ಅಂಕೋಲಾ : ವಂದಿಗೆಯ ಅಮಿತ ನಾರಾಯಣ ನಾಯಕ (38), ಭಾನುವಾರ ಅಕಾಲಿಕ ನಿಧನ ಹೊಂದಿ ದ್ದಾರೆ. ಅನಾರೋಗ್ಯದಿಂದಾಗಿ ಕಳೆದ ತಿಂಗಳು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಅಂಕೋಲಾದ ಹೆಸರಾಂತ ವ್ಯಕ್ತಿಯಾಗಿದ್ದ ದಿ. ನಾರಾಯಣ ನಾಯಕ (ಮಿಲ್ ನಾರಾಂiÀಣಣ್ಣ)ರ ಪುತ್ರ ನಾಗಿದ್ದ ಅಮಿತ ನಾಯಕ ಯುವ ನಾಯಕನಾಗಿ ಗುರುತಿಸಿಕೊಳ್ಳುತ್ತಿದ್ದರು. ಬ್ಯ್ಲೂಬರ್ಡ್ ತಂಡದ ನಾಯಕನಾಗಿ ಜಿಲ್ಲೆಯ ಹಲವಡೆ ಕ್ರಿಕೆಟ್ ತಂಡ ಮುನ್ನಡೆಸಿದ್ದ ಈ ಕ್ರೀಡಾ ಪ್ರತಿಭೆ, ಸಾಮಾಜಿಕ ಕಳೆಕ ಳೆಯಿಂದ ನಾವಿಕ ಎನ್ನುವ ಸಂಘಟನೆಯನ್ನು ಹುಟ್ಟು ಹಾಕಿದ್ದರು. ಎಳೆಯ ವಯಸ್ಸಿನಲ್ಲಿಯೇ ರಾಜಕೀಯದತ್ತಲ್ಲೂ ಒಲವು ತೋರಿಸಿದ್ದರಾದರೂ ಎಲ್ಲವೂ ಅಂದು ಕೊಂಡಂತೆ ನಡೆಯದೇ ಬದಲಾದ ಪರಿಸ್ಥಿ ತಿಯಲ್ಲಿ ತನ್ನ ತಂದೆಯ ಉದ್ದಿಮೆ ಮತ್ತು ವ್ಯವಹಾರ ಮುನ್ನಡೆಸುತ್ತಾ ನಂತರ ರಾಜಧಾನಿ ಬೆಂಗ ಳೂರಿ ನಲ್ಲಿ ನೆಲೆಸಿದ್ದರು. ಪುನಃ ಊರಿಗೆ ಬಂದ ಅವರು ಹಲವು ಕಾಲದ ನಂತರ ಅನಾರೋಗ್ಯಕ್ಕೆ ಒಳಗಾಗಿ ದ್ದರು ಎನ್ನಲಾಗಿದೆ.
ಯುವ ನಾಯಕನಾಗಿ, ಸಂಘಟನಾ ಚತುರನಾಗಿ ಬಾಳಿ ಬೆಳಗಬೇಕಿದ್ದ ಈತನ ದುರಾದೃಷ್ಟವೋ ಎನ್ನು ವಂತೆ ವಿಧಿಯಾಟದ ಮುಂದೆ ಕುಟುಂಬಸ್ಥರು, ಆಪ್ತರು ದುಃಖ ಪಡುವಂತಾಗಿದೆ. ತಾಯಿ ಪ್ರೇಮಾ, ಸಹೋದರಿ ನಮಿತಾ ಮತ್ತು ಅಪಾರ ಬಂಧು-ಬಳಗ ತೊರೆದಿರುವ ಅಮಿತ ನಾಯಕ ವಿಧಿವಶನಾ ಗಿದ್ದಾನೆ. ಮೃತನ ಅಂತ್ಯ ಕ್ರಿಯೆಯನ್ನು ವಂದಿಗೆಯ ಸ್ಮಶಾನ ಭೂಮಿಯಲ್ಲಿ ಸೋಮವಾರ ನಡೆಸಲಾ ಯಿತು. ಊರ ನಾಗರಿಕರು, ಸಂಬಂಧಿಗಳು, ಗೆಳೆಯರ ಬಳಗದವರು ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