ಮಾಹಿತಿ
Trending

ತಮಸೋಮಾಜ್ಯೋತಿರ್ಗಮಯ

ದೀಪವೊಂದು ಹಣತೆಯಲ್ಲಿ ಬಂದುಉರಿದುಅoಧಕಾರವನ್ನು ಹೋಗಲಾಡಿಸಿದುವುದರ ಜೊತೆಜೊತೆಗೆ ಹಣತೆಯÀನ್ನೂ ಪೂಜನೀಯವಾಗಿ ಮಾಡುತ್ತದೆ. ದೀಪ ಮತ್ತು ಹಣತೆಯ ಸಂಯೋಗವನ್ನು ನಮ್ಮ ಪೂರ್ವಜರು“ದೀಪಾವಳಿ”ಎಂಬ ಹೆಸರಿನಿಂದದೇಶದಾದAತ್ಯದೊಡ್ಡ ಹಬ್ಬವಾಗಿಆಚರಣೆಗೆತಂದರು.
ದೀಪಾವಳಿಯು ಮಥುರಾದಿಂದ ಮಣಿಪುgದÀತನಕ, ಕನ್ಯಾಕುಮಾರಿಯಿಂದ ಕಾಶ್ಮೀರದ ತನಕಎಲ್ಲರೂಒಟ್ಟಾಗಿ ಸಡಗರ-ಸಂಭ್ರಮದಿAದಆಚರಿಸುವಅತ್ಯAತದೊಡ್ಡ ಹಬ್ಬವಾಗಿದೆ.ದೀಪಗಳ ಅವಲಿ(ಸಾಲು)ದೀಪಾವಳಿ. ಮನೆ-ಮಂದಿರಗಳಲ್ಲಿ ಎಲ್ಲೆಲ್ಲೂಅಪಮೃತ್ಯುವಿನ ನಿವಾರಣೆಗೆ, ಜೀವನದಲ್ಲಿ ಸಕಲ ಸಂಪತ್ತು ನೆಲೆಗೊಳಿಸಲು, ಒಳಿತಾಗಲು ದೀಪಗಳ ಸಾಲು ರಾರಾಜಿಸಬೇಕು.


ನಮ್ಮ ಸಂತ-ಮಹಾAತ ಋಷಿಗಳು ಪರ್ವ-ಉತ್ಸವದ ಮೂಲಕ ಶುಭವಾದ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಎಲ್ಲಾ ಧರ್ಮಶಾಸ್ತçಗಳಲ್ಲೂ ಆರೋಗ್ಯ–ಧನ ಸಮೃದ್ಧಿಗಾಗಿ, ನೆಮ್ಮದಿಯ ಬದುಕಿಗಾಗಿ ಏನು ಮಾಡಬೇಕೆಂದು ಮಾರ್ಗ ಸೂಚಿಸಿದೆ. ಈ ಹಬ್ಬ-ಉತ್ಸವಗಳ ಹಿನ್ನೆಲೆಯಲ್ಲಿ ಮಾನವಬದುಕಿನ ಸಂಪೂರ್ಣಜೀವನದರ್ಶನವೇಅಡಗಿದೆ.

ನರಕ ಚತುರ್ದಶಿ:-

ಭೂದೇವಿಯ ಪುತ್ರನಾದ ನರಕಾಸುರನು ಬ್ರಹ್ಮನನ್ನು ತಪಸ್ಸಿನಿಂದ ಮೆಚ್ಚಿಸಿ, ಅನುಗ್ರಹ ಪಡೆದುದೇವಾಸುರರನ್ನು ಮಣಿಸಿದ್ದ. ಭೂಲೋಕದ ರಾಜರುಗಳನ್ನು ಜಯಿಸಿ ಅವರ ಹದಿನಾರು ಸಾವಿರಕನ್ಯೆಯರನ್ನುತನ್ನ ವಶದಲ್ಲಿಇಟ್ಟುಕೊಂಡಿದ್ದ. ಕೃಷ್ಣ, ದೇವತೆಗಳ ಪ್ರಾರ್ಥನೆಯ ಮೇರೆಗೆ ಆಶ್ವೀಜ ಮಾಸದಕೃಷ್ಣಪಕ್ಷದ ಚತುರ್ದಶಿಯಂದು ನಡುರಾತ್ರಿ ನರಕಾಸುರನನ್ನು ಸಂಹರಿಸಿದ. ನರಕಾಸುರನತಾಯಿ ಭೂದೇವಿಯಇಚ್ಛೆಯಂತೆ ವರುಷದಲ್ಲಿಒಮ್ಮೆಆತನ ಸ್ಮರಿಸುವರೀತಿಯಲ್ಲಿ ಕೃಷ್ಣನು ಈ ಹಬ್ಬವನ್ನು ನೆಲೆಗೊಳಿಸಿದ. ನರಕಾಸುರನ ಸಂಹರಿಸಿದ ದಿನವೇ ನರಕಚತುರ್ದಶಿ.


