Uttara Kannada
Trending

ಮೀನು ಹಿಡಿಯಲು ತೆರಳುತ್ತಿದ್ದವರ ಮೇಲೆ ಏಕಾಏಕಿ ಕರಡಿ ದಾಳಿ; ಮೂವರಿಗೆ ಗಾಯ

ಕಾರವಾರ: ಮೀನು ಹಿಡಿಯಲು ತೆರಳುತ್ತಿದ್ದ ನಾಲ್ವರ ಮೇಲೆ‌ ಕರಡಿ ದಾಳಿ ಮಾಡಿ ಓರ್ವ ಗಂಭೀರಗೊಂಡು ಇನ್ನಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಯಾದಿಂದ ಪಾರಾಗಿರುವ ಘಟನೆ ಮುಂಡಗೋಡ- ಶಿಗ್ಗಾವಿ ಗಡಿಭಾಗವಾದ ದುಂಡಸಿ ಅರಣ್ಯ ಪ್ರದೇಶದಲ್ಲಿ ಇಂದು ನಡೆದಿದೆ.

ಘಟನೆಯಲ್ಲಿ ಮುಂಡಗೋಡ ತಾಲ್ಲೂಕಿನ ಗೌಳಿ ದಡ್ಡಿಯ ನ್ಯಾಸರ್ಗಿ ಪ್ಲಾಟಿನ ಕಾಳಪ್ಪ ಭೋವಿ ಎಂಬಾತ ಗಂಭೀರ ಗಾಯಗೊಂಡಿದ್ದು, ತಿರುಪತಿ ಪೂಜಾರ್, ವೆಂಕಪ್ಪ ಬೋವಿ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಾಲ್ವರು ಸೇರಿ ಮೀನು ಹಿಡಿಯಲು ನ್ಯಾಸರ್ಗಿ ಬಳಿಯ ಡ್ಯಾಮ್ ಗೆ ಅರಣ್ಯ ಪ್ರದೇಶದಲ್ಲಿ ತೆರಳುವಾಗ ಕರಡಿ ಏಕಾಏಕಿ ದಾಳಿ ಮಾಡಿದೇ ಎನ್ನಲಾಗಿದೆ.

ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಕಾಳಪ್ಪನನ್ನು ತಕ್ಷಣ ಮುಂಡಗೋಡ ತಾಲ್ಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button