Follow Us On

WhatsApp Group
Uttara Kannada
Trending

ಟಾಯರ್ ಬ್ಲಾಸ್ಟ್ ಆಗಿ ರಿಪೇರಿ ಹಂತದಲ್ಲಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು

  • ರಸ್ತೆ ಅಪಘಾತ, ಆತ್ಮಹತ್ಯೆ ಸೇರಿ ಪ್ರತ್ಯೇಕ ಪ್ರಕರಣ : 3 ಸಾವು
  • ಅಪರಿಚಿತ ಮೃತ ಪ್ರಯಾಣಿಕನ ಪತ್ತೆ ಹಚ್ಚಲು ಸಾಕ್ಷಿಯಾದೀತೇ ಹಚ್ಚೆ ಗುರುತು
  • ಕೋವಿಡ್ ಕೇಸ್ 3 : ಗುಣಮುಖ 5

ಅಂಕೋಲಾ : ತಾಲೂಕಿನಲ್ಲಿಂದು ರಸ್ತೆ ಅಪಘಾತ, ಆತ್ಮಹತ್ಯೆ ಸೇರಿದಂತೆ ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 3 ಸಾವು ಸಂಭವಿಸಿದೆ. ನಸುಕಿನ ವೇಳೆ ಬೆಂಗಳೂರಿನಿಂದ ಗೋವಾಕ್ಕೆ ಸಂಚರಿಸುತ್ತಿದ್ದ ಖಾಸಗಿ ಬಸ್ಸ್, ದಾರಿ ಮಧ್ಯೆ ಮಾಸ್ತಿಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿ, ಎದುರುಗಡೆ ಟಾಯರ್ ಬ್ಲಾಸ್ಟ್ ಆಗಿ ರಿಪೇರಿ ಹಂತದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒರ್ವ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದೆ. 9 ಪ್ರಯಾಣಿಕರು ಚಿಕ್ಕಪುಟ್ಟ ಗಾಯಾಳುಗಳಾಗಿದ್ದಾರೆ.
ಮೃತ ಪ್ರಯಾಣಿಕನ ವಿವರ ಇವರೆಗೂ ಪತ್ತೆಯಾಗಿಲ್ಲ ಎನ್ನಲಾಗಿದ್ದು ಆತನು ಭುಜದ ಮೇಲೆ ಹಚ್ಚೆ ಗುರುತಿದೆ.

ಆತ್ಮಹತ್ಯೆ? : ಅವರ್ಸಾದಲ್ಲಿ ಒರ್ವ ವ್ಯಕ್ತಿ ಅದ್ಯಾವುದೋ ಕಾರಣಗಳಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪೊಲೀಸ್ ಪ್ರಕರಣ ದಾಖಲಾಗಿದೆ. ಪ್ರತ್ಯೇಕ ಇನ್ನೊಂದು ಪ್ರಕರಣದಲ್ಲಿ ಪುರ್ಲಕ್ಕಿಬೇಣದ ಬಳಿ ರೈಲ್ವೆ ಹಳಿಗೆ ತಲೆಕೊಟ್ಟು ವ್ಯಕ್ತಿಯೋರ್ವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಸ್ತೆ ಅಪಘಾತ :ಸಂಜೆಯ ವೇಳೆಗೆ ಬಸ್ಸ ನಿಲ್ದಾಣದ ಎದುರು ಇಳಿಜಾರಿನಲ್ಲಿ ಸಾಗುತ್ತಿದ್ದ ಸಾರಿಗೆ ಸಂಸ್ಥೆ ಬಸ್ಸ ಮತ್ತು ಖಾಸಗಿ ಕಾರ ನಡುವೆ ಡಿಕ್ಕಿ ಸಂಭವಿಸಿದ್ದು ತಡರಾತ್ರಿಯವರೆಗೂ ಠಾಣೆಯ ಎದುರು ಕಾರ ಚಾಲಕ ಮತ್ತು ಸಾರಿಗೆ ಚಾಲಕ ಮತ್ತು ನಿರ್ವಾಹಕ ಮತ್ತಿತರರು ಹೊಂದಾಣಿಕೆ, ಇಲ್ಲವೇ ಕೇಸ್ ದಾಖಲಿಸುವ ಚರ್ಚೆಯಲ್ಲಿ ತೊಡಗಿದಂತಿದೆ. ಬೆಳಗಿನ ಜಾವ ಮೃತ ವ್ಯಕ್ತಿಯೋರ್ವರ ಅಂತಿಮ ದರ್ಶನ ಮಾಡಲು ಹೊರಟಿದ್ದ ಬೈಕ್ ಸವಾರನೋರ್ವ ಪಾದಾಚಾರಿಗೆ ಡಿಕ್ಕಿ ಹೊಡೆದು, ಬೈಕ್ ರಸ್ತೆಯಂಚಿನ ಗದ್ದೆ ಬದುವಿನಲ್ಲಿ ಸಿಲುಕಿದ ಘಟನೆ ಮಂಜಗುಣಿ ರಸ್ತೆಯ ತೆಂಕಣಕೇರಿ ಪ್ರದೇಶದಲ್ಲಿ ನಡೆದಿದ್ದು ಪಾದಾಚಾರಿಗೆ ಚಿಕ್ಕಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ಒಯ್ದು, ಚಿಕಿತ್ಸೆಗೆ ಒಳಪಡಿಸಿ ಮನೆಗೆ ಕರೆತರಲಾಗಿದ್ದು, ಹೊಂದಾಣಿಕೆಯಿಂದಾಗಿ ಯಾವುದೇ ಪೊಲೀಸ್ ದೂರು ದಾಖಲಾಗದೇ ಪ್ರಕರಣ ಸುಖಾಂತ್ಯ ಕಂಡಿದೆ.

ಕೋವಿಡ್ ಪ್ರಕರಣ : ತಾಲೂಕಿನಲ್ಲಿ ಶನಿವಾರ 3 ಹೊಸ ಕೋವಿಡ್ ಕೇಸ್‍ಗಳು ಧೃಡಪಟ್ಟಿದೆ. ಜಮಗೋಡ ವ್ಯಾಪ್ತಿಯ 19ರ ಯುವತಿ, ಹೊನ್ನೆಕೇರಿಯ 13ರ ಬಾಲಕ ಮತ್ತು 43ರ ಮಹಿಳೆಯಲ್ಲಿ ಸೋಂಕು ಲಕ್ಷಣಗಳು ಕಾಣಿಸಿಕೊಂಡಿದೆ. ಹೋಂ ಐಸೋಲೇಶನಲ್ಲಿರುವ 21 ಮಂದಿ ಸಹಿತ ಒಟ್ಟೂ 22 ಪ್ರಕರಣಗಳು ಸಕ್ರಿಯವಾಗಿದೆ. 5 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 6 ರ್ಯಾಟ ಮತ್ತು 47 ಆರ್‍ಟಿಪಿಸಿಆರ್ ಸೇರಿ ಒಟ್ಟೂ 53 ಸ್ವ್ಯಾಬ್ ಟೆಸ್ಟ್ ನಡೆಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button