ಈ ದಿನ ಕುರಿತುಧರ್ಮಸಿಂಧುವಿನಲ್ಲಿ –
“ಆಶ್ವೀನಕೃಷ್ಣಪಕ್ಷಚತುರ್ದಶ್ಯಾಂಚAದ್ರೋದಯವ್ಯಾಪಿನ್ಯಾAನರಕಭೀರುಭಿ: ತಿಲತೈಲೇನಅಭ್ಯಂಗಸ್ನಾನAಕಾರ್ಯA, ಅಭ್ಯಂಗಸ್ನಾನೋತ್ತರAತಿಲಕಾದಿಕೃತ್ವಾಕಾರ್ತಿಕಸ್ನಾನAಕಾರ್ಯA, ಕಾರ್ತಿಕಸ್ನಾನೋತ್ತರಂ, ಯಮತರ್ಪಣಂ, ಕಾರ್ಯಂ”


ಅಂದರೆಚAದ್ರೋದಯದವರೆಗೆತಿಥಿ ವ್ಯಾಪ್ತಿಇರುವ ಆಶ್ವೀಜ ಕೃಷ್ಭ ಚತುರ್ದಶಿಯಂದು, ಎಳ್ಳೆಣ್ಣೆಯಿಂದ ಅಭ್ಯಂಗಸ್ನಾನ ಮಾಡಿಕಾರ್ತಿಕ ಸ್ನಾನ, ಯಮ ತರ್ಪಣಗಳನ್ನು ಕೊಡಬೇಕು.
ಈ ನರಕ ಚತುರ್ದಶಿ ದಿನದಂದು ಸೂರ್ಯೋದಯಕ್ಕೆ ಮುಂಚೆಯೇ ಎಳ್ಳೆಣ್ಣೆಯನ್ನು ಹಚ್ಚಿಕೊಂಡು ಮನೆಯವರೆಲ್ಲಾಅಭ್ಯಂಗ ಸ್ನಾನ ಮಾಡುವರು. ಯಮತರ್ಪಣಾದಿಗಳ ನಂತರ, ದೇವರನ್ನು ಪೂಜಿಸಿ, ಮಂಗಳ ಆರತಿಗಳನ್ನು ಬೆಳಗಿದ ಮೇಲೆ, ಮನೆಯಗಂಡಸರಿಗೆ, ಮುತ್ತೆöÊದೆ-ಕುಮಾರಿಯರುಆರತಿ ಬೆಳಗುವರು. ಹಬ್ಬಕ್ಕೋಸ್ಕರ ಸಿದ್ಧಗೊಳಿಸಿದ ಸಿಹಿಕಡಬು ಕಜ್ಜಾಯ ಒಳಗೊಂಡ ಭೋಜನ ಸೇವಿಸಿ, ಬಂಧುಬಾAಧವರೊAದಿಗೆ ಸೇವಿಸುತ್ತಾ, ಹೊಸವಸ್ತçಧರಿಸುತ್ತಾ, ಹಬ್ಬದ ಸಂಭ್ರಮವನ್ನುತಾವೂ ಅನುಭವಿಸಿ, ಇನ್ನೊಬ್ಬರೂ ಸಂಭ್ರಮಿಸಿದ್ದನ್ನು ಕಂಡು ಸಂತೋಷಿಸುವರು.


