Special
Trending

ಕಳೆದ 30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕಿದ್ದಾಳೆ ಈ ಮಹಿಳೆ: ವೈದ್ಯಲೋಕದ ಅಚ್ಚರಿ ಈಕೆ

ಇಂದಿನ ದಿನಮಾನದಲ್ಲಿ ಬರೀ ಟೀ ಕುಡಿದು ಬದುಕಲು ಸಾಧ್ಯವೇ? ಅಸಾಧ್ಯದ ಮಾತೇ ಸರಿ.. ಆದ್ರೆ, ಇಲ್ಲೊಬ್ಬಳು ಕಳೆದ 30 ವರ್ಷಗಳಿಂದ ಬರೀ ಟೀ ಕುಡಿದು ಬದುಕಿದ್ದಾಳೆ ಅಂದ್ರೆ ನಂಬ್ಲೆ ಬೇಕು.. ಹೌದು, ಈಕೆಯ ಹೆಸರು ಪಿಲ್ಲಿ ದೇವಿ. ಛತ್ತೀಸ್‌ಗಢ ನಿವಾಸಿ. ಈಕೆ ಕಳೆದ 30 ವರ್ಷದಿಂದ ಕೇವಲ ಟೀ ಕುಡಿದೇ ಬದುಕುತ್ತಿದ್ದಾರೆ. ಹೌದು, ಈ ವಿಷಯ ನೋಡಿದರೇ ಬರೀ ಟೀ ಕುಡಿದು ಬದುಕಿದ್ದಾರಾ ಅಂತ ಆಶ್ಚರ್ಯ ಆಗೋದು ಸಹಜ. ಹೌದು, ಛತ್ತೀಸ್ ಗಡದ ಕೊರಿಯಾ ಜಿಲ್ಲೆಯ ಮಹಿಳೆಯೊಬ್ಬರು ಕಳೆದ 30 ವರ್ಷಗಳಿಂದ ಬರೀ ಟೀ ಕುಡಿದುಕೊಂಡೇ ಬದುಕುತ್ತಿದ್ದಾರೆ..

ತವರು ಮನೆಯಿಂದ ಗಂಡನ ಮನೆಗೆ ಹೋಗುತ್ತೇನೆಂದು ಹೋದ ಮಹಿಳೆ ನಾಪತ್ತೆ: ಈಕೆಯ ಕುರಿತು ಮಾಹಿತಿ ಸಿಕ್ಕಲ್ಲಿ ಪೊಲೀಸರಿಗೆ ತಿಳಿಸಿ

ಈಕೆಗೆ 10 ವರ್ಷ ವಯಸ್ಸಾದಾಗ ಆಹಾರ ತ್ಯಜಿಸಿದ್ದಾಳಂತೆ.. ಅಂದಿನಿoದ ಇಂದಿನವರೆಗೂ ಟೀ ಕುಡಿದೇ ಬದುಕುತ್ತಿದ್ದಾಳೆ, ಇಡೀ ಗ್ರಾಮದಲ್ಲಿ ಪಿಲ್ಲಿ ದೇವಿ ಚಾಯ್ ವಾಲಿ ಚಾಚಿ ಎಂದೇ ಪ್ರಸಿದ್ಧಿಪಡೆದುಕೊಂಡಿದ್ದಾಳೆ.. ತಮ್ಮ ಮಗಳು ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಒಂದು ದಿನ ಪಾಟ್ನಾ ಶಾಲೆಯ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಹೋಗಿದ್ದಳು. ಆ ದಿನ ಮನೆಗೆ ವಾಪಸ್ ಬಂದಾಗಿನಿAದ ಆಕೆ ನೀರು ಮತ್ತು ಆಹಾರವನ್ನು ತಿನ್ನುವುದನ್ನು ಬಿಟ್ಟಿದ್ದಾಳೆ. ಮೊದಲಿಗೆ ಟೀ ಜೊತೆ ಬಿಸ್ಕಟ್ ಮತ್ತು ಬ್ರೆಡ್ ತಿನ್ನುತ್ತಿದ್ದಳು, ಆದ್ರೆ ಕೆಲ ತಿಂಗಳ ನಂತರ ಬಿಸ್ಕಟ್ ಮತ್ತು ಬ್ರೆಡ್ ತಿನ್ನೋದನ್ನು ಬಿಟ್ಟಳು ಎಂದು ಮಹಿಳೆಯ ತಂದೆ ಹೇಳುತ್ತಿದ್ದಾರೆ.

ಕಳೆದ 30 ವರ್ಷಗಳಿಂದ ಬ್ರೆಡ್ ತಿನ್ನುತ್ತಿದ್ದರೂ ಈಕೆ ಆರೋಗ್ಯವಾಗಿದ್ದಾಳೆ.. ಈಕೆಯನ್ನು ವೈದ್ಯರ ಬಳಿ ತೋರಿಸಿ, ಪರೀಕ್ಷಿಸಲಾಗಿದೆ. ವೈದ್ಯರು ಈಕೆ ಏನಾದರೂ ರೋಗದಿಂದ ಬಳಲುತ್ತಿದ್ದಾಳೆಯೇ ಎಂಬ ಪರೀಕ್ಷಿಸಿದ್ದಾರೆ. ಆದರೆ ಆಕೆಗೆ ಯಾವುದೇ ಕಾಯಿಲೆ ಇಲ್ಲ ಎಂದು ದೃಢಪಡಿಸಿದ್ದಾರೆ. ಹೌದು, ಅಲ್ಲದೆ ಪಿಲ್ಲಿ ದೇವಿ ಮನೆಯಿಂದ ಹೊರ ಹೊಗುವುದು ಅಪರೂಪವಂತೆ.. ಯಾವಾಗಲೂ ಶಿವಧ್ಯಾನದಲ್ಲಿ ಮುಳುಗಿರುತ್ತಾರೆ. ಕೇವಲ ಟೀ ಕುಡಿದು 33 ವರ್ಷ ಬದುಕುವುದು ವೈಜ್ಞಾನಿಕವಾಗಿ ಅಸಾಧ್ಯವಾಗಿದ್ದು, ಈಕೆಯ ಜೀವನದಲ್ಲಿ ಈ ಪವಾಡವೇ ನಡೆದಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button