ಶಿರಸಿ: ಶ್ರೀಗಂಧಕ್ಕೆ ಬಹುಬೇಡಿಕೆ ಇರುವುದರಿಂದ ಶ್ರೀಗಂಧ ಕಳ್ಳತನ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ.
ತಾಲೂಕಿನ ಹುಲೇಕಲ್ ವಲಯದ ಶೀಗೆಹಳ್ಳಿಯ ಅರಣ್ಯ ವ್ಯಾಪ್ತಿಯಲ್ಲಿ ಶ್ರೀಗಂಧ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಶ್ರೀಗಂಧದ ಸಮೇತವಾಗಿ ವಲಯದ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಮಂಜವಳ್ಳಿಯ ಕೃಷ್ಣ ಗೌಡ ಬಂಧಿತ ಆರೊಪಿಯಾಗಿದ್ದು, ಆತನಿಂದ 12. ಕೆ.ಜಿ. ತೂಕದ ಶ್ರೀಗಂಧ ಹಾಗೂ ಕೃತ್ಯಕ್ಕೆ ಬಳಸಲಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಗ್ರಾಮಸ್ಥರು ಹಾಗೂ ಗ್ರಾಮ ಅರಣ್ಯ ಸಮಿತಿಯ ಖಚಿತ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿಗಳು ಆತನನ್ನು ಬಂಧಿಸಿ ಯಶಸ್ವಿಯಾಗಿದ್ದಾರೆ. ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಎಸ್.ಜಿ.ಹೆಗಡೆ ಹಾಗೂ ಜಾನ್ಮನೆ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ರಘು .ಡಿ. ಇವರ ಮಾರ್ಗದರ್ಶನದಂತೆ, ಹುಲೆಕಲ್ ವಲಯ ಅರಣ್ಯ ಅಧಿಕಾರಿ ಮಂಜುನಾಥ ಹೆಬ್ಬಾರ್, ಉಪ ವಲಯ ಅರಣ್ಯ ಅಧಿಕಾರಿ ರವಿ.ಎಸ್, ವಿ.ಟಿ.ನಾಯ್ಕ, ಅರಣ್ಯ ರಕ್ಷಕರಾದ ವೀರಣ್ಣ ಯಲಿಗಾರ್, ಸಂತೋಷ ಕುಮಾರ್, ಪ್ರಮೊದ ನಾಯ್ಕ, ಹಾಗೂ ಶೀಗೆಹಳ್ಳಿ ಗ್ರಾಮ ಅರಣ್ಯ ಸಮಿತಿಯ ಸದಸ್ಯರು ಭಾಗಿಯಾಗಿದ್ದರು.
ವಿಸ್ಮಯ ನ್ಯೂಸ್ ಶಿರಸಿ