ದೀಪಾವಳಿ ಅಮವಾಸ್ಯೆ-ಲಕ್ಷಿö್ಮÃ ಪೂಜೆ:-
ಬಲಿರಾಜ್ಯೇ ದೀಪದಾನಾತ್ ಸದಾ ಲಕ್ಷಿö್ಮÃ ಸ್ಥಿರಾ ಭವೇತ್|
ದೀಪೈಃ ನೀರಾಜನಾತ್‌ಅತ್ರ ಸೈಷಾ ದೀಪಾವಲೀ ಸ್ಮೃತಾ||

ಸರ್ವಸಂಪತ್ ಪ್ರದಾಯನಿಯಾದ ಮಹಾಲಕ್ಷಿö್ಮÃಜ್ಯೋತಿಯ ಸ್ವರೂಪಿಣೆ, ದೀಪಾವಳಿಯಿಂದು ಲಕ್ಷಿö್ಮÃಯನ್ನು ಪೂಜಿಸಿದರೆ ಸಂಪತ್ತು ಸ್ಥಿರವಾಗುವುದು. ವರ್ಧಿಸುವುದು. ಅದಕ್ಕಾಗಿ ದೀಪಾವಳಿ ಅಮವಾಸ್ಯೆಯಂದು ಲಕ್ಷಿö್ಮÃ ಪೂಜೆಗೆ ಪ್ರಾಶಸ್ತö್ಯ.
ಈ ದಿನ ಅಮಾವಾಸ್ಯೆಯ ಸಾಯಂಕಾಲ ದೀಪ ಬೆಳಗಿಸಿ, ತಳಿರುತೋರಣಗಳಿಂದ ಲಕ್ಷಿö್ಮÃಯನ್ನು ಅಲಂಕರಿಸಿ ಪೂಜಿಸಬೇಕು. ವಿಶೇಷವಾಗಿ ಗ್ರಹಸ್ಥರು, ವ್ಯಾಪಾರಸ್ಥರು ಮುಂತಾದವರು ಲಕ್ಷಿö್ಮÃಕೃಪಾಕಟಾಕ್ಷ ಬಯಸಿ ಪೂಜನೆ-ವಂದನೆಗಳನ್ನು ಸಲ್ಲಿಸುವರು.


ದೀಪಾವಳಿ ಅಮಾವಾಸ್ಯೆಯ ದಿನ ಸಿದ್ಧಿಬುದ್ಧಿದಾಯಕ ಗಣಪತಿಯೊಂದಿಗಿನ ಲಕ್ಷಿö್ಮÃಯನ್ನು ಪೂಜಿಸಲಾಗುವುದು. ಇದರ ಮರ್ಮ ಸಂದೇಶವೇನಿರಬಹುದು? ಹೀಗೊಂದುಕಥೆ ಪ್ರಚಲಿತವಾಗಿದೆ.
ಒಬ್ಬರಾಜತನ್ನರಾಜ್ಯದಲ್ಲಿ ಸಂಚರಿಸುವ ಸಂದರ್ಭದಲ್ಲಿಒಬ್ಬಕಟ್ಟಿಗೆ ಮಾರಿ ಪರಿಶ್ರಮದಿಂದ ಬದುಕು ಸಾಗಿಸುವವ ಕಣ್ಣಿಗೆ ಬಿದ್ದ. ರಾಜನಿಗೆಆತನ ಮೇಲೆ ಕರುಣೆ ಹುಟ್ಟಿ, ಆತನ ಪರಿಶ್ರಮಕ್ಕೆ ಸಂತೋಷಗೊAಡು, ಆ ಕಟ್ಟಿಗೆ ಮಾರಿಜೀವಿಸುವ ಕಟ್ಟಿಗೆಯವನಿಗೆಒಂದು ಶ್ರೀಗಂಧವನವನ್ನೇ ದಾನವಾಗಿ ನೀಡಿದ. ಮರಕಡಿದು, ಕಟ್ಟಿಗೆ ಮಾಡಿ, ಮಾರುವಕಟ್ಟಿಗೆಯವನಿಗೆರಾಜತನಗೆದಾನವಾಗಿ ನೀಡಿದ ಶ್ರೀಗಂಧ-ವನದ ಮಹತ್ವ ಹಾಗೂ ಮೌಲ್ಯದ ತಿಳುವಳಿಕೆ ಇರಲಿಲ್ಲ. ಆತ ಶ್ರೀಗಂಧದ ಮರಕಡಿದುಕಟ್ಟಿಗೆ ಮಾಡಿ, ಮಾರಿದ, ಕೆಲವನ್ನುತನ್ನ ದಿನನಿತ್ಯದಅಡುಗೆ ಮಾಡಲು, ಸ್ನಾನದ ನೀರು ಕಾಯಿಸಲು ಬಳಸತೊಡಗಿದ. ರಾಜನಿಗೆ ಈ ವಿಷಯತನ್ನಗುಪ್ತಚರರ ಮೂಲಕ ತಿಳಿಯಿತು. ಹಣದ ಸಂಪತ್ತಿನ ಸದುಪಯೋಗಎಲ್ಲರೂ ತಿಳಿದಿಲ್ಲ. ಹಣದ ಸದುಪಯೋಗ ತಿಳಿಯಲು ಬುದ್ಧಿ ಅಥವಾಜ್ಞಾನದಅವಶ್ಯಕತೆಇದೆ.

