Follow Us On

WhatsApp Group
Uttara Kannada
Trending

ಭುವಿಯಿಂದ ಬಾನಿನವರೆಗೆ ಕೆಲಸ ನಿರ್ವಹಿಸಲು ಮಹಿಳೆ ಸಶಕ್ತಳು : ಕಲ್ಪನಾ ಸೈಲ್

ತಾ.ಪಂ ಅಧ್ಯಕ್ಷೆ ಸುಜಾತಾ ಗಾಂವಕರ ನೇತೃತ್ವದಲ್ಲಿ ಮಹಿಳಾ ದಿನಾಚರಣೆ.
ಸಾಧಕರಿಗೆ ಸನ್ಮಾನ : ಸ್ಪರ್ಧಾ ವಿಜೇತರಿಗೆ ಬಹುಮಾನ.

ಅಂಕೋಲಾ : ತಾಪಂ.ಅಧ್ಯಕ್ಷೆ ಸುಜಾತಾ ಗಾಂವಕರ ನೇತ್ರತ್ವದ ಶುಭೋಧಯ ಸೇವಾ ಸಂಸ್ಥೆ ಹಾಗೂ ಮಹಿಳಾ ಜನಹಿತ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಪಟ್ಟಣದ ಸ್ವಾತಂತ್ರö್ಯ ಸ್ಮಾರಕ ಭವನದಲ್ಲಿ ವಿಶ್ವ ಮಹಿಳೆ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಉದ್ಘಾಟನೆ : ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಕಲ್ಪನಾ ಸತೀಶ ಸೈಲ್ ಮಾತನಾಡಿ, ಭುವಿಯಿಂದ ಭಾನಿನವರೆಗೆ ಯಾವುದೇ ಕಾರ್ಯವನ್ನು ನಡೆಸಲು ಮಹಿಳೆ ಸಶಕ್ತಳಾಗಿದ್ದು, ತೊಟ್ಟಿಲು ತೂಗುವ ಕೈ, ಜಗತ್ತನ್ನೇ ಆಳಬಲ್ಲಳು ಎಂಬoತೆ ಪುರುಷನಿಗೆ ಸರಿಸಾಟಿಯಾಗಿ ಮುನ್ನಡೆಯುತ್ತಿರುವುದಕ್ಕೆ ಮಹಿಳೆಯರೆಲ್ಲರೂ ಹೆಮ್ಮೆ ಪಡಬೇಕು ಎಂದರು.

ಸನ್ಮಾನ – ಬಹುಮಾನ : ಸೆಂಟ್ರಲ್ ಯುನಿರ್ವಸಿಟಿ ಆಫ್ ಅಮೇರಿಕಾದ ಗೌರವ ಡಾಕ್ಟರೇಟ್ ಸ್ವೀಕರಿಸಲಿರುವ ಲತಾ.ಆರ್.ನಾಯಕ, ಈ ಹಿಂದೆ ಅಂಕೋಲಾದಲ್ಲಿ ಜನಾನುರಾಗಿಯಾಗಿ ಸೇವೆ ಸಲ್ಲಿಸಿ, ವರ್ಗಾವಣೆ ಗೊಂಡು ಹೊನ್ನಾವರದಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಧರ ಎಸ್.ಆರ್., ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಅನನ್ಯ ಉಮೇಶ ನಾಯ್ಕ, ಆದಿತ್ಯ ಭಟ್ಟ, ಶಂಕರ ಗೌಡ, ಅಂಕೋಲಾದಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದು, ಈಗ ಹೊನ್ನಾವರದ ನ್ಯಾಯಾಲಯದಲ್ಲಿ ಸಹಾ ಯಕ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡ ಸಂಪದಾ ಗುನಗಾ ಸೇರಿ ಇತರರಿಗೆ ಸನ್ಮಾನಿಸಿ ಗೌರ ವಿಸಲಾಯಿತು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹಿಳಾ ಸ್ವ-ಸಹಾಯ ಸಂಘ ಮತ್ತಿತರ ಸದಸ್ಯರು ಹಲವು ಉತ್ಪನ್ನಗಳ ಮಾರಾಟ ಮಳಿಗೆ ತೆರೆದು ಗಮನ ಸೆಳೆದರು.
ತಾಪಂ.ಉಪಾಧ್ಯಕ್ಷೆ ತುಳಸಿ ಸುಕ್ರು ಗೌಡ, ಜಿಪಂ.ಸದಸ್ಯರಾದ ಉಷಾ ಉದಯ ನಾಯ್ಕ, ಸರಳಾ ದೀಕ್ಷಿತ ನಾಯಕ, ತಾ.ಪಂ.ಮಾಜಿ ಅಧ್ಯಕ್ಷೆ ಮಂಜುಳಾ ವೇರ್ಣೇಕರ ಮಾತನಾಡಿದರು.

