Uttara Kannada
Trending
ರಸ್ತೆಯಲ್ಲಿ ನಿಲ್ಲಿಸಿದ್ದ ಬುಲೆಟ್‌ಗೆ ಬೆಂಕಿ: ಮೀನು ತೆಗೆದುಕೊಂಡು ಬಂದ ಸವಾರನಿಗೆ ಕಾದಿತ್ತು ಶಾಕ್

ಕಾರವಾರ: ರಸ್ತೆಬದಿಯಲ್ಲಿ ಬುಲೆಟ್ ಬೈಕ್ ಇಟ್ಟು, ಮೀನುತರಲು ತೆರಳಿದ್ದ ಸವಾರನಿಗೆ ಶಾಕ್ ಕಾದಿತ್ತು. ಹೌದು, ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಮೀನು ತರಲು ತೆರಳಿದ್ದ ವೇಳೆ, ಬುಲೆಟ್‌ಗೆ ಏಕಾಏಕಿ ಬೆಂಕಿ ಹೊತ್ತುಕೊಂಡು, ಧಗಧಗನೆ ಹೊತ್ತಿ ಉರಿದಿದೆ. ಬೈಕ್‌ನ ಪೆಟ್ರೋಲ್ ಟ್ಯಾಂಕ್‌ನಲ್ಲಿ ಪೆಟ್ರೋಲ್ ಫುಲ್ ಇದ್ದ ಕಾರಣ, ಬೆಂಕಿ ಕೆನ್ನಾಲಿಗೆ ಚಾಚಿದ್ದು, ಬಹುತೇಕ ಬೈಕಿನ ಭಾಗಗಳು ಸುಟ್ಟು ಭಸ್ಮವಾಗಿದೆ. ಬೈಕ್‌ಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎನ್ನುವುದು ಇನ್ನೂ ನಿಗೂಢವಾಗಿದೆ. ಕಿಡಿಗೇಡಿಗಳ ಕೃತ್ಯವೇ ಅಥವಾ ತಾಂತ್ರಿಕದೋಷದಿoದ ಬೆಂಕಿ ಕಾಣಿಸಿಕೊಂಡಿತೇ ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ.
ಕಾರವಾರದ ಮಾಜಾಳಿಯ ಗಾಂವಗೇರಿಯಲ್ಲಿ ಈ ಘಟನೆ ನೆಡೆದಿದ್ದು, ಬೈಕಿನ ಬಹುತೇಕ ಭಾಗಗಳು ಸುಟ್ಟು ಕರಕಲಾಗಿದೆ. ಕಾರವಾರದ ನಂದನ್ ರಮಾಕಾಂತ್ ನಾಯ್ಕ ಎನ್ನುವವರಿಗೆ ಸೇರಿದ ಬೈಕ್ ಇದು ಎನ್ನಲಾಗಿದೆ. ಚಿತ್ತಾಕುಲ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್, ಕಾರವಾರ
[sliders_pack id=”1487″]ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಅಕ್ಕನ ಅಂತಿಮ ಕಾರ್ಯ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ತಮ್ಮನ ದುರ್ಮರಣ: ಏನಾಯ್ತು ನೋಡಿ?
- ಕೇಣಿ ವಾಣಿಜ್ಯ ಬಂದರು ವಿರೋಧಿ ಹೋರಾಟ ಸಮಿತಿಯಿಂದ ಮಹತ್ವದ ಹೇಳಿಕೆ : ಮೀನುಗಾರಿಕಾ ಮಂತ್ರಿಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವರೇ ಖುದ್ದಾಗಿ ಬಂದು ಅಹವಾಲು ಆಲಿಸಲು ಆಗ್ರಹ
- ರೈತರಿಗೆ ಬೆಳೆವಿಮೆ ಕೊಡಿ: ಕಂಪೆನಿಗೆ ಕೇಂದ್ರದ ಖಡಕ್ ಆದೇಶ
- ಗೋವಿಂದಮೂರ್ತಿ ದೇವರ ವರ್ಧಂತಿ: ಗಮನಸೆಳೆದ “ಶ್ರೀನಿವಾಸ ಕಲ್ಯಾಣ” ಪೌರಾಣಿಕ ನಾಟಕ
- ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ನಾಗರಹಾವು : ಕುಟುಂಬಸ್ಥರು, ಅಕ್ಕಪಕ್ಕದ ಮನೆಯವರಲ್ಲಿ ಆತಂಕ