ಸಂಪತ್‌ಪ್ರದಾಯಿನಿ ಲಕ್ಷಿö್ಮÃಯೊಂದಿಗೆ, ಬುದ್ಧಿ ನೀಡುವಗಣಪತಿಯನ್ನು ಪೂಜಿಸುವಗೂಡಾರ್ಥವಿದು. ಧನದ ಸದ್ವಿನಿಯೋಗದಅರಿವುಆಗದೇಇದ್ದರೆಧನ ವ್ಯರ್ಥವಷ್ಟೇ.
ಈ ದಿನ ಸಾಯಂಕಾಲ ನಾವು ಗಳಿಸಿದ ಎಲ್ಲ ಸಂಪತ್ತುಗಳನ್ನು ಅದು ವಾಹನಗಳಾಗಿರಬಹುದು, ಒಡವೆಆಭರಣ ಹಣ ವಸ್ತುಗಳೆಲ್ಲವನ್ನು ಎದುರಿಗೆಇಟ್ಟು ಪೂಜಿಸಬೇಕೆಂಬ ನಿಯಮವಿದೆ. ಈ ಎಲ್ಲಾ ಸಂಪತ್ತುಗಳ ಸಮೃದ್ಧಿಯಅನುಭವವನ್ನು ನಾವು ಹೊಂದಬೇಕು. ಇಲ್ಲವಾದದ್ದರಕುರಿತು ಯೋಚಿಸಿದರೆ ಆ ಕಡೆಗೆ ಹೆಚ್ಚಿನ ಗಮನ ಕೇಂದ್ರಿಕೃತವಾಗುವುದು. ನಮ್ಮ ಲಕ್ಷö್ಯ ನಮ್ಮ ಸಮೃದ್ಧಿಯ ಗಮನಕ್ಕೆ ಬರುವುದು ಎಂಬ ಉದ್ದೇಶ ಈ ಪದ್ಧತಿಯ ಹಿಂದಿನ ಮರ್ಮವಾಗಿದೆ. ಈ ಸಂಸಾರದಲ್ಲಿ ನಮಗೆ ಎನೆಲ್ಲಾದೊರಕಿದೆಯೋತಂದೆ-ತಾಯಿ, ಪತಿ-ಪತ್ನಿ,ಮಕ್ಕಳು, ಮಿತ್ರರು-ಬಂಧು-ಬಾAಧವರು ಮುಂತಾದಜನರು, ಮನೆ ವಾಹನ ಮುಂತಾದ ಭೋಗದ ವಸ್ತುಗಳು ಇವುಗಳೆಲ್ಲಾ ನಮಗೆ ನಮ್ಮಜೀವನದಲ್ಲಿ ದೊರಕಿದವುಗಳು,ಲಾಭವಾದವುಗಳು.ನಮಗೆ ಲಾಭವಾದ ಇವುಗಳೆಲ್ಲಾ ನಮ್ಮಲ್ಲೇಇರಬೇಕುಎಂದಾದರೆ,ಶುಭವಾಗಬೇಕು.ಅದಕ್ಕೋಸ್ಕರವೇ ಶುಭ-ಲಾಭಎಂದು ಲಕ್ಷಿö್ಮÃಪೂಜೆಯಂದು ಬರೆದು ಪೂಜಿಸುವುದು.ದೀಪ ಬೆಳಗಿಸಿ, ಪಟಾಕಿ ಸಿಡಿಸಿ ಧಾರ್ಮಿಕ-ಸಾಮಾಜಿಕವಾಗಿ ಈ ದಿನ ಮಹತ್ವ ಪಡೆದಿದೆ.

