Focus News
Trending

ಖಾಸಗೀಕರಣಕ್ಕೆ ವಿರೋಧ : ಹೆಸ್ಕಾಂ ಕಚೇರಿ ಎದುರಿಗೆ ಅಧಿಕಾರಿಗಳ, ನೌಕರರ ಪ್ರತಿಭಟನೆ

ಹೊನ್ನಾವರ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಹೊನ್ನಾವರ ಪಟ್ಟಣದ ಹೆಸ್ಕಾಂ ಕಚೇರಿ ಎದುರಿಗೆ ಅಧಿಕಾರಿಗಳು, ನೌಕರರು ಗೇಟ್ ಮೀಟಿಂಗ್ ನಡೆಸಿ ಸರ್ಕಾರಕ್ಕೆ ಪತ್ರ ಹಾಗೂ ಆನ್ಲೈಲ್ ಯೋಜನೆ ಜಾರಿಗೊಳಿಸದಂತೆ ಆಗ್ರಹಿಸುವುದಾಗಿ ತಿರ್ಮಾನಿಸಿದರು. ಕೇಂದ್ರ, ರಾಜ್ಯ ಸರ್ಕಾರಗಳು ಒಂದೊoದೇ ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸುತ್ತಿದ್ದು, ವಿದ್ಯುತ್ ಖಾಸಗಿಕರಣ ತಡೆಯದಿದ್ದರೆ ಮುಂದೆ ಹೆಸ್ಕಾಂ ನೌಕರರಷ್ಟೆ ಅಲ್ಲದೇ , ರೈತರು ಕಾರ್ಮಿಕರು, ಸಾರ್ವಜನಿಕರಿಗೂ ತೊಂದರೆಯಾಗುತ್ತದೆ.

ಆದ್ದರಿಂದ ಖಾಸಗೀಕರಣದ ವಿರುದ್ಧ ಹೋರಾಡುತ್ತಿರುವ ಹೆಸ್ಕಾಂ ನೌಕರರಿಗೆ ಸಾರ್ವಜನಿಕರು ರೈತ ಸಂಘಟನೆ ಸೇರಿದಂತೆ ಎಲ್ಲಾ ಸಂಘಟನೆ ಒಗ್ಗೂಡಿ ಬೆಂಬಲಿಸಬೇಕು. ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿಗೊಳಿಸಲು ತೀರ್ಮಾನಿಸಲಾಯಿತು.

