50 ಜನರಿಗೆ ಸಾವಿರ ರೂ. ಗೆಲ್ಲುವ ಅವಕಾಶ
ವಿಭಿನ್ನ ಸ್ಪರ್ಧೆ ಆಯೋಜನೆ
ಜೂನ್ 10 ರೊಳಗೆ ಹೆಸರು ನೊಂದಾಯಿಸಿಕೊಳ್ಳಿ
ಅಂಕೋಲಾ: ಮೈಕಾ ಎಂದು ಕರೆಯಿಸಿಕೊಳ್ಳುವ ಮಾವೇರಿಕ್ಸ್ ಯುಥ ಕ್ಲಭ್ ಅಂಕೋಲಾ, ನೊಂದಾಯಿತ ಸಂಘವಾಗಿದ್ದು, ಕಳೆದ ಎರಡು ತಿಂಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿದ್ದರೂ ಲಾಕ್ ಡೌನ್ ಅವಧಿಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲ ಪೊಲೀಸ್ ಮತ್ತಿತರ ಸಿಬ್ಬಂದಿ ಗಳಿಗೆ ಚಹಾ ಮತ್ತು ಉಪಹಾರವನ್ನು ಪ್ರತಿದಿನ ಪೂರೈಸಿ ಗಮನಸೆಳದಿತ್ತು. ಯುವ ಜನತೆಯಲ್ಲಿ ಹಸಿರಿನ ಮಹತ್ವನ್ನು ಸಾರಲು ಮುಂದಾಗಿರುವ ಸಂಘಟನೆಯ ಪ್ರಮುಖರು, ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಅಂಕೊಲಾ ತಾಲೂಕಿನಲ್ಲಿ ಹೊಸತನದ ಸ್ಪರ್ಧೆಯೊಂದನ್ನು ನಡೆ ಸಲು ಉತ್ಸುಕರಾಗಿದ್ದಾರೆ. 18 ವರ್ಷ ವಯೋಮಿತಿಯ ಒಳಗಿನ ವಿದ್ಯಾರ್ಥಿಗಳಿಗಾಗಿ ಈ ಸ್ಪರ್ಧೆ ನಡೆಯ ಲಿದ್ದು, ಜೂನ್ 10ರೊಳಗೆ ಆಸಕ್ತರು ಹೆಸರು ನೊಂದಾಯಿಸಿಕೊಳ್ಳಬೇಕಿದೆ. ಮೊದಲು ಅರ್ಜಿ ಸಲ್ಲಿಸಿದ 50 ವಿದ್ಯಾರ್ಥಿಗಳಿಗಷ್ಟೇ ಭಾಗವಹಿಸಲು ಅವಕಾಶವಿದೆ.
ಪ್ರತಿ ವಿದ್ಯಾರ್ಥಿಗೆ ಆರಂಭಿಕ ಹಂತದಲ್ಲಿ ತಲಾ 10 ಸಸಿಗಳನ್ನು ವಿತರಿಸಲಾಗುತ್ತಿದ್ದು, ಮುಂದಿನ ವರ್ಷ ಇದೇ ಸಮಯದಲ್ಲಿ ಆ ಸಸಿಗಳ ಬೆಳವಣಿಗೆ ಮತ್ತು ಜೋಪಾನ ಕ್ರಮವನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ. ರಂತೆ ಹಸಿರು ಪೋಷಣೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು.
-ಸುನೀಲ್ ಎಂ., ತಾ.ಪಂ. ಎಡಿ
ಹೆಚ್ಚಿನ ಮಾಹಿತಿಗಾಗಿ ಮೈಕಾ ಸಂಘಟನೆಯ ಪದಾಧಿಕಾರಿಗಳಾದ ಸಚಿನ ನಾಯಕ (9591271795), ನಾಗರಾಜ ನಾಯಕ(9880034384),ಸೂರಜ ನಾಯ್ಕ(9663610951), ಮಂಜುನಾಥ ವಿ.ನಾಯ್ಕ (9844 388399) ಇವರನ್ನು ಸಂರ್ಕಿಸಬಹುದಾಗಿದೆ.ಇದರ ವಿಡಿಯೋ ಸುದ್ದಿಗಾಗಿ ಈ ಕೆಳಗಿನ ಫೇಸ್ ಬುಕ್ ಐಕಾನ್ ಕ್ಲಿಕ್ ಮಾಡಿ ನೋಡಿ
-ವಿಸ್ಮಯ ನ್ಯೂಸ್, ವಿಲಾಸ್ ನಾಯಕ ಅಂಕೋಲಾ