ತಾಪಂ.ಇಓ ಪಿ.ವೈ. ಸಾವಂತ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ದತ್ತಾ ನಾಯ್ಕ, ಸದಸ್ಯರಾದ ಪ್ರಿಯಾ ವಿನೋದ ನಾಯ್ಕ, ಸವಿತಾ ಮಾದೇವ ಗೌಡ, ಮಾಜಿ ಅಧ್ಯಕ್ಷೆ ದೀಪಾ ಆಗೇರ, ವಂದಿಗೆ ಗ್ರಾಪಂ.ಅಧ್ಯಕ್ಷೆ ಪುಷ್ಪಲತಾ ನಾಯಕ, ಮಾಜಿ ಅಧ್ಯಕ್ಷೆ ಸರೋಜಾ ಬೊಮ್ಮಯ್ಯ ನಾಯಕ, ಗ್ರಾಪಂ. ಸದಸ್ಯೆ ನಿರ್ಮಲಾ ನಾಯಕ ಸೇರಿದಂತೆ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು ಪ್ರಮುಖರಾದ ಗೋಪು ಅಡ್ಲೂರು, ರಂಜನ ಹಿಚ್ಕಡ, ಅಂಗನವಾಡಿ ಮೇಲ್ವಿಚಾರಕಿಯರಾದ ಪ್ರಿಯಾ ನಾಯಕ, ಸುರೇಖಾ ನಾಯಕ ಭಾವಿಕೇರಿ, ಗೌರಿ ಮಾರ್ಕಾಂಡೆ, ಸುಲೋಚನಾ ನಾಯ್ಕ, ಇತರರು ಉಪಸ್ಥಿತರಿದ್ದರು.

ದಿನವಿಡಿ ಒತ್ತಡದಲ್ಲಿರುವ ಮಹಿಳೆಯರು ಒಂದಾಗಿ ಆಟೋಟದಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆ ಹೊರ ಸೂಸಲು ಮುಕ್ತ ವೇದಿಕೆ ಅವಕಾಶ ಕಲ್ಪಿಸುವುದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ನಮ್ಮ ಸಂಘಟನೆ ಮಾಡಿಕೊಂಡು ಬಂದಿದ್ದು, ನಮ್ಮ ಈ ಹಿಂದಿನ ಮತ್ತು ಇಂದಿನ ಮಹಿಳಾ ದಿನಾಚರಣೆಗೆ ಸಹಕಾರ ನೀಡಿದ ಸರ್ವರನ್ನು ನೆನೆಯಲೇ ಬೇಕಿದೆ
– ಸುಜಾತಾ ಗಾಂವಕರ ಅಧ್ಯಕ್ಷರು ಮತ್ತು ಸಂಘಟಕ ಪ್ರಮುಖರು ಅಂಕೋಲಾ

ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಬೀರಮ್ಮ ನಾಯಕ ಪ್ರಾರ್ಥಿಸಿದರು, ತಾಪಂ.ಸದಸ್ಯೆ ಶಾಂತಿ ಆಗೇರ ಸ್ವಾಗತಿ ಸಿದರು. ಸಾಮಾಜಿಕ ಕಾರ್ಯಕರ್ತೆ ಶ್ಯಾಮಲಾ ಶೇಟ ನಿರ್ವಹಿಸಿದರು. ಗ್ರಾಪಂ. ಸದಸ್ಯೆ ನಿರ್ಮಲಾ ನಾಯಕ ವಂದಿಸಿದರು.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.

ಶ್ರೀ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್ ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ಪರಸ್ತ್ರೀಯರ ವ್ಯಾಮೋಹ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button