ಕೊವಿಡ್ ಕೇಸ್ 2 :
ಸ್ವ್ಯಾಬ್ ಟೆಸ್ಟ್ 170
ಅಂಕೋಲಾ : ತಾಲೂಕಿನಲ್ಲಿ ಬುಧವಾರ 2 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. ಹಿಚ್ಕಡದ 18 ರ ಯುವಕನೊರ್ವನ ಗಂಟಲು ದ್ರವ ಮಾದರಿಯನ್ನು ನ.12 ರಂದು ಸಂಗ್ರಹಿಸಿ ಕ್ರಿಮ್ಸ್ ಪ್ರಯೋಗಾ ಲಯದಲ್ಲಿ ತಪಾಸಣೆಗೆ ಒಳಪಡಿಸಲಾಗಿದ್ದು, ಸ್ವಲ್ಪ ತಡವಾಗಿ ಬಂದ ವರದಿಯಲ್ಲಿ ಪಾಸಿಟಿವ್ ಲಕ್ಷಣ ಕಂಡು ಬಂದಿದೆ. ಹಟ್ಟಿಕೇರಿ ವ್ಯಾಪ್ತಿಯ ಮಾವಿನಕೇರಿಯ 67ರ ವೃದ್ಧೆಯಲ್ಲಿಯೂ ಸೋಂಕು ಕಾಣಿಸಿ ಕೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ತಪಾಸಣೆಗೆ ಒಳಪಟ್ಟ ವೇಳೆ ಧೃಡಪಟ್ಟಿದೆ.
ಹೋಂಐ ಸೋಲೇಶನ್‍ನಲ್ಲಿರುವ 11 ಮಂದಿ ಸಹಿತ ಒಟ್ಟೂ 16 ಪ್ರಕರಣಗಳು ಸಕ್ರಿಯವಾಗಿದೆ. 13 ರ್ಯಾಟ್ ಮತ್ತು 157 ಆರ್‍ಟಿಪಿಸಿಆರ್ ಸೇರಿದಂತೆ ಒಟ್ಟೂ 170 ಸ್ಬ್ಯಾಬ್ ಟೆಸ್ಟ್ ನಡೆಸಲಾಗಿದೆ.
ಕಬ್ಬಿನ ಗದ್ದೆಯಲ್ಲಿ ಬೆಂಕಿ :
ಹಲವು ತಾಲೂಕುಗಳಿಗೆ ವಿದ್ಯುತ್ ಸರಬರಾಜು ಮಾಡುವ ಹೈಟೆನ್ಸನ್ (110 ಕೆ.ವಿ.) ಲೈನ್ ಮಾರ್ಗ ಮಧ್ಯೆ ಜೋತು ಬಿದ್ದು, ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡು ಹಾನಿ ಸಂಭವಿಸಿದೆ. ತಾಲೂಕಿನ ಬೊಳೆ-ಹೊಸಗದ್ದೆಯ ಗೌಡರಕೇರಿ ಬಳಿ ಈ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಮುಖ್ಯ ಮಾರ್ಗದ ವಿದ್ಯುತ್ ಕಂಬದ ಇನ್ಸುಲೇಟರ್ ತೊಂದರೆ ಅಥವಾ ಇತರೇ ಕಾರಣದಿಂದ ಹೈಟೆನ್ಸನ್ ಲೈನ್, ಕೆಳಗಡೆ ಹಾದು ಹೋಗಿರುವ ಎಲ್‍ಟಿ ಲೈನ್ ಮೇಲೆ ಬಿದ್ದ ಪರಿಣಾಮ ಉಂಟಾದ ಬೆಂಕಿ ಸೋಮು ಬೊಮ್ಮು ಗೌಡ ಅವರ ಕಬ್ಬಿನ ಗದ್ದೆಗೆ ತಗುಲಿ, ಬೆಳೆ ಸುಟ್ಟು ಹಾನಿಯಾಗಿದೆ.
ಸ್ಥಳೀಯರು ಮತ್ತು ಹೆಸ್ಕಾಂ ಸಿಬ್ಬಂದಿಗಳು ಬೆಂಕಿ ನಂದಿಸಲು ಶ್ರಮಿಸಿದರು. ಹೆಸ್ಕಾಂ ಶಾಖಾಧಿಕಾರಿ ಸುಮಿತ್ರಾ ಕೆ. ಸ್ಥಳ ಪರಿಶೀಲನೆ ನಡೆಸಿದ್ದು, ಕಂದಾಯ ಮತ್ತು ಕೃಷಿ ಇಲಾಖೆಗಳಿಂದ ಹಾನಿ ಅಂದಾಜು ಪಡೆದು ಹೆಸ್ಕಾಂ ವಿಭಾಗೀಯ ಮುಖ್ಯ ಕಚೇರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿದು ಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.