
ಭಟ್ಕಳ: ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಂದರ ಮಾವಿನಕುರ್ವೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ನಟರಾಜ ದೇವಪ್ಪ ಖಾರ್ವಿ (29) ಎಂದು ತಿಳಿದು ಬಂದಿದೆ. ಮುಂಜಾನೆ ಮೀನುಗಾರಿಕೆಗೆ ತೆರಳಿದ್ದ. ಸಂಜೆ 5 ಗಂಟೆಯ ಸುಮಾರಿಗೆ ಮನೆಗೆ ಬಂದು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು ಮನೆಯವರು ಕರೆದರೂ ಕೂಡಾ ಮಾತನಾಡದೇ ಇರುವುದರಿಂದ ಸಂಶಯಗೊoಡು ಬಾಗಿಲು ಒಡೆದು ನೋಡಿದಾಗ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಈತನು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಪೊಲೀಸರು ಆತನ ಸಹೋದರ ಉದಯ ದೇವಪ್ಪ ಖಾರ್ವಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಮಂದಾರ ಎಲೈಟ್ ಫಂಕ್ಷನ್ ಹಾಲ್: ಬರ್ಥ್ ಡೇ ಪಾರ್ಟಿ , ಸಭೆ- ಸಮಾರಂಭ ಮುಂತಾದ ಕಾರ್ಯಕ್ರಮಗಳಿಗಾಗಿ ಬುಕ್ಕಿಂಗ್ ಮಾಡಿ
- ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಐದನೇ ದಿನದ ಉಪನ್ಯಾಸ
- ಕಾಲೇಜ್ ಫಂಕ್ಷನ್ ಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದ 19ರ ಯುವತಿ ಕಾಣೆ ? ನೊಂದ ತಂದೆ ನೀಡಿದ ದೂರು ಮತ್ತು ಪೊಲೀಸ್ ಪ್ರಕಟಣೆಯಲ್ಲಿ ಏನಿದೆ ?
- ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವರ ರಥೋತ್ಸವ : ಆಂಜನೇಯನ ಅನುಗ್ರಹಕ್ಕೆ ಪಾತ್ರರಾದ ಅಪಾರ ಭಕ್ತರು
- ಅಂಕೋಲಾದಲ್ಲಿ ದೊಡ್ಡ ದೇವರ, ದೊಡ್ಡ ತೇರು ಉತ್ಸವ : ಮನಸೆಳೆದ ಮೃಗಬೇಟೆ, ಗರುಡಾವರೋಹಣ