Uttara Kannada
Trending

ಮಂಡದ ಮನೆಯಿಂದ ಮಾರಿಕಾಂಬಾ ದೇವಿ ಸನ್ನಿಧಿ ತಲುಪಿದ ಹರಕೆ ಕೋಣ ಗ್ರಾಮೀಣ ಭಾಗದ ವಿಶಿಷ್ಠ ನಂಬಿಕೆ-ಸಂಪ್ರದಾಯ

ಅಂಕೋಲಾ : ತಾಲೂಕಿನ ಬೊಬ್ರುವಾಡ ಗ್ರಾಪಂ.ವ್ಯಾಪ್ತಿಯ ನದಿಭಾಗದ ಮಂಡದ ಮನೆಯಿಂದ ಹರಕೆ ಯ ಕೋಣವೊಂದನ್ನು, ಭಾನುವಾರ ಶಿರಸಿಯ ಶಕ್ತಿದೇವತೆ ತಾಯಿ ಮಾರಿಕಾಂಬೆಯ ಸನ್ನಿಧಿಗೆ ಒಪ್ಪಿಸಿ (ಬಿಟ್ಟು ಬರುವ ಮೂಲಕ) ಗ್ರಾಮೀಣ ಭಾಗದ ಭಕ್ತರು ತಮ್ಮ ಅನಾಧಿಕಾಲದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ನದಿಭಾಗ, ಶೇಡಿಕುಳಿ, ಹೊನ್ನೆಗುಡಿ, ಬೊಬ್ರುವಾಡ, ಅಂಕೋಲಾ ಭಾಗದ ಅನೇಕ ಭಕ್ತರು ತಮ್ಮ ಹರಕೆ ರೂಪದ ಸೇವೆ ಸಲ್ಲಿಸುತ್ತಾ ಬಂದಿದ್ದು, ತಾಯಿ ಮಾರಿಕಾಂಬೆ ದೇಗುಲಕ್ಕೆ ಕೋಣನನ್ನು ಬಿಟ್ಟು ಬಂದರೆ ತಮ್ಮ ಭಾಗದ ಅನೇಕ ಕಷ್ಟಕಾರ್ಪಣ್ಯಗಳು, ರೋಗ ರುಜಿನುಗಳು ದೂರವಾಗುತ್ತವೆ ಎಂಬ ನಂಬಿಕೆಯಲ್ಲಿ ಸಂಪ್ರದಾಯ ಬದ್ಧವಾಗಿ ಪೂಜೆ ಪುನಸ್ಕಾರ ಮುಂದುವರಿಸಿಕೊಂಡು ಬಂದಿದ್ದಾರೆ.

ನದಿಭಾಗದ ಮಂಡದ ಮನೆಯಿಂದ ಸಿಂಗರಸಿದ ಕೋಣದ ಜೊತೆ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯ ಮೂಲಕ ವೆಂಕಟ್ರಮಣ ದೇವಸ್ಥಾನಕ್ಕೆ ತೆರಳಿದ ವಿವಿಧ ಗ್ರಾಮಸ್ಥರು, ದಾರಿಮಧ್ಯೆ ಇತರೇ ಭಕ್ತರು ನೀಡುವ ನಗದು ಕಾಣಿಕೆಗಳನ್ನು ಶೇಖರಿಸಿ ಶಿರಸಿಯ ಮಾರಿಕಾಂಬಾ ಸನ್ನಿಧಿಗೆ ಒಪ್ಪಿಸಿ ತಮ್ಮ ಇಷ್ಟಾರ್ಥ ಸಿದ್ಧಿ ಮತ್ತು ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಬರುತ್ತಾರೆ. ಇಂತಹ ಅನೇಕ ವಿಶಿಷ್ಠ ಸಂಪ್ರ ದಾಯ, ನಂಬಿಕೆಗಳು ಆಯಾ ಭಾಗದ ಭಕ್ತಜನರ ಮನೋಭಿಲಾಶೆಗೆ ಸಂಬಂಧಿಸಿ ಇಂದಿಗೂ ರೂಢಿಯ ಲ್ಲಿರುವುದನ್ನು ಕಾಣಬಹುದಾಗಿದೆ.

ಕುಪ್ಪಯ್ಯ ಶಿವಪ್ಪ ನಾಯ್ಕ ಮುಂದಾಳತ್ವದಲ್ಲಿ ಪ್ರಮುಖರಾದ ರಮೇಶ ನಾಯ್ಕ, ಚೇತನ ನಾಯ್ಕ, ರವಿ ನಾಯ್ಕ, ಮುರ್ಕುಂಡಿ ನಾಯ್ಕ, ನಾಗೇಶ ನಾಯ್ಕ, ಶ್ರೀಧರ ನಾಯ್ಕ, ಜಯಂತ ನಾಯ್ಕ, ಚಂದ್ರಕಾಂತ ನಾಯ್ಕ, ರೂಪೇಶ ನಾಯ್ಕ, ಮಾದೇವ ಗೌಡ, ಗಣಪತಿ ನಾಯ್ಕ, ಅರವಿಂದ ನಾಯ್ಕ, ಪಾಂಡುರಂಗ ಎಸ್. ನಾಯ್ಕ ಮೊದಲಾದವರು ಹರಕೆಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

 ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9886460777,,,, INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,    ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

Back to top button