
ಅನಾಹುತ ತಪ್ಪಿಸಿದ ಪೊಲೀಸರು
ದರೋಡೆಗಾಗಿ ರಸ್ತೆಯಲ್ಲಿ ಹೊಂಚು ಹಾಕಿದ್ದ ದುಷ್ಕರ್ಮಿಗಳು
ಗೋಕರ್ಣ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೋಗುವ ವಾಹನಗಳನ್ನು ತಡೆದು ದರೋಡೆ ಮಾಡಲು ಸಂಚು ರೂಪಿಸಿದ್ದ ಐವರು ಆರೋಪಿಗಳಲ್ಲಿ ಮೂವರನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಮತ್ತಿಬ್ಬರು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಆರೋಪಿಗಳಿಂದ 4.12 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಟ್ಕುಳಿ ಬಳಿ ಲಾರಿಗಳನ್ನು ಅಡ್ಡಗಟ್ಟಲು ಯೋಜನೆ ರೂಪಿಸಿದ್ದರು. ಕಾರಿನಲ್ಲಿ ಬಂದಿದ್ದ ಅವರು, ಮಾರಕಾಸ್ತ್ರ, ಖಾರದ ಪುಡಿ ಮುಂತಾದ ವಸ್ತುಗಳನ್ನು ಇಟ್ಟುಕೊಂಡಿದ್ದರು. ಈ ಸಂದರ್ಭದಲ್ಲೇ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ.
ಆರೋಪಿಗಳು ರಾಜ್ಯದ ಹಲವೆಡೆ ಹೆದ್ದಾರಿಯಲ್ಲಿ ದರೋಡೆ, ಮನೆಗಳಲ್ಲಿ ಕಳವು, ವಾಹನ ಕಳವು, ಸುಲಿಗೆ, ಡಕಾಯತಿ ಮುಂತಾದ್ 20ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗೋಕರ್ಣ ಪಿ.ಎಸ್.ಐ ನವೀನ್ ನಾಯ್ಕ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಸುಸಜ್ಜಿತವಾದ ವಾಣಿಜ್ಯ-ಕೈಗಾರಿಕಾ ಬಳಕೆಯ ಕಟ್ಟಡ ಬಾಡಿಗೆಗೆ ಲಭ್ಯ
- ರಸ್ತೆಯಲ್ಲಿ ಸಾಗುತ್ತಿದ್ದ ಜನರ ಮೇಲೆ ಏಕಾಏಕಿ ಹೆಜ್ಜೇನು ದಾಳಿ: ಆರಕ್ಕೂ ಹೆಚ್ಚು ಮಂದಿಗೆ ಗಾಯ
- ಸರಕಾರದ ಅನುದಾನ ಬಳಸಿಕೊಳ್ಳದೇ ಸರ್ಕಾರಿ ಪ್ರೌಢ ಶಾಲೆಯೊಂದರಲ್ಲಿ ಉದ್ಯಾನವನ ನಿರ್ಮಾಣ: ಎಲ್ಲರ ಮೆಚ್ಚುಗೆ
- ಅಂಕೋಲೆ ಶ್ರೀ ಶಾಂತಾದುರ್ಗಾ ದೇವಸ್ಥಾನ ಗೋಪುರದ ಮೇಲ್ಚಾವಣಿಗೆ ತಾಮ್ರದ ಹೊದಿಕೆ: ಕೆಲಸ ಕಾರ್ಯಗಳು ಆರಂಭ
- ಕುಮಟಾ ಬ್ರೌನ್ ವುಡ್ ಗೆ ಏಪ್ರಿಲ್ 9 ರಂದು ವರ್ಷದ ಸಂಭ್ರಮ: ಏಪ್ರಿಲ್ 9ರ ಸಂಜೆ 5.30ಕ್ಕೆ ಮೊದಲ ವಾರ್ಷಿಕೋತ್ಸವ
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,