Big News
Trending

ಪ್ರೇಕ್ಷಕರ ಮುಂದೆ ಬಂದಿದೆ ಮೋಜಿನ ಬಲೆ

ಭಟ್ಕಳ ಪುರವರ್ಗ ಯುವಕರ ಸಾಹಸ
ಸಸ್ಪೆನ್ಸ್, ಥ್ರೀಲ್ಲಿಂಗ್ ಕಿರುಚಿತ್ರ

ಭಟ್ಕಳ: ಪ್ರೀತಿಯ ಜೊತೆಗೆ ಕೆಲವೊಂದು ಸಸ್ಪೆನ್ಸ, ಥ್ರಿಲಿಂಗ್ ಅಂಶಗಳನ್ನು ಕ್ರೋಢಿಕರಿಸಿ ಜನರಿಗೆ, ಸಮಾಜಕ್ಕೊಂದು ಸಂದೇಶ ಹೊತ್ತು ಭಟ್ಕಳ ಪುರವರ್ಗದ 12-15 ಮಂದಿ ಯುವಕರು ತಮ್ಮ ಸ್ನೇಹಿತರ ಬಳಗವನ್ನು ಕಟ್ಟಿಕೊಂಡು ಕಿರುಚಿತ್ರವನ್ನು ತಯಾರಿಸಿದ್ದು, ವಿಶೇಷವೆಂದರೆ ಇಲ್ಲಿ ಯಾರು ಯಾವುದೇ ವಿಭಾಗದಲ್ಲಿ ನುರಿತರಿಲ್ಲದೇ ಚಿತ್ರ ಸೆರೆಹಿಡಿಯುವದರಿಂದ ಹಿಡಿದು ಅದನ್ನು ಸಂಕಲನ ಮಾಡುವವರು ಸಹ ಹೊಸಬರಾಗಿದ್ದು ಉತ್ತಮ ತಂಡದಿಂದ ಮೋಜಿನ ಬಲೆ ಭಾಗ-1 ಎಂಬ ಶೀರ್ಷಿಕೆಯ ಚಿತ್ರವನ್ನು ತಯಾರಿಸಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಮೂಢನಂಬಿಕೆ, ಅತಿಯಾಸೆಗಳಂತಹ ವಿಚಾರದಲ್ಲಿ ಸಾಮಾನ್ಯವಾಗಿ ಎಲ್ಲರು ಬಲಿಯಾಗುತ್ತಾರೆ. ಅದರಲ್ಲಂತು ಕೆಲವು ಕಡೆ ನಂಬಿಕೆಗಳಿಗಿಂತ ಮೂಢನಂಬಿಕೆಯ ಪ್ರಭಾವ ಜೋರಾಗಿದ್ದು, ತಮ್ಮ ದುಡಿಮೆಗಿಂತ ಅತಿಯಾಸೆಯ ಮೇಲೆ ಮೋಹ ಜೋರಾಗಿದೆ. ಇವೆಲ್ಲ ಅಂಶಗಳನ್ನಾಧರಿಸಿ ಪ್ರೀತಿಯ ಬಲೆಯಲ್ಲಿರುವ ಯುವಕ ತನ್ನ ಸ್ನೇಹಿತರನ್ನು ದಾರಿ ತಪ್ಪಿಸಿ ಮೋಜಿನ ಬಲೆಗೆ ಸಿಲುಕಿಸುವ ಕಥಾಹಂದರ ಇದಾಗಿದ್ದು, ಸೂಕ್ಷ್ಮವಾಗಿ ಕಥೆಯನ್ನು ಪುರವರ್ಗದ ರವಿ ನಾಯ್ಕ ಹಾಗೂ ಮಹೇಶ ನಾಯ್ಕ ಬರೆದ ಕಥೆಗೆ ರವಿ ನಾಯ್ಕ ಉತ್ತಮ ರೀತಿಯಲ್ಲಿ ನಿರ್ದೇಶನ ಮಾಡಿ ಅವರದ್ದೇ ಊರಿನ ಯುವಕರನ್ನು ಕಲಾವಿದರಾಗಿ ಬಳಸಿಕೊಂಡು ಸಸ್ಪೆನ್ಸ, ಥ್ರಿಲಿಂಗ್ ಕಥೆಗೆ ಹೊಸಬರ ತಂಡವೂ ಸಾಥ್ ನೀಡಿದೆ.
ಈ ತಂಡ ಕೋರೋನಾ ಲಾಕ್ ಡೌನ ಪೂರ್ವದಲ್ಲಿ ಕಥೆ ಬರೆದು ವಿಶೇಷವಾಗಿ ಎಲ್ಲವನ್ನು ಮೊಬೈಲನಲ್ಲಿಯೇ ಚಿತ್ರಿಸಿಕೊಂಡಿದ್ದು ವಿಡಿಯೋ ಸಂಕಲನಕ್ಕಾಗಿ ಕಾದು ಕುಳಿತಿತ್ತು. ಇದಕ್ಕೆ ಪೂರಕವೆಂಬಂತೆ ತಂಡದಲ್ಲಿದ್ದ ಚೇತನ ಎಂಬ ಯುವಕ ಮೊಬೈಲನಲ್ಲಿಯೇ ಕೆಲವು ಚಿತ್ರಿತ ತುಣುಕನ್ನು ಸಂಕಲನ ಮಾಡಿ ತಂಡದ ಸದಸ್ಯರಲ್ಲಿ ತೋರಿಸಿದಾಗ ತಂಡದವರನ್ನು ಚೇತನ ಬಳಿಯೇ ಕಿರು ಚಿತ್ರದ ಸಂಕಲನಕ್ಕೆ ನೀಡಿದರು. ಎಲ್ಲರು ಹೊಸಬರೆ ಆಗಿದ್ದರು ಸಹ ಕಿರು ಚಿತ್ರವನ್ನು ಮಾಡಲೇಬೇಕೆಂಬ ಹೆಬ್ಬಯಕೆಯೂ ಅವರಲ್ಲಿದ್ದ ಕಾರಣ ಉತ್ತಮವಾಗಿ ಕಿರುಚಿತ್ರ ಜನರು ಮುಂದೆ ಬಂದಿದೆ. ಹೊಸ ತಂಡವಾಗಿದ್ದರಿಂದ ತಪ್ಪುಗಳು ಸಹಜವಾಗಿದೆ. ಕೆಲವು ಅಲ್ಪ ಸ್ವಲ್ಪ ದೋಷಗಳಿದ್ದರು ಎಲ್ಲರ ಪ್ರಯತ್ನಕ್ಕೆ ಸಮಾಜಕ್ಕೆ ನೀಡುವ ಸಂದೇಶಕ್ಕೆ ಪ್ರೇಕ್ಷಕರು ಭಟ್ಕಳದ ಜನರು ಅವರಿಗೆ ಪ್ರೋತ್ಸಾಹಿಸಲೇಬೇಕಿದೆ.
ಪುರವರ್ಗದ ಸ್ಥಳಿಯ ಯುವಕರಾದ ರವಿ, ಚೇತನ್, ಮಂಜುನಾಥ, ರಾಜೇಶ, ಮಹೇಶ, ಜಗದೀಶ, ನವೀನ್, ವಾಮನ್, ವಿಜಯ್, ಲೋಕೇಶ, ಪುರುಷೋತ್ತಮ, ಸಂತೋಷ, ನಾಗರಾಜ್, ಮಂಜು ಗೊರಟೆ, ರಾಮ್ ತಲಾಂದ, ರತನ್ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಸ್ಥಳಿಯ ಉದ್ದಿಮೆದಾರರು ಹಾಗು ಶ್ರೀ ಮಹಾಗಣಪತಿ ಮಹಾಸತಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸರ್ಪನಕಟ್ಟೆ ಅಧ್ಯಕ್ಷ ಈರಪ್ಪ ಗರ್ಡೀಕರ ಅವರು ಕಿರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕ್ಯಾಮರ ಮೆನ್ ಆಗಿ ರತನ್ ಹಾಗೂ ಮಹೇಶ ಕೆಲಸ ನಿರ್ವಹಿಸಿದ್ದಾರೆ. ಈ ಕೆಳಗಿನ ಪೇಸ್‌ಬುಕ್ ಐಕಾನ್ ಮೇಲೆ ಕ್ಲಿಕ್ ಮಾಡಿ, ಇದರ ವಿಡಿಯೋ ಸುದ್ದಿಯನ್ನು ಕೂಡಾ ನೋಡಬಹುದು.

