ್ಪತ್ರೆ, ಬಸ್ ನಿಲ್ದಾಣ ಹಾಗೂ ಅರಬೈಲ್, ಗುಳ್ಳಾಪುರಗಳಲ್ಲಿ ತಪಾಸಣಾ ಶಿಬಿರ ನಡೆಯಲಿದೆ.

ಶಿರಸಿಯಲ್ಲಿಂದು 10 ಮಂದಿಗೆ ಸೋಂಕು

ಶಿರಸಿ: ತಾಲೂಕಿನಲ್ಲಿ ಇಂದು 10 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 11 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ನೀಲೆಕಣಿಯಲ್ಲಿ 1, ರಾಜೀವನಗರದಲ್ಲಿ 2, ಬನವಾಸಿಯಲ್ಲಿ 4, ಮಾರಿಕಾಂಬಾ ನಗರದಲ್ಲಿ 1, ವಿದ್ಯಾನಗರದಲ್ಲಿ 1, ಮರಾಠಿಕೊಪ್ಪದಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಉತ್ತರಕನ್ನಡದಲ್ಲಿ 79 ಪಾಸಿಟಿವ್

ಇದೇ ವೇಳೆ ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 79 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ12822ಕ್ಕೆ ಏರಿಕೆಯಾಗಿದೆ. 816 ಸಕ್ರೀಯ ಪ್ರಕರಣಗಳಿವೆ.


ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ ಹೊನ್ನಾವರ ಮತ್ತು ಯೋಗೇಶ್ ಮಡಿವಾಳ ಕುಮಟಾ

Back to top button