Follow Us On

WhatsApp Group
ಮಾಹಿತಿ
Trending

ಅಂಕೋಲಾದಲ್ಲಿ 98 ಕೋವಿಡ್ ಕೇಸ್ :2 ಸಾವು: ಅನವಶ್ಯಕವಾಗಿ ಓಡಾಡಿದವರಿಗೆ ಬಿಸಿಮುಟ್ಟಿಸಿದ ಪೊಲೀಸರು

ಅಂಕೋಲಾ:ತಾಲೂಕಿನಲ್ಲಿ ಕರೊನಾ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ.ಬುಧವಾರ 98 ಹೊಸ ಪಾಸಿಟಿವ್ ಕೇಸ್ ದಾಖಲಾಗಿದೆ. ಅವರ್ಸಾದ 47 ರ ಪುರುಷ ಮತ್ತು ಕೋನಾಳದ 56 ರ ಪುರುಷ ಸೋಂಕಿನಿಂದ ಮೃತರಾಗಿದ್ದು, ಈ ವರೆಗಿನ ಒಟ್ಟೂ ಸಾವಿನ ಸಂಖ್ಯೆ 41 ಕ್ಕೆ ಏರಿಕೆಯಾಗಿದೆ.

ಅಂಕೋಲಾ ತಾಲೂಕಾ ಆಸ್ಪತ್ರೆಯಲ್ಲಿ 23, ಕಾರವಾರ ಕ್ರಿಮ್ಸ್ ನಲ್ಲಿ 7, ಸಿರ್ಸಿ ಹೊನ್ನಾವರಗಳಲ್ಲಿ ತಲಾ 1, ಕುಮಟಾ 2 , ಮಂಗಳೂರಿನಲ್ಲಿ 3 ಸೇರಿದಂತೆ ಒತ್ತಾರೆ 37 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 300 ಸೋಂಕಿತರು ಹೋಮ್ ಐಸೊಲೇಶನ್ ಗೆ. ಒಳಪಟ್ಟಿದ್ದಾರೆ.

ಸೋಂಕು ಮುಕ್ತರಾದ 106 ಮಂದಿ ಬಿಡುಗಡೆ ಪಟ್ಟಿಯಲ್ಲಿದ್ದು, ಹೊಸ ಕೇಸ್ ಗಳೊಂದಿಗೆ ತಾಲೂಕಿನಲ್ಲಿ ಒಟ್ಟೂ342 ಸಕ್ರಿಯ ಪ್ರಕರಣಗಳಿವೆ.
. ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ, ಅಂಕೋಲಾ ರೂರಲ್ ರೋಟರಿ ಕ್ಲಬ್ ಪರವಾಗಿ ಮಾಸ್ಕ ಹಾಗೂ ಕೈಗವಸುಗಳನ್ನು ಉಚಿತವಾಗಿ ವಿತರಿಸಲಾಯಿತು. ಕ್ಲಬ್ ನ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

ಅನವಶ್ಯವಾಗಿ ಓಡಾಡುವ ಬೈಕ್ ಸವಾರರ ಮೇಲೆ ಕಣ್ಣಿಟ್ಟಿರುವ ಪೊಲೀಸರು, ಹತ್ತಾರು ಬೈಕ್ ಸವಾರರಿಗೆ ದಂಡದ ಬಿಸಿ ಮುಟ್ಟಿಸಿ, ಎಚ್ಚರಿಸಿದ್ದು, ಗುರುವಾರ ಕಾರ್ಯಾಚರಣೆ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.


ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..


Back to top button