ಹೊನ್ನಾವರದಲ್ಲಿ ಮೂರು ಪಾಸಿಟಿವ್
ಯಲ್ಲಾಪುರದಲ್ಲಿ ಐವರಿಗೆ ಕರೊನಾ
ಜಿಲ್ಲೆಯಲ್ಲಿ 22 ಮಂದಿಗೆ ಸೋಂಕು ದೃಢ
ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 5 ಕರೊನಾ ಸೋಂಕಿತ ಪ್ರಕರಣ ದಾಖಲಾಗಿದೆ. ತಾಲೂಕಿನ ಅಘನಾಶಿನಿಯಲ್ಲಿ 3 ಪ್ರಕರಣ ದಾಖಲಾದರೆ, ಕುಮಟಾ ಪಟ್ಟಣ ಹಾಗೂ ಬೆಲೆಖಾನ ನಲ್ಲಿ ತಲಾ ಒಂದೊAದು ಪ್ರಕರಣ ದಾಖಲಾಗಿದೆ.
ಅಘನಾಶಿನಿಯ 56 ವರ್ಷದೆ ಪುರುಷ, 27 ವರ್ಷದ ಮಹಿಳೆ, 21 ವರ್ಷದ ಯುವತಿ, ಕುಮಟಾದ 46 ವರ್ಷದ ಮಹಿಳೆ, ಬೆಲೆಖಾನ ನ 75 ವರ್ಷದ ವೃದ್ದನಲ್ಲಿ ಸೋಂಕು ದೃಢಪಟ್ಟಿದೆ. ಇಂದು 5 ಹೊಸ ಪ್ರಕರಣ ದಾಖಲಾದ ಬೆನ್ನಲ್ಲೇ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1903 ಕ್ಕೆ ಏರಿಕೆಯಾಗಿದೆ.
ಹೊನ್ನಾವರದಲ್ಲಿ ಮೂರು ಪಾಸಿಟಿವ್:
ಹೊನ್ನಾವರ: ತಾಲೂಕಿನಲ್ಲಿ ಮೂರು ಪ್ರಕರಣಗಳು ದೃಢಪಟ್ಟಿದೆ. ಮೂರೂ ಪ್ರಕರಣಗಳು ಗ್ರಾಮೀಣ ಭಾಗದಲ್ಲಿಯೆ ಕಾಣಿಸಿಕೊಂಡಿದೆ. ತಲಗೋಡ- ನವಿಲಗೋಣ ಭಾಗದಲ್ಲಿ ಸೋಂಕು ಪತ್ತೆಯಾಗಿದೆ. ಹೊನ್ನಾವರ ತಾಲೂಕಿನ ತಲಗೋಡಿನ 16 ವರ್ಷದ ಯುವಕ, 16 ವರ್ಷದ ಯುವತಿ, ನವಿಲಗೋಣದ 19 ವರ್ಷದ ಯುವತಿ ಸೇರಿ ಇಂದು ಮೂರು ಜನರಲ್ಲಿ ಸೋಂಕು ಪತ್ತೆಯಾಗಿದೆ.
ಯಲ್ಲಾಪುರದಲ್ಲಿ ಐವರಿಗೆ ಕರೊನಾ
ಯಲ್ಲಾಪುರ: ತಾಲೂಕಿನಲ್ಲಿ ಬುಧವಾರ ಐವರಲ್ಲಿ ಕರೊನಾ ದೃಢಪಟ್ಟಿದ್ದು, 26 ಮಂದಿ ಗುಣಮುಖರಾಗಿದ್ದಾರೆ. ಉದ್ಯಮನಗರದಲ್ಲಿ 1 ಹಾಗೂ ಮಲವಳ್ಳಿಯಲ್ಲಿ 4 ಜನರಿಗೆ ಸೋಂಕು ತಗುಲಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 21 ಕ್ಕೆ ಇಳಿದಿದೆ.
ಜಿಲ್ಲೆಯಲ್ಲಿ 22 ಮಂದಿಗೆ ಪಾಸಿಟಿವ್:
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 22 ಮಂದಿ ಕರೊನಾ ಪಾಸಿಟಿವ್ ಬಂದಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 13,319ಕ್ಕೆ ಏರಿಕೆಯಾಗಿದೆ. ಇದೇ ವೇಳೆ 27 ಮಂದಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಪ್ರಕಟವಾದಂತೆ ಕಾರವಾರ 1, ಸಿದ್ದಾಪುರ 3, ಮುಂಡಗೋಡ 3, ಹಳಿಯಾಳ 2, ಶಿರಸಿಯಲ್ಲಿ ಒಂದು ಪ್ರಕರಣ ದೃಢಪಟ್ಟಿದೆ.
ವಿಸ್ಮಯ ನ್ಯೂಸ್ ನಾಗೇಶ ದೀವಗಿ, ಕುಮಟಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ವಿಸ್ಮಯ ಟಿ.ವಿ ಫಲಶೃತಿ: ಹೆದ್ದಾರಿಯಲ್ಲಿ ಹೊಂಡ ಗುಂಡಿ ಮುಚ್ಚುವ ಕಾರ್ಯ ಆರಂಭ
- ಅನಂತ್ಕುಮಾರ್ ಹೆಗಡೆಗೆ ಟಿಕೆಟ್ ತಪ್ಪಿಸಿದ್ದು ನಾನೇ!
- ಶಿರೂರು ಗುಡ್ಡ ಕುಸಿತ ದುರಂತ: ಮತ್ತೆ ಮುಂದುವರಿಯಲಿರುವ ಶೋಧ ಕಾರ್ಯಾಚರಣೆ
- ಆಟೋದಲ್ಲಿ ಪ್ಯಾಲೆಸ್ತೀನ್ ಬಂಬಲಿಸಿ ಧ್ವಜ: ಕೆಲವೇ ಗಂಟೆಯಲ್ಲಿ ಪೊಲೀಸರು ತೆರವುಗೊಳಿದ್ದು ಏಕೆ?
- ನೇಮಕಾತಿ: ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ: Canara Bank Recruitment