ಬಲಿಪಾಡ್ಯ–ಗೋಪೂಜೆ :-


ಪ್ರಹ್ಲಾದನ ಮೊಮ್ಮಗ, ಬಲಿಚಕ್ರವರ್ತಿತಾನುಕೈಗೊಂಡಅಶ್ವಮೇಧಯಾಗದಲ್ಲಿ ಬಂದವರಿಗೆ ಕೇಳಿದ್ದನ್ನು ಕೊಡುವ ಸಂಕಲ್ಪ ಮಾಡಿದ್ದ. ಮಹಾವಿಷ್ಣು ವಾಮನ ರೂಪದಿಂದಅಲ್ಲಿಗೆ ಬಂದು ಬಲಿಯಲ್ಲಿ ಮೂರು ಹೆಜ್ಜೆಗಳನ್ನು ಬೇಡಿದ. ಬಲಿ ಅದಕ್ಕೆಒಪ್ಪಿಗೆ ನೀಡಿದ. ಭಗವಂತಒAದು ಹೆಜ್ಜೆಯಿಂದ ಆಕಾಶ, ಇನ್ನೊಂದು ಹೆಜ್ಜೆಯಿಂದ ಭೂಮಿ ಹಾಗೂ ಮೂರನೇ ಹೆಜ್ಜೆಯನ್ನು ಬಲಿಯತಲೆಯ ಮೇಲೆ ಇಟ್ಟು ಪಾತಾಳಕ್ಕೆ ಅಟ್ಟಿದ. ಆತನದಾನÀ ಶೂರತ್ವಕ್ಕೆ ಮೆಚ್ಚಿ‘ಬೇಕಾದವರ ಕೆಳು’ಎಂದಾಗಬಲಿವರ್ಷದಲ್ಲಿಮೂರುದಿನನನ್ನರಾಜ್ಯವನ್ನುನೋಡುವ ಅವಕಾಶಕೊಡು, ಈ ದಿನಗಳಲ್ಲಿಯಾರುದೀಪಬೆಳಗುವರೋಅವರಮನೆಯಲ್ಲಿಲಕ್ಷಿö್ಮÃಸ್ಥಿರವಾಗಿ ನೆಲೆನಿಲ್ಲಲಿ’ಎಂದುಬೇಡಿಕೊAಡ ಪ್ರಕಾರ ವಿಷ್ಣು ‘ತಥಾಸ್ತು’ಎಂದ.


ಮಹಾವ್ಯಕ್ತಿತ್ವಶಾಲಿ, ಪ್ರಜಾಹಿತವನ್ನೇ ಬಯಸುವವ ಬಲಿಯ ನೆನೆಪಿಗಾಗಿ ಬಲಿಪಾಡ್ಯದತನಕ ಮೂರು ದಿನ ಬಲೀಂದ್ರನನ್ನು ಪೂಜಿಸುವ ಪದ್ಧತಿ ಬೆಳದು ಬಂದಿದೆ. ಇಷ್ಟ ನೈವೇಧ್ಯ ಅರ್ಪಿಸಿ, ಹಾಲು-ಹೈನುಗಳನ್ನು ನೀಡುವರೈತರ ಕೃಷಿ ಬದುಕಿಗೆಆಧಾರವಾದಗೋವನ್ನೂ ಪೂಜಿಸಿ,ಬಲಿಯನ್ನು-
ಬಲಿರಾಜನಮಸ್ತುಭ್ಯಂ, ವಿರೋಚನ ಸುತ: ಪ್ರಭೋ|
ಭವಿಷ್ಯೇಂದ್ರ ಸುರಾರಾತೇ, ಪೂಜೇಯಂ ಪ್ರತಿಗೃಹ್ಯತಾಮ್||
ಎಂದು ಪ್ರಾರ್ಥಿಸಿ, ಬಂಧು-ಬಾAಧವರೊAದಿಗೆ ಭೋಜನ ಸೇವಿಸಿ ಹೊಸ ಬಟ್ಟೆತೊಟ್ಟು ಸಂಭ್ರಮಿಸುವನ್ನುಕಾಣುತ್ತೇವೆ.


