Follow Us On

WhatsApp Group
ಮಾಹಿತಿ
Trending

ಉತ್ತರಕನ್ನಡ ಜಿಲ್ಲೆಯ ಇಂದಿನ ಕರೊನಾ ವಿವರ: ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ?

ಕಾರವಾರ: ಉತ್ತರಕನ್ನಡದಲ್ಲಿ ಇಂದು 53 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಕಾರವಾರದಲ್ಲಿ 8, ಶಿರಸಿಯಲ್ಲಿ 5, ಸಿದ್ದಾಪುರದಲ್ಲಿ 3, ಅಂಕೋಲಾದಲ್ಲಿ 10, ಕುಮಟಾದಲ್ಲಿ 5, ಹೊನ್ನಾವರ 9, ಭಟ್ಕಳದಲ್ಲಿ 6, ಯಲ್ಲಾಪುರದಲ್ಲಿ 5, ಮುಂಡಗೋಡ 2, ಕೇಸ್ ದಾಖಲಾಗಿದೆ.

ಜಿಲ್ಲೆಯಲ್ಲಿ ಇಂದು ಎರಡು ಸಾವು ಸಂಭವಿಸಿದೆ. ಅಂಕೋಲಾ, ಕುಮಟಾದಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 760 ಕ್ಕೆ ಏರಿಕೆಯಾಗಿದೆ.

ಹೊನ್ನಾವರ 7, ಭಟ್ಕಳ 7, ಶಿರಸಿ 2, ಕಾರವಾರ 2, ಅಂಕೋಲಾ‌ 4, ಕುಮಟಾ 9, ಯಲ್ಲಾಪುರ 3 ಮಂದಿ ಕೋವಿಡ್ ಗೆದ್ದು ಮನೆಗೆ ಮರಳಿದ್ದಾರೆ.

ಅಂಕೋಲಾದಲ್ಲಿ 10 ಹೊಸ ಪಾಸಿಟಿವ್ ಕೇಸ್
ಅಂಕೋಲಾ: ತಾಲೂಕಿನಲ್ಲಿ ಮಂಗಳವಾರ 10 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.ಸೋಂಕು ಮುಕ್ತರಾದ 4 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 58 ಕ್ಕೆ ಏರಿಕೆಯಾಗಿದೆ.

ವಿವಿಧ ಆಸ್ಪತ್ರೆಗಳಲ್ಲಿ 18ಸೋಂಕಿತರು ಚಿಕಿತ್ಸೆಗೊಳಪಟ್ಟಿದ್ದು, ಸೋಂಕು ಲಕ್ಷಣವುಳ್ಳ 40 ಜನರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಆರಂಭದಿಂದ ಈವರೆಗೆ ತಾಲೂಕಿನಲ್ಲಿ ಒಟ್ಟೂ 3592ಸೋಂಕು ಪ್ರಕರಣಗಳು ಪತ್ರೆಯಾಗಿದ್ದು , 71 ಕರೊನಾ ಸಾವಿನ ಪ್ರಕರಣಗಳು ದಾಖಲಾಗಿದೆ. ತಾಲೂಕಿನ ವಿವಿಧೆಡೆ ಇಂದು ಒಟ್ಟೂ 473 ಡೋಸ್ ಕೊವಿಡ್ ಲಸಿಕೆಗಳನ್ನು ನೀಡಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button