ಅಂಕೋಲಾ : ತಾಲೂಕಿನ ವಿವಿಧೆಡೆ ಲಾಲಬಹಾದೂರ್ ಶಾಸ್ತ್ರೀ ಮತ್ತು ಮಹಾತ್ಮ ಗಾಂಧೀಯವರ ಜನ್ಮ ದಿನಾಚರಣೆಯನ್ನು ಸರಳ ಮತ್ತು ಗೌರವ ಪೂರ್ಣವಾಗಿ ಆಚರಿಸಲಾಯಿತು. ಹಲವೆಡೆ ಶ್ರಮದಾನ ನಡೆಸಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ತಹಶೀಲ್ದಾರ ಕಚೇರಿಯಲ್ಲಿ : ಸ್ವಚ್ಚತಾ ಹಿ ಸೇವಾ ಪರಿಕಲ್ಪನೆಯಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್ ಗಳಲ್ಲಿ ಸ್ವಚ್ಛತಾ ಸಪ್ತಾಹ ಹಮ್ಮಿಕೊಳ್ಳಲಾಗುತ್ತಿದ್ದು, ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳನ್ನೊಳ ಗೊಂಡ ಸ್ವಚ್ಚತ್ತಾ ಕಾರ್ಯಕರ್ತರ ತಂಡಕ್ಕೆ ಜವಬ್ದಾರಿ ವಹಿಸಿ ಸ್ವಚ್ಚತ್ತಾ ಪರಿಕರಗಳನ್ನು ವಿತರಿಸಲಾಯಿತು. ತಹಶೀಲ್ದಾರ ಉದಯ ಕುಂಬಾರ ರಾಷ್ಟç ನಾಯಕರ ಜನ್ಮದಿನಾಚರಣೆ ಮಹತ್ವ ವಿವಿರಿಸಿ ಹಿರಿಯರ ತತ್ವಾ ದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು. ಸ್ವಚ್ಚತ್ತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಹಾದ್ ಸ್ವಚ್ಚತಾ ಸಪ್ತಾಹ ಯಶಸ್ವಿಗೊಳಿಸಲು ಸರ್ವರ ಸಹಕಾರ ಕೋರಿದರು. ಶಿಕ್ಷಣ ಇಲಾಖೆ, ಅಗ್ನಿಶಾಮಕ ದಳ, ಸಾರಿಗೆ ಸಂಸ್ಥೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹೆಸ್ಕಾಂ, ಆರೋಗ್ಯ ಇಲಾಖೆ, ಜಿ.ಪಂ. ಮತ್ತು ಲೋಕೋಪಯೋಗಿ ಇಲಾಖೆ ಸೇರಿದಂತೆ ನಾನಾ ಇಲಾಖೆ ಗಳ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು. ಸ್ವಚ್ಚತಾ ಕಾರ್ಯಕರ್ತರ ತಂಡ ವಿವಿಧ ವಾರ್ಡ್ಗಳಿಗೆ ತೆರಳಿ ಶ್ರಮದಾನ ನಡೆಸಿ ಸ್ವಚ್ಚತ್ತಾ ಕಾರ್ಯಕ್ಕೆ ಮುಂದಾಗಿವೆ. ಸಾರ್ವಜನಿಕರು ಸಹ ಹಲವೆಡೆ ಕೈಜೋಡಿ ಸುತ್ತಿದ್ದಾರೆ.
ಪೊಲೀಸ್ ಹಾಗೂ ಮೀನುಗಾರಿಕೆ ಇಲಾಖೆ : ಸಿಪಿಐ ಕೃಷ್ಣಾನಂದ ನಾಯಕ, ಪಿಎಸ್‌ಐ ಈ.ಸಿ.ಸಂಪತ್ ಮತ್ತು ಸಿಬ್ಬಂದಿಗಳು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ ಮತ್ತು ಸಿಬ್ಬಂದಿಗಳು ಆವರಣದ ಸ್ವಚ್ಚತ್ತೆಗೆ ವಿಶೇಷ ಒತ್ತು ನೀಡಿ ಶ್ರಮದಾನ ಮಾಡಿದರು.