ಈಗಾಗಲೇ ಕರ್ನಾಟಕದಲ್ಲಿ ಖಾಸಗಿಕರಣ ನಡೆಸುವ ಕೆಲಸ ಪ್ರಾರಂಭಗೊoಡಿದೆ. ಟಾಟಾ ಕಂಪನಿಯವರು ಖಾಸಗಿಯಾಗಿ ಪಡೆಯಲು ಅರ್ಜಿ ಹಾಕಿದ್ದಾರೆ. ಖಾಸಗಿಯವರಿಗೆ ನೀಡಬೇಕಾದರೆ ಕರ್ನಾಟಕ ವಿದ್ಯುತ್ವಕ್ತಿ ನಿಯಂತ್ರಣ ಆಯೋಗ ಸಾರ್ವಜನಿಕರ ಅಭಿಪ್ರಾಯ, ಆಕ್ಷೇಪಣೆಗಳನ್ನು ಪಡೆಯಬೇಕು. ಆಕ್ಷೇಪಣೆಗಳನ್ನು ಸಲ್ಲಿಸಲು ಜೂನ್ 23ರ ತನಕ ಅವಕಾಶವಿದ್ದು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಖಾಸಗೀಕರಣಗೊಂಡರೆ ಕೃಷಿ, ಕೈಗಾರಿಕೆ, ಗುತ್ತಿಗೆದಾರರು ಸಹಿತ ಎಲ್ಲಾ ವರ್ಗದವರಿಗೂ ಪರಿಣಾಮ ಬೀಳಲಿದೆ. ಹೀಗಾಗಿ ಪ್ರತಿಯೊಬ್ಬ ನಾಗರೀಕರು ಆಕ್ಷೇಪಣೆಗಳನ್ನು ಸಲ್ಲಿಸುವ ಮೂಲಕ ಖಾಸಗೀಕರಣದಿಂದ ಸಂಭವಿಸಬಹುದಾದ ದುಷ್ಪರಿಣಾಮ ತಡೆಯುವಂತೆ ಪ್ರತಿಭಟನೆಯಲ್ಲಿ ಆಗ್ರಹ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಟಿಸಿಎಲ್ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ರವಿ ನಾಯ್ಕ ಮಾತನಾಡಿ ಖಾಸಗಿಕರಣದಿಂದ ಹೆಸ್ಕಾಂ ಸಿಬ್ಬಂದಿಗಳ ಪ್ರತಿಯೊಂದು ಸೌಲಭ್ಯಕ್ಕೂ ಸಮಸ್ಯೆ ಉಂಟಾಗಲಿದೆ. ಮುಂದೆ ಮೆಡಿಕಲ್ ಸೌಲಭ್ಯದಿಂದ ನಾವೆಲ್ಲರೂ ವಂಚಿತರಾಗಬಹುದು. ಬಿ.ಎಸ್.ಎನ್.ಎಲ್ ಖಾಸಗಿಕರಣ ಮಾಡಿದ ಬಳಿಕ ಉಂಟಾದ ಸಮಸ್ಯೆಯು ಇಲ್ಲಿಯು ಅನುಭವಿಸಬೇಕಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಎಂಜೀನಿಯರ ಸಂದೇಶ ಬೊಮ್ಕಾರ್ ಮಾತನಾಡಿ ಟಾಟಾ ಕಂಪನಿಯ ಉದ್ದೇಶ ಲಾಭ ಮಾಡುವ ಉದ್ದೇಶದಿಂದ, ಮೊದಲು ಕಡಿಮೆ ದರ ಮಾಡಿ ಜನರನ್ನು ಆಕರ್ಷಣೆ ಮಾಡಿ ನಂತರ ದರ ಏರಿಸುತ್ತಾರೆ. ರಾಜ್ಯದಲ್ಲಾದರೂ ವಿದ್ಯುತ್ ಖಾಸಗಿಕರಣ ತಡೆಯೋಣ. ಬಲಾಡ್ಯ ಸಂಸ್ಥೆ ನಮ್ಮ ಖರೀದಿಗೆ ಬರುತ್ತಿದೆ. ಸಾವಿರಾರು ಉದ್ಯೋಗಿಗಳು ಬೀದಿ ಪಾಲಾಗಬಹುದು ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಸಮಿತಿ ಸದಸ್ಯರಾದ ರಾಮ ಪೂಜಾರಿ ಕಾರವಾರ, ವಿಭಾಗದ ಕೇಂದ್ರ ಸಮಿತಿ ಸದಸ್ಯ ರಾಘು ನಾಯ್ಕ ಹಾಗೂ ಸ್ಥಳೀಯ ಸಮಿತಿಯ ಅಧ್ಯಕ್ಷರು ಪ್ರಶಾಂತ್ ಗಾವ್ಕರ್, ಶಂಕರ ಗೌಡ, ಕೆಪಿಟಿಸಿಎಲ್ , ನೌಕರರು, ನಿವೃತ್ತ ನೌಕರರು, ಗುತ್ತಿಗೆದಾರರು, ಅರೇ ಗುತ್ಥಿಗೆದಾರರು, ಕಾರ್ಯದರ್ಶಿ ಸತೀಶ ನಾಯ್ಕ, ಹೊನ್ನಾವರ, ಕುಮಟಾ, ಭಟ್ಕಳ, ಶಿರಸಿ ವಿಭಾಗದ ಕೆಪಿಟಿಸಿಎಲ್ ಅಧಿಕಾರಿಗಳು, ನೌಕರರು ಸಿಬ್ಬಂದಿಗಳು ಉಪಸ್ಥಿತರಿದ್ದರು

ವಿಸ್ಮಯ ನ್ಯೂಸ್, ವಿವೇಕ್ ಶೇಟ್, ಹೊನ್ನಾವರ

Back to top button