Follow Us On

Google News
Uttara Kannada
Trending

ಬರಗದ್ದೆ ಸೊಸೈಟಿ ಪ್ರಕರಣ: ಮಾಜಿ ಮುಖ್ಯ ಕಾರ್ಯನಿರ್ವಾಹಕನಾದ ಲಕ್ಷ್ಮಣ ಪಟಗಾರ ಪೊಲೀಸ್ ವಶಕ್ಕೆ

ಕುಮಟಾ: ತಾಲೂಕಿನ ಬರಗದ್ದೆ ಸೊಸೈಟಿಯ ಅವ್ಯವಹಾರದ ಆರೋಪದ ಮೇಲೆ ಗ್ರಾಮೀಣ ಸೇವಾ ಸಹಕಾರಿ ಸಂಘ ಬರಗದ್ದೆ ಇದರ ಮಾಜಿ ಮುಖ್ಯ ಕಾರ್ಯನಿರ್ವಾಹಕನಾದ ಲಕ್ಷ್ಮಣ ಪಟಗಾರ ಇವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈಗಾಗಲೇ ಬರಗದ್ದೆ ಸೊಸೈಟಿಯಿಂದ ಲಕ್ಷ್ಮಣ ಪಟಗಾರ ಅವರನ್ನು ಅಮಾನತುಗೊಳಿಸಲಾಗಿದೆ. ಆದರೂ ಸಹ ಸಂಘದ ಮೊಹರು, ಲೆಕ್ಕಪತ್ರ, ಲೆಕ್ಕಪತ್ರ ತಂತ್ರಾoಶ, ಸಂಘದ ಮುದ್ರೆ ಇನ್ನಿತರ ದಾಖಲೆಗಳನ್ನು ಸೃಷ್ಠಿಸಿ ಸಂಘದ ಹಲವು ಸದಸ್ಯರುಗಳಿಗೆ ತಾನು ಮಾಡಿದ ಅಪರಾಧವನ್ನು ಮುಚ್ಚಿ ಹಾಕುವ ದುರುದ್ಧೆಶದಿಂದ ಅಮಾನತ್ ನಂತರದ ದಿನಾಂಕವನ್ನು ನಮೂದಿಸಿ ರೈತರ ಬೆಳೆ ಸಾಲಾ ಚುಕ್ತಾ ಮಾಡಲಾಗಿದೆ ಎಂದು ಸುಳ್ಳು ಪ್ರಮಾಣ ಪತ್ರವನ್ನು ನೀಡಿದ್ದಾರೆ ಎಂಬ ಆರೋಪ ಅವರ ಮೇಲಿದೆ.

ಸಂಘದ ಎಲ್ಲಾ ದಾಖಲೆಗಳನ್ನು ಕಾನೂನಾತ್ಮಕವಾಗಿ ವಶಪಡಿಸಿಕೊಂಡಾದ ಬಳಿಕವೂ ತನ್ನ ಸಹಿಯೊಂದಿಗೆ ಸಂಘದ ಸದಸ್ಯರುಗಳಿಗೆ ಸುಳ್ಳು ಕಾಗದ ಪತ್ರವನ್ನು ಸೃಷ್ಠಿಸಿ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬoಧ ಸಂಘದ ಅಧ್ಯಕ್ಷರಾದ ಗಣಪತಿ ಗೋಪಾಲಕೃಷ್ಣ ಹೆಗಡೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಹಿನ್ನಲೆಯಲ್ಲಿ ಪೊಲೀಸ್ ಲಕ್ಷ್ಮಣ ಪಟಗಾರ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಸಂಘದಲ್ಲಿ ಇಡಬೇಕಾದ ರೈತರ ಸಾಲದ ಬಾಂಡ್ ಜಮಾ ಮತ್ತು ಖರ್ಚಿನ ಪಾವತಿಗಳು ಸೇರಿದಂತೆ ಅನೇಕ ಮುಖ್ಯ ಕಾಗದ ಪತ್ರಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದರು. ಅಲ್ಲದೆ 2019-20 ನೇ ಸಾಲಿಗೆ ಸಂಭoದಿಸಿದ ಸಾಲ ಮರುಪಾವತಿಗೆ 53 ಕ್ಕೂ ಹೆಚ್ಚು ರೈತರಿಗೆ ಸುಳ್ಳು ರಸೀದಿ ನೀಡಿ 40.23.326 ರೂ ಹಾಗೂ ಮಾಧ್ಯಮಿಕ ಸಾಲ ಮರುಪಾವತಿಗೆ ಸುಮಾರು 21 ರೈತರಿಗೆ 2,59,404 ರೂ ನ ರಸೀದಿ ನೀಡಿ ಸಂಘಕ್ಕೆ ಮತ್ತು ರೈತರಿಗೆ ವಂಚಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ

Back to top button