ತಾಲ್ಲೂಕ ಪಂಚಾಯತ್, ಪುರಸಭೆ, ಅರಣ್ಯ ಇಲಾಖೆ ಮತ್ತಿತರ ಇಲಾಖೆಗಳು ಸರಳ ಆಚರಣೆ ಮೂಲಕ ದೀಮಂತ ನಾಯಕರನ್ನು ಸ್ಮರಿಸಿದಲ್ಲದೇ, ತಮ್ಮ ಕಾರ್ಯಲಯದ ವ್ಯಾಪ್ತಿಯಲ್ಲಿ ಸ್ವಚ್ಚತಾ ಶ್ರಮದಾನ ನಡೆಸಿ ದರು. ರೋಟರಿ, ಲಾಯನ್ಸ್, ಮತ್ತಿತರ ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳಲ್ಲಿಯೂ ಅರ್ಥಪೂರ್ಣ ಆಚರಣೆ ಹಮ್ಮಿಕೊಂಡಿದ್ದವು. ವಿವಿಧ ರಾಜಕೀಯ ಪಕ್ಷಗಳ ಕಚೇರಿಯಲ್ಲಿಯೂ ಸರಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗಾಂಧಿ ತಾತನ ಜನ್ಮದಿನದಂದೇ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ, ಇಲ್ಲಿಯ ಸ್ಮಾರಕ ಭವ ನದ ಆವರಣದ ಗಾಂಧಿ ಪ್ರತಿಮೆ ಬಳಿ ಕರ್ನಾಟಕ ಪ್ರಾಂತ ರೈತ ಸಂಘದವರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಮ್ಮದೇ ಆದ ರೀತಿಯಲ್ಲಿ ವಿನೂ ತನ ಪ್ರತಿಭಟನೆ ನಡೆಸಿದರು.
ಬಾಸಗೋಡದ ಮಹಾತ್ಮ ಮಂದಿರ : ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನದೇ ಆದ ಹಿರಿಮೆ ಹೊಂದಿರುವ ಅಂಕೋಲಾದಲ್ಲಿ ಚೌಕದ ಹಳ್ಳಿಯ ಪಾತ್ರವು ಹಿರಿದಾಗಿದ್ದು, ಕೇಂದ್ರ ಸ್ಥಾನವಾದ ಬಾಸಗೋಡದಲ್ಲಿ 1951 ರಲ್ಲಿ ಕರಬಂಧಿ ವೀರ ರಾಮ ನಾಯಕ ಗಾಂಧೀಜಿಯವರ ಅಭಿಮಾನದಿಂದ ಮಂದರಿ ನಿರ್ಮಿಸಿ ಗಾಂಧೀ ಪುತ್ತಳಿ ಪ್ರತಿಷ್ಠಾಪಿಸಿದ್ದರು. ರಾಷ್ಟçಪಿತ ಮಹಾತ್ಮಗಾಂಧಿ ಮಂದಿರವೆಂದೇ ಪ್ರಸಿದ್ದಿಯಾಗಿರುವ ಈ ಸ್ಥಳದಲ್ಲಿ ರಾಮ ನಾಯಕ ಕುಟುಂಬಸ್ಥರು ಮತ್ತು ಸುತ್ತಮುತ್ತಲ ಹಳ್ಳಿಗರು ಗೌರವ ಪೂರ್ವಕ ಆಚರಣೆ ಮುಂದುವರಿಸಿಕೊಂಡು ಬಂದಿದ್ದಾರೆ.
ಲಕ್ಷ್ಮೇಶ್ವರ ಮನೆಯಂಗಳದಲ್ಲಿ ತಾತನಿಗೆ ನಿತ್ಯ ಪೂಜೆ : ನಿವೃತ್ತ ಪೋಸ್ಟ್ಮೆನ್ ಲಿಂಗು ಬಲಿಯಾ ಲಕ್ಷ್ಮೇಶ್ವರ ಇವರ ಮನೆಯಂಗಳದ ತುಳಸಿ ಕಟ್ಟೆಯ ಪಕ್ಕ ಗಾಂಧಿ ತಾತನಿಗೆ ಪ್ರತ್ಯೇಕ ಚಿಕ್ಕ ಗುಡಿ ನಿರ್ಮಿಸಿ ಅಲ್ಲಿಯೇ ಲಕ್ಷ್ಮೇಶ್ವರ ಕುಟುಂಬಸ್ಥರು ನಿತ್ಯಪೂಜೆ ಸಲ್ಲಿಸಲಾಗುತ್ತಿದೆ. ಉಬ್ಬು ಕಲಾಕೃತಿಯಂತಿರುವ ಗಾಂಧಿ ಪ್ರತಿಮೆ ನೋಡಲು ಹಲವರು ಆಗಾಗ ಬಂದುಹೋಗುತ್ತಿರುತ್ತಾರೆ. ತಾಲೂಕಾ ಆರೋಗ್ಯಾಧಿಕಾರಿ ಡಾ.ಅರ್ಚನಾ ನಾಯ್ಕ ಮತ್ತು ಸಿಬ್ಬಂದಿಗಳು ಹೂ-ಹಾರ ಸರ್ಮಿಪಿಸಿ ರಾಷ್ಟ್ರಪಿತನಿಗೆ ಗೌರವ ಸೂಚಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.