ಉತ್ತರಕನ್ನಡದಲ್ಲಿ 23 ಕೇಸ್:14 ಮಂದಿ ಗುಣಮುಖ

ಕಾರವಾರ: ಉತ್ತರಕನ್ನಡದಲ್ಲಿ‌ ಇಂದು 23 ಕರೊನಾ‌‌ ಕೇಸ್ ದಾಖಲಾಗಿದೆ. ಇದೇ ವೇಳೆ ಇಂದು 14 ಮಂದಿ‌ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.170 ಸಕ್ರೀಯ ಕೇಸ್ ಗಳಿವೆ.ಕಾರವಾರ 7, ಯಲ್ಲಾಪುರ 3, ಭಟ್ಕಳ ಒಂದು ಕೇಸ್ ಕಂಡುಬಂದಿದೆ.

ಕುಮಟಾದಲ್ಲಿ‌ ಇಂದು‌ ಎರಡು‌‌ ಕೇಸ್

ಕುಮಟಾ: ತಾಲೂಕಿನಲ್ಲಿ ಇಂದು 2 ಕರೊನಾ ಸೋಂಕಿತ ಪ್ರಕರಣಗಳು ದಾಖಲಾಗಿವೆ. ತಾಲೂಕಿನ ಮಾಸೂರಿನಲ್ಲಿಯೇ ಈ 2 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಮಾಸೂರಿನ 22 ವರ್ಷದ ಯುವತಿ ಹಾಗೂ 33 ವರ್ಷದ ಪುರುಷನಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ. ಇಂದು 2 ಹೊಸ ಕರೊನಾ ಪ್ರಕರಣಗಳು ದಾಖಲಾದ ಬೆನ್ನಲ್ಲೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1948 ಕ್ಕೆ ಏರಿಕೆಯಾಗಿದೆ.

ಹೊನ್ನಾವರದಲ್ಲಿ ಮೂರು ಪಾಸಿಟಿವ್

ಹೊನ್ನಾವರ: ತಾಲೂಕಿನಲ್ಲಿಯೂ ಸಹ ಇಂದು ಮೂವರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಹೊನ್ನಾವರ ತಾಲೂಕಿನ ಗ್ರಾಮೀಣ ಭಾಗದಲ್ಲೆ ಮೂರು ಜನರಲ್ಲಿ ಇಂದು ಪಾಸಿಟಿವ್ ಪತ್ತೆಯಾಗಿದೆ. ತಾಲೂಕಿನ ಖರ್ವಾದಲ್ಲಿ 2, ಆಡುಕಳದಲ್ಲಿ 1 ಪ್ರಕರಣ ಪತ್ತೆಯಾಗಿದೆ. ಖರ್ವಾದ 80 ವರ್ಷದ ಮಹಿಳೆ, 48 ವರ್ಷದ ಮಹಿಳೆ, ಆಡುಕಳದ 21 ವರ್ಷದ ಯುವತಿ ಸೇರಿ ಒಟ್ಟೂ ಮೂವರಲ್ಲಿ ಸೋಂಕು ದೃಢಪಟ್ಟಿದೆ.

ಅಂಕೋಲಾದಲ್ಲಿಂದು ಕೋವಿಡ್ ಕೇಸ್ 6 : ಗುಣಮುಖ 2

ಅಂಕೋಲಾ : ತಾಲೂಕಿನಲ್ಲಿ ಸೋಮವಾರ 6 ಹೊಸ ಕೋವಿಡ್ ಕೇಸ್‍ಗಳು ಧೃಡಪಟ್ಟಿದ್ದು, ಭಾನುವಾರ ತಾಲೂಕಾ ಆಸ್ಪತ್ರೆಯಲ್ಲಿ ನಡೆಸಲಾದ ರ್ಯಾಟ ಪರೀಕ್ಷೆಯಲ್ಲಿ ಪಟ್ಟಣದ ಮಠಾಕೇರಿ ವ್ಯಾಪ್ತಿಯ 6 ಜನರಲ್ಲಿ ಸೋಂಕು ಲಕ್ಷಣಗಳು ಪತ್ತೆಯಾಗಿತ್ತು ಎನ್ನಲಾಗಿದೆ. ಸೋಂಕು ಮುಕ್ತರಾದ ಇಬ್ಬರನ್ನು ಬಿಡುಗಡೆಗೊಳಿ ಸಲಾ ಗಿದ್ದು, ಹೋಂ ಐಸೋಲೇಶನಲ್ಲಿರುವ 22 ಮಂದಿ ಸಹಿತ ಒಟ್ಟೂ 23 ಪ್ರಕರಣಗಳು ಸಕ್ರೀಯವಾಗಿದೆ. 15 ರ್ಯಾಟ ಮತ್ತು 120 ಆರ್‍ಟಿಪಿಸಿಆರ್ ಸೇರಿ ಒಟ್ಟೂ 135 ಸ್ವ್ಯಾಬ್ ಟೆಸ್ಟ್ ನಡೆಸಲಾಗಿದೆ.

ವಿಸ್ಮಯ ನ್ಯೂಸ್ ದಿಪೇಶ ನಾಯ್ಕ, ಕುಮಟಾ ಮತ್ತು ಶ್ರೀಧರ ನಾಯ್ಕ ಹೊನ್ನಾವರ, ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version