ಹೊನ್ನಾವರ ತಾಲೂಕಿನಲ್ಲಿ 15 ಪಾಸಿಟಿವ್
ಕುಮಟಾದಲ್ಲಿ 9 ಕೇಸ್ ದೃಢ
ಕುಮಟಾ: ತಾಲೂಕಿನಲ್ಲಿ ಇಂದು ಒಟ್ಟು 9 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಮಿರ್ಜಾನ್, ತಲಗೇರಿ, ದಿವಳ್ಳಿ, ಹೆಗಡೆ, ಕೋಟಿತೀರ್ಥ, ಬೆಲೆಹಿತ್ಲ ಮತ್ತು ದೇವರಬಾವಿಯಲ್ಲಿ ಇಂದು ಕರೊನಾ ಕೇಸ್ ದೃಢಪಟ್ಟಿದೆ.
ಮಿರ್ಜಾನಿನ 39 ವರ್ಷದ ಮಹಿಳೆ, ತಲಗೇರಿಯ 45 ವರ್ಷದ ಮಹಿಳೆ, ಹೆಗಡೆಯ 45 ವರ್ಷದ ಪುರುಷ, ದಿವಳ್ಳಿಯ 44 ವರ್ಷದ ಪುರುಷ, ಕೋಟಿತೀರ್ಥದ 33 ವರ್ಷದ ಮಹಿಳೆ, 71 ವರ್ಷದ ವೃದ್ಧೆ, 73 ವರ್ಷದ ವೃದ್ಧ, ಬೆಲೆಹಿತ್ಲದ 20 ವರ್ಷದ ಪುರುಷ ಹಾಗೂ ದೇವರಬಾವಿಯ 50 ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಇಂದು 9 ಪ್ರಕರಣ ದಾಖಲಾದ ಬೆನ್ನಲ್ಲೆ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1403 ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ 15 ಕೇಸ್ ದಾಖಲು:
ಹೊನ್ನಾವರ: ತಾಲೂಕಿನಲ್ಲಿ ಇಂದು 15 ಜನರಲ್ಲಿ ಕರೊನಾ ದೃಢಪಟ್ಟಿದೆ. ಪಟ್ಟಣ ವ್ಯಾಪ್ತಿಯಲ್ಲಿ 1, ಮಂಕಿಯಲ್ಲಿ 3, ಕರ್ಕಿಯಲ್ಲಿ 6, ಮಾವಿನಕುರ್ವಾದಲ್ಲಿ 2, ಹಳದೀಪುರ- ಕಾಸರಕೋಡಿನಲ್ಲಿ ತಲಾ ಒಂದು ಪ್ರಕರಣ ಕಾಣಿಸಿಕೊಂಡಿದೆ.
ಹೊನ್ನಾವರ ಪಟ್ಟಣದ ಜಡ್ಡಿಕೇರಿಯ 39 ವರ್ಷದ ಪುರುಷ, ಮಂಕಿ ಗುಳದಕೇರಿಯ 58 ವರ್ಷದ ಮಹಿಳೆ, 32 ವರ್ಷದ ಯುವಕ, 19 ವರ್ಷದ ಯುವತಿ, ಕಾಸರಕೋಡಿನ 31 ವರ್ಷದ ಯುವತಿ, ಹಳದೀಪುರದ 14 ವರ್ಷದ ಬಾಲಕ, ಮಾವಿನಕುರ್ವಾದ 70 ವರ್ಷದ ಪುರುಷ, 65 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದೆ.
ಕರ್ಕಿಯ 64 ವರ್ಷದ ಪುರುಷ, 53 ವರ್ಷದ ಪುರುಷ, 38 ವರ್ಷದ ಪುರುಷ, 40 ವರ್ಷದ ಮಹಿಳೆ, 18 ವರ್ಷದ ಯುವಕ, 15 ವರ್ಷದ ಬಾಲಕಿಗೂ ಸೋಂಕು ಕಾಣಿಸಿಕೊಂಡಿದೆ. ತಾಲೂಕಾ ಆಸ್ಪತ್ರೆಯಲ್ಲಿ 13 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 119 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ವಿಸ್ಮಯ ನ್ಯೂಸ್, ಯೋಗೇಶ್ ಮಡಿವಾಳ ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ
ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ.
ಶ್ರೀ ಸಂಕಷ್ಟಹರ ಮಹಾಗಣಪತಿ ಜ್ಯೋತಿಷ್ಯ ಕೇಂದ್ರ: 9606187089
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.