Focus News
Trending

ಮಾನವೀಯ ನೆರವು : ಮೃತ ಛಾಯಾಗ್ರಾಹಕನ ಕುಟುಂಬಕ್ಕೆ ನೆರವಿನ ಚೆಕ್ ಹಸ್ತಾಂತರ

ಅಂಕೋಲಾ: ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ಅಂಕೋಲಾತಾಲೂಕಿನ ಲಕ್ಷ್ಮೇಶ್ವರ ಕುಂಬಾರಕೇರಿಯ ಛಾಯಾಗ್ರಾಹಕ ಪ್ರಶಾಂತ ಕಾಮೇಶ್ವರ ನಾಯ್ಕ ಅವರ ಕುಟುಂಬಕ್ಕೆ ಕರ್ನಾಟಕ ರಾಜ್ಯ ಛಾಯಾಗ್ರಾಹಕರ ಸಂಘ, ಉತ್ತರ ಕನ್ನಡ ಜಿಲ್ಲಾ ಛಾಯಾಗ್ರಾಹಕರ ಸಂಘ ಹಾಗೂ ಅಂಕೋಲಾ ತಾಲೂಕು ಛಾಯಾಗ್ರಾಹಕರ ಸಂಘಗಳ ವತಿಯಿಂದ ಸುಮಾರು 1 ಲಕ್ಷ ನೆರವಿನ ರೂಪದಲ್ಲಿ ಚೆಕ್ ಹಸ್ತಾಂತರಿಸಲಾಯಿತು.

ಮೃತರ ನಿವಾಸಕ್ಕೆ ಭೇಟಿ ನೀಡಿದ ಸಂಘದ ರಾಜ್ಯ ಅಧ್ಯಕ್ಷರು ಮತ್ರಿತರ ಪದಾಧಿಕಾರಿಗಳು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಸಂಕಷ್ಟದ ಸಮಯದಲ್ಲಿ ಸಂಘ ಅವರೊಂದಿಗೆ ನಿಲ್ಲಲಿವೆ ಎಂಬ ಭರವಸೆ ನೀಡಿದರು. ಈ ವೇಳೆ ರಾಜ್ಯ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನಾಗೇಶ್ ಅವರು ಸಂಘಟನೆಗಳ ಸಹಕಾರದಿಂದ ಸಂಗ್ರಹಿಸಲಾದ ಚೆಕ್ ಅನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು, ಪ್ರಶಾಂತ ನಾಯ್ಕ ಅವರ ಅಕಾಲಿಕ ನಿಧನದಿಂದ ಕುಟುಂಬದ ಆಧಾರಸ್ತಂಭವೇ ಕಳೆದುಹೋಗಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ತಂದೆ-ತಾಯಿಯ ಸ್ಥಿತಿ ಮನಕಲಕುವಂತಿದೆ ಎಂದರು. ಅವರ ಕುಟುಂಬಕ್ಕೆ ಅಗತ್ಯ ಸಹಾಯ-ಸಹಕಾರ ಒದಗಿಸುವ ನಿಟ್ಟಿನಲ್ಲಿ ಸಂಘಟನೆಗಳು ಮುಂದೆಯೂ ಕೈಜೋಡಿಸಲಿವೆ. ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿoದ ನೆರವು ದೊರಕಿಸುವ ಪ್ರಯತ್ನ ನಡೆಸುವುದರ ಜೊತೆಗೆ, ಸಾಧ್ಯವಾದರೆ ಕುಟುಂಬಕ್ಕೆ ಉತ್ತಮ ಸೂರು ಕಲ್ಪಿಸುವ ದಿಸೆಯಲ್ಲಿಯೂ ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಭಟ್ಟ, ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಸುರೇಶ ಹೊನ್ನಾವರ, ಜಿಲ್ಲಾ ಕಾರ್ಯದರ್ಶಿ ಕಿರಣ ಶಾನಭಾಗ, ಅಂಕೋಲಾ ತಾಲೂಕು ಅಧ್ಯಕ್ಷ ಶ್ರೀನಿವಾಸ ರಾಮನಾಥಕರ್, ಕಾರ್ಯದರ್ಶಿ ಹರೀಶ ನೇರಳಕಟ್ಟೆ, ಕುಮಟಾ ತಾಲೂಕು ಅಧ್ಯಕ್ಷ ಪ್ರಶಾಂತ ನಾಯ್ಕ, ಕಾರ್ಯದರ್ಶಿ ವಿನಾಯಕ ನಾಯ್ಕ ಸೇರಿದಂತೆ ರಾಜ್ಯ, ಜಿಲ್ಲಾ ಹಾಗೂ ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಸ್ಥಳೀಯರಾದ ಅರವಿಂದ ನಾಯ್ಕ, ಸಂದೇಶ ನಾಯ್ಕ, ಗೌರೀಶ ನಾಯ್ಕ ಸೇರಿದಂತೆ ಊರ ನಾಗರಿಕರು ಮತ್ತು ಕುಟುಂಬದ ಹಿತೈಷಿಗಳಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button