ಮಾಹಿತಿ
Trending

ಕಡಿಮೆಯಾಗುತ್ತಿದೆ‌ಕೋವಿಡ್ ತೀವ್ರತೆ

ಕುಮಟಾ: ತಾಲೂಕಿನಲ್ಲಿ ಇಂದು 1 ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಬಾಡದ 50 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದ್ದು, ಇಂದು 1 ಪ್ರಕರಣ ದಾಖಲಾದ ಬೆನ್ನಲ್ಲೆ ಕುಮಟಾ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 1949 ಕ್ಕೆ ಏರಿಕೆಯಾಗಿದೆ. ಇದೇ ವೇಳೆ, ಹೊನ್ನಾವರ ತಾಲೂಕಿನಲ್ಲಿ ಇಂದು ಯಾವುದೇ ಕೇಸ್ ದಾಖಲಾಗಿಲ್ಲ.

ಅಂಕೋಲಾದಲ್ಲಿಂದು ಕೋವಿಡ್ ಕೇಸ್ 2 : ಗುಣಮುಖ 3

ಅಂಕೋಲಾ : ತಾಲೂಕಿನಲ್ಲಿ ಮಂಗಳವಾರ 2 ಹೊಸ ಕೋವಿಡ್ ಕೇಸ್‍ಗಳು ಧೃಡಪಟ್ಟಿದೆ. ಪಟ್ಟಣದ ಮಠಾಕೇರಿ ವ್ಯಾಪ್ತಿಯ 31ರ ಮಹಿಳೆ ಮತ್ತು ಕನಸಿಗದ್ದೆಯ 48ರ ಪುರಷನಲ್ಲಿ ಸೋಂಕು ಲಕ್ಷಣಗಳು ಪತ್ತೆ ಯಾಗಿವೆ. ಸೋಂಕು ಮುಕ್ತರಾದ ಮೂವರರನ್ನು ಬಿಡುಗಡೆಗೊಳಿ ಸಲಾಗಿದ್ದು, ಹೋಂ ಐಸೋಲೇಶನಲ್ಲಿರುವ 20 ಮಂದಿ ಸಹಿತ ಒಟ್ಟೂ 22 ಪ್ರಕರಣಗಳು ಸಕ್ರೀಯವಾಗಿದೆ. 20 ರ್ಯಾಟ ಮತ್ತು 4 ಆರ್‍ಟಿಪಿಸಿಆರ್ ಸೇರಿ ಒಟ್ಟೂ 24 ಸ್ವ್ಯಾಬ್ ಟೆಸ್ಟ್ ನಡೆಸಲಾಗಿದೆ.

ಶಿರಸಿಯಲ್ಲಿಂದು 3 ಕೊರೊನಾ ಪಾಸಿಟಿವ್:

ಶಿರಸಿ: ತಾಲೂಕಿನಲ್ಲಿಂದು ಮೂರು ಕೊರೊನಾ ಪಾಸಿಟಿವ್ ಬಂದಿದ್ದು, ಐವರು ಗುಣಮುಖಗೊಂಡಿದ್ದಾರೆ.
ಇಂದು ಮಾರಿಕಾಂಬಾ ದೇವಸ್ಥಾನದ ಹತ್ತಿರ 1, ದಾಸನಕೊಪ್ಪದಲ್ಲಿ 1, ಬಪ್ಪನಳ್ಳಿಯಲ್ಲಿ 1 ಕೇಸ್ ಪಾಸಿಟಿವ್ ಬಂದಿದೆ.

ಯಲ್ಲಾಪುರದಲ್ಲಿ ನಾಲ್ವರಿಗೆ ಸೋಂಕು:

ಯಲ್ಲಾಪುರ: ತಾಲೂಕಿನಲ್ಲಿ ಮಂಗಳವಾರ ನಾಲ್ಕು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ.
ಇಂದು ಶಿರನಾಲಾದಲ್ಲಿ ಇಬ್ಬರಿಗೆ, ತಾಟವಾಳ ಹಾಗೂ ಜೋಗಿಕೊಪ್ಪದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button