ನಿಮ್ಮ ಬೆಂಬಲ ಬೇಕು

‘ಜಿಲ್ಲೆಯ ಸಾಕಷ್ಟು ಕಡೆಗಳಲ್ಲಿ ಯುವಕರು ಕಿರು ಚಿತ್ರ ನಿರ್ಮಿಸುತ್ತಿದ್ದು ಅದು ನಮಗೆ ಸ್ಪೂರ್ತೀಯಾಗಿಟ್ಟುಕೊಂಡು ನಾವು ಸಹ ಕಿರು ಚಿತ್ರ ನಿರ್ಮಿಸಬೇಕೆಂದು ಆಲೋಚಿಸಿದೆವು. ಅದರಂತೆ ಕಥೆ ಬರೆದು ಒಂದು ತಂಡ ರಚಿಸಿ ಎಲ್ಲವೂ ಅಂದುಕೊಂಡಂತೆ ನಡೆದು ಇಂದು ಚಿತ್ರ ಬಿಡುಗಡೆ ಮಾಡಿದ್ದೇವೆ. ನಮಗೆ ಜಿಲ್ಲೆಯ ಕಿರು ಚಿತ್ರ ಪ್ರೇಕ್ಷಕರ ಹೆಚ್ಚಿನ ಪ್ರೋತ್ಸಾಹ ಬೆಂಬಲ ಸಿಕ್ಕಿದ್ದಲ್ಲಿ ಇನ್ನಷ್ಟು ಚಿತ್ರ ನಿರ್ಮಿಸುವ ಆಸೆಯಿದೆ. ನಮಗೆ ಉತ್ತರ ಕನ್ನಡ ಶಾರ್ಟ ಮೂವಿ ಕ್ಲಬ್ ವತಿಯಿಂದಲೂ ಪ್ರೋತ್ಸಾಹ ಸಿಕ್ಕಿದ್ದು, ಮುಂದೆ ಬಿಡುಗಡೆಯಾಗಲಿರುವ ಮುಂದಿನ ಭಾಗಕ್ಕೂ ಅವರ ಸಹಕಾರ ಅಗತ್ಯವಾಗಿದೆ.’

– ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

[sliders_pack id=”1487″]

Back to top button