ಸಿದ್ದಾಪುರ: ಕುಡಿಯುವ ನೀರಿನ ಟ್ಯಾಂಕ್ ಒಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗನ ಮೃತದೇಹ ಪತ್ತೆಯಾದ ಘಟನೆ ತಾಲೂಕಿನ ಹಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೆಣಸಿಯಲ್ಲಿ ನಡೆದಿದೆ. ಕೆ ಎಫ್ ಡಿ ಪ್ರಕರಣಗಳು ಸುತ್ತಮುತ್ತಲಿನ ಭಾಗದಲ್ಲಿ ಕಂಡುಬರುತ್ತಿದೆ. ಈ ವೇಳೆ ಕುಡಿಯುವ ನೀರಿನ ಟ್ಯಾಂಕಿನಲ್ಲೇ ಮಂಗನ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯ ಜನತೆಯಲ್ಲಿ ಮೂಡಿಸಿದೆ.
ಸ್ಥಳೀಯ ಸಾರ್ವಜನಿಕರು ಪಂಚಾಯತ್ ಗೆ ಭೇಟಿ ನೀಡಿ ಸಮಸ್ಯೆ ಹೇಳಿಕೊಂಡು ಪಂಚಾಯತ್ ನಿರ್ಲಕ್ಷ ದ ಬಗ್ಗೆ ಆರೋಪಿಸಿದರು. ಪಂಚಾಯತ್ ಗೆ ಸಮುದಾಯ ಅರೋಗ್ಯ ಅಧಿಕಾರಿ ರವಿ ನಾಯ್ಕ್ , ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಸುರೇಶ್ ರಾಠೋಡ್ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ, ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಅಲ್ಲದೆ, ಮುಚ್ಚಳ ಇಲ್ಲದೆ ಇರುವ ಎಲ್ಲ ವಾಟರ್ ಟ್ಯಾಂಕ್ ಗಳಿಗೆ ಮುಚ್ಚಳ ಮಾಡಿ ಆ ಟ್ಯಾಂಕ್ ನ ನೀರು ಬಳಸುತ್ತಿರುವ ಜನರಲ್ಲಿ ಯಾವುದಾದರು ರೋಗ ಲಕ್ಷಣ ಕಂಡು ಬಂದರೆ ಕೂಡಲೇ ಚಿಕಿತ್ಸೆ ಕೊಡಿಸುವಂತೆ ಸೂಚನೆ ನೀಡಿದರು.
ಈ ಹಿಂದೆ ಇದೆ ಟ್ಯಾಂಕ್ ನಲ್ಲಿ ಇದೆ ರೀತಿಯಲ್ಲಿ ಮಂಗ ಸತ್ತಿತ್ತು . ಹೀಗಿದ್ದರು ಸಹ ಸೂಕ್ತ ಮುಚ್ಚಿಗೆ ಮಾಡದೆ ನಿರ್ಲಕ್ಷ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು. ಈಗಾಗಲೇ ಈ ಟ್ಯಾಂಕ್ ನಿಂದ ಜನರು ನೀರನ್ನು ಬಳಸಿದ್ದು ಮುಂದೆ ಇದರಿಂದ ತೊಂದರೆ ಆದರೆ ಸ್ಥಳೀಯ ಪಂಚಾಯತ್ ದವರೇ ಹೊಣೆ ಹೊರಬೇಕು ಎಂದರು.
ಮಂಗ ನೀರಲ್ಲಿ ಬಿದ್ದರೆ ಕೊಳೆಯಲು ಐದಾರು ದಿನದ ಬೇಕು, ಯಾವುದೇ ಕಾರಣಕ್ಕೂ ಕೆ ಎಫ್ ಡಿ ಬರಲು ಸಾಧ್ಯವಿಲ್ಲ. ಆದರೆ ಸಣ್ಣಪುಟ್ಟ ಜ್ವರ ವಾಂತಿ ಭೇದಿ, ತುರಿಕೆ ಲಕ್ಷಣ ಗಳು ಕಂಡು ಬರಬಹುದು ಎಂದು ಅರೋಗ್ಯ ಅಧಿಕಾರಿಗಳು ತಿಳಿಸಿದರು.
ವಿಸ್ಮಯ ನ್ಯೂಸ್, ದಿವಾಕರ ಸಂಪಖoಡ, ಸಿದ್ದಾಪುರ