ಮರ್ಯಾದಾಪುರುಷೋತ್ತಮ ಪ್ರಭು ಶ್ರೀರಾಮ ರಾವಣನನ್ನು ಸಂಹರಿಸಿ, ಅಯೋಧ್ಯೆಗೆ ಮರಳಿ ಪಟ್ಟಾಭಿಷೇಕಗೊಂಡ ದಿನ. ಪಾಂಡವರುಅಜ್ಞಾತವಾಸ ಕಳೆದು ವನವಾಸ ಮುಗಿಸಿದ ದಿನ. ಕೃಷ್ಣ ಭಗವಾನ್‌ಗೋವರ್ಧನ ಪರ್ವತಎತ್ತಿ ಹಿಡಿದ ದಿನ, ಬಲಿ ಪಾಡ್ಯ. ಗೋಶಾಲೆಯನ್ನು ಗೋವುಗಳನ್ನು ಅಲಂಕರಿಸಿ, ಗೋವುಗಳಿಗೆ ಗೋಗ್ರಾಸ, ಇಷ್ಟ ತಿನಿಸುಗಳನ್ನು ನೀಡಿ, ಗೋವುಗಳನ್ನು ಬೆಚ್ಚಿಸಿ ಬಿಡುವುದನ್ನುಕಾಣುತ್ತೇವೆ. ಕೆಲವು ಕಡೆದ್ಯೂತ(ಜೂಜು)ವನ್ನುಆಡುವುದನ್ನುಕಾಣುತ್ತೇವೆ. ಅಳಿಯಂದಿರು ಪತ್ನಿ ಸಹಿತವಾಗಿಅತ್ತೆ-ಮಾವಂದಿರಿಗೆ, ಹಿರಿಯರಿಗೆಎರಡುತೆಂಗಿನ ಕಾಯಿಗಳನ್ನಿಟ್ಟು ವಂದಿಸಿ, ಅವರ ಆಶೀರ್ವಾದವನ್ನು ಪಡೆಯುವ ಹಬ್ಬಗಾಣಿಕೆಅರ್ಪಿಸುವುದು ಈ ಹಬ್ಬದ ವಿಶೇಷವಾಗಿದೆ.


ಗುಡಿಸಿನಲ್ಲಿ ವಾಸಿಸುವನಿಂದ ಅರಮನೆಯಲ್ಲಿ ವಾಸಿಸುವವನ ತನಕ ಬೆಳಗುವ ದೀಪ, ಅದೇ ದೀಪವೆ.ಅದರ ಪ್ರಕಾಶವೂಒಂದೇ.ಅದರಿAದ ಪಡೆಯುವ ಫಲವೂ ಪ್ರಾಯಃ ಭಿನ್ನ ಭಿನ್ನವಾಗಿರುವುದಿಲ್ಲ,ಒಂದೇಆಗಿರುವುದು.ಎಲ್ಲರೂಒಟ್ಟಾಗಿ ಬೆಳಗುವ ದೀಪಗಳ ಮಾಲೆಯೇ ದೀಪಾವಳಿ.ಕೆಟ್ಟದರ ವಿರುದ್ಧ ಒಳ್ಳೆಯ, ಅಂಧಕಾರದ ವಿರುದ್ಧ ಪ್ರಕಾಶದ, ಅಜ್ಞಾನದ ವಿರುದ್ಧಜ್ಞಾನದ ವಿಜಯದ ಪ್ರತೀಕವೇ ದೀಪಾವಳಿ. ಜೀವನದ ಪರಮ ಸತ್ಯದ ನೆಮ್ಮದಿಯ ಬದುಕಿನ ಬೆಳಕನ್ನು ಕಂಡುಕೊಳ್ಳುವ ದಿನ. ಈ ಮೂಲಕ ನಮ್ಮ ಬದುಕಿಗೆ ಇಷ್ಟ ಸಮೃದ್ಧಿಯನ್ನು ನೀಡಿದ ಭಗವಂತನಿಗೆಕೃತಜ್ಞತೆ ಸಲ್ಲಿಸುವ ಮಹಾಪರ್ವ.

ಶ್ರೀ ಗಣೇಶ ಭಟ್ಟ ಸಂಸ್ಕೃತಉಪನ್ಯಾಸಕರು
ನೆಲ್ಲಿಕೇರಿ, ಕುಮಟಾ

Back to top button