ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 11 ಕರೊನಾ ಕೇಸ್ ದಾಖಲಾಗಿದೆ. ಕಾರವಾರ 3, ಹೊನ್ನಾವರ 5, ಕುಮಟಾದಲ್ಲಿ 2, ಅಂಕೋಲಾದಲ್ಲಿ ಕೇಸ್ ದೃಢಪಟ್ಟಿದೆ. ಶಿರಸಿ, ಯಲ್ಲಾಪುರ, ಸಿದ್ದಾಪುರ, ಜೋಯ್ಡಾ, ಹಳಿಯಾಳ, ಭಟ್ಕಳದಲ್ಲಿ ಇಂದು ಯಾವುದೇ ಕರೊನಾ ಕೇಸ್ ಪತ್ತೆಯಾಗಿಲ್ಲ.
ಹೊನ್ನಾವರದಲ್ಲಿ ಐದು ಕರೊನಾ ಕೇಸ್:
ಹೊನ್ನಾವರ: ಕಳೆದ ಕೆಲವು ದಿನಗಳಿಂದ ತಾಲೂಕಿನಲ್ಲಿ ಕೇವಲ ಒಂದು-ಎರಡು ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ ಇಂದು ಹೊನ್ನಾವರದಲ್ಲಿ 5 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಂದು ಪಟ್ಟಣದಲ್ಲಿ 1 ಹಾಗೂ ಗ್ರಾಮೀಣ ಭಾಗದ ನಾಲ್ವರದಲ್ಲಿ ಸೋಂಕು ದೃಢಪಟ್ಟಿದೆ. ಪಟ್ಟಣದ 18 ವರ್ಷದ ಯುವಕ, ಗ್ರಾಮೀಣ ಭಾಗವಾದ ತೊಪ್ಪಲಕೇರಿಯ 66 ವರ್ಷದ ಪುರುಷ, 60 ವರ್ಷದ ಮಹಿಳೆ, ಅಗ್ರಹಾರದ 22 ವರ್ಷದ ಯುವಕ, 34 ವರ್ಷದ ಮಹಿಳೆ ಸೇರಿ ಒಟ್ಟು 5 ಜನರಲ್ಲಿ ಸೋಂಕು ಪತ್ತೆಯಾಗಿದೆ. ವಿವಿಧ ಆಸ್ಪತ್ರೆಯಲ್ಲಿ ಒಬ್ಬರು, ಮನೆಯಲ್ಲಿ 11 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಮಟಾದಲ್ಲಿ ಇಬ್ಬರಲ್ಲಿ ಪಾಸಿಟಿವ್:
ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 2 ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ಇಂದು ದೃಢಪಟ್ಟ 2 ಪ್ರಕರಣವೂ ಕೂಡ ತಾಲೂಕಿನ ವನ್ನಳ್ಳಿಯಲ್ಲಿಯೇ ಕಂಡುಬಂದಿದೆ.ವನ್ನಳ್ಳಿಯ 70 ವರ್ಷದ ವೃದ್ಧ ಮತ್ತು 69 ವರ್ಷದ ವೃದ್ಧೆಗೆ ಸೋಂಕು ತಗುಲಿದ್ದು, ಇಂದು 2 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1965 ಕ್ಕೆ ಏರಿಕೆಯಾಗಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ ಮತ್ತು ಯೋಗೇಶ್ ಮಡಿವಾಳ ಕುಮಟಾ