Uttara Kannada
Trending
ಬಸ್ ಕಾಯುತ್ತಿದ್ದವರಿಗೆ ಕುಡಿದ ಅಮಲಿನಲ್ಲಿ ಗುದ್ದಿದ ಬೈಕ್ ಸವಾರ: 9 ತಿಂಗಳ ಮಗು ಸೇರಿ ಐವರಿಗೆ ಗಂಭೀರ ಗಾಯ

- ಕುಡಿದ ಅಮಲಿನಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ಅವಾಂತರ
- ಮೂವರು ಮಕ್ಕಳು ಸೇರಿ ಐವರು ಗಂಭೀರ
ಗೋಕರ್ಣ: ಕುಡಿದ ಅಮಲಿನಲ್ಲಿ ಬೈಕ್ ಚಲಾಯಿಸಿಕೊಂಡು ಬಂದ ವ್ಯಕ್ತಿಯೋರ್ವ ಆಸ್ಪತ್ರೆಗೆ ತೆರಳಲು ಬಸ್ ಗೆ ಕಾಯುತ್ತಿದ್ದವರ ಮೇಲೆ ಬೈಕ್ ಹರಿಸಿದ ಪರಿಣಾಮ ಮೂವರು ಮಕ್ಕಳು ಸಹಿತ ಐವರು ಗಂಭೀರ ಗಾಯಗೊಂಡಿರುವ ಘಟನೆ ಗೋಕರ್ಣದ ಗಂಗಾವಳಿ ಬಳಿ ಇಂದು ಸಂಜೆ ನಡೆದಿದೆ.
ಉದಯ ನಾಯ್ಕ (10), ಶೇಖರ ನಾಯ್ಕ(14), ಪ್ರಮೀಳಾ ಶೇಖರ್ ನಾಯ್ಕ (45), ಸುರೇಶ ನಾಯ್ಕ ಎಂಬ 9 ತಿಂಗಳ ಮಗು ಹಾಗೂ ಬೈಕ್ ಸವಾರ ರಾಘವೇಂದ್ರ ಗೌಡ ಗಂಭೀರ ಗಾಯಗೊಂಡಿದ್ದಾರೆ. ಬೈಕ್ ಸವಾರ ಕುಡಿದು ಮೊಬೈಲ್ ನಲ್ಲಿ ಮಾತನಾಡುತ್ತಾ ಬಂದು ರಸ್ತೆ ಬದಿ ನಿಂತಿದ್ದವರಿಗೆ ಗುದ್ದಿದ್ದಾನೆ ಎನ್ನಲಾಗಿದ್ದು ಪರಿಣಾಮ 9 ತಿಂಗಳ ಮಗು ಸೇರಿ ಐವರು ಗಂಭೀರ ಗಾಯಗೊಂಡಿದ್ದರು.
ತಕ್ಷಣ ಸ್ಥಳೀಯರು ಆಂಬುಲೆನ್ಸ್ ಮೂಲಕ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿದ್ದರು. ಪ್ರಾಥಮಿಕ ಚಿಕಿತ್ಸೆ ಬಳಿಕ ಮಗುವನ್ನು ಗೋವಾದ ಬಾಂಬೋಲಿಗೆ ಕೊಂಡೊಯ್ದಿದ್ದು ಉಳಿದ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಸ್ಮಯ ನ್ಯೂಸ್ ಗೋಕರ್ಣ
ಇದನ್ನೂ ಓದಿ
- Job: ಪ್ರತಿಷ್ಠಿತ ಗೃಹೋಪಯೋಗಿ ಮಳಿಗೆಯಲ್ಲಿ ಉದ್ಯೋಗಾವಕಾಶ: ಇಂದೇ ಸಂಪರ್ಕಿಸಿ
- ಇಸ್ರೆಲ್ ನಲ್ಲಿ ಕೆಲಸ ಮಾಡುವ ಸುವರ್ಣಾವಕಾಶ: 1 ಲಕ್ಷದ 70 ಸಾವಿರ ಸಂಬಳ
- ಏಪ್ರಿಲ್ 12 ರಂದು ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ ಶಿಪ್ ಪ್ರವೇಶಾತಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಪಡೆಯುವ ಸುವರ್ಣಾವಕಾಶ
- ಭಟ್ಕಳದ ಬೈಲೂರಿನಲ್ಲಿ ವಾತ್ಸಲ್ಯ ಮನೆ ಹಸ್ತಾಂತರ: ಸಂಸ್ಥೆಯ ಸಮಾಜಮುಖಿ ಕೆಲಸಕ್ಕೆ ಮೆಚ್ಚುಗೆ
- ಬೇಸಿಗೆ ರಜೆ ನಿಮಿತ್ತ 20 ದಿನಗಳ ಸಂಗೀತ ಸಂಸ್ಕಾರ ಶಿಬಿರ