Uttara Kannada
Trending

ಸಾರ್ವಜನಿಕ ಸ್ಥಳದಲ್ಲಿ ಮದ್ಯಸೇವನೆ: ಪ್ರಶ್ನಿಸಿದ್ದಕ್ಕೆ ಪೊಲೀಸ್ ಮೇಲೆಯೇ ಹಲ್ಲೆ

ಸಮವಸ್ತ್ರ ಹರಿದುಹಾಕಿದರು
ದೂರು ದಾಖಲಿಸಿದ ಹೈವೇ ಪೆಟ್ರೋಲಿಂಗ್ ಸಿಬ್ಬಂದಿ

ಕುಮಟಾ: ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯಸೇವಿಸುತ್ತಿದ್ದ ವೇಳೆ ಕರ್ತವ್ಯದಲ್ಲಿದ್ದ ಹೈವೇ ಪೆಟ್ರೋಲಿಂಗ್ ಸಿಬ್ಬಂದಿ ಪ್ರಶ್ನಿಸಿದ್ದಕ್ಕೆ ಆತನ ಮೇಲೆಯೇ ಹಲ್ಲೆ ಮಾಡಿದ ಘಟನೆ ಕುಮಟಾ ತಾಲೂಕಿನ ಮಿರ್ಜಾನ್ ಸಮೀಪ ನಡೆದಿದೆ. ಈ ಸಂಬoಧ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ., ಓರ್ವ ಆರೋಪಿ ತಪ್ಪಿಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ರಾತ್ರಿ 10:45 ರ ಸುಮಾರಿಗೆ ಕುಮಟಾ ತಾಲೂಕಿನ ಮಿರ್ಜಾನ ಎತ್ತಿನಬೈಲ್ ಕ್ರಾಸ್ ಹತ್ತಿರ ಇರುವ ಚೊಯ್ಸ್ ಲ್ಯಾಂಡ್ ಹೊಟೆಲ್ ಎದುರಿಗೆ ರಾಷ್ಟ್ರೀಯ ಹೆದ್ದಾರಿ 66 ರ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಅನಧಿಕೃತವಾಗಿ ಮದ್ಯವನ್ನು ಸೇವಿಸುತ್ತಿದ್ದರು. ಈ ವೇಳೆ ಹೈವೇ ಪೆಟ್ರೊಲಿಂಗ್ ಕರ್ತವ್ಯದಲ್ಲಿದ್ದ ಸಿಬ್ಬಂದಿ ವಿಚಾರಿಸಲು ತೆರಳಿದ್ದಾನೆ. ಆದರೆ. ಸರ್ಕಾರಿ ಕರ್ತವ್ಯದಲ್ಲಿದ್ದ ಕಮಲಾಕರ ನಾಯ್ಕ , ಅಡ್ಡಗಟ್ಟಿ ಸರ್ಕಾರಿ ಕರ್ತವ್ಯಕ್ಕೆ ಆತಂಕ ಪಡಿಸಿದ್ದಾರೆ ಎನ್ನಲಾಗಿದೆ. ಆರೋಪಿಗಳು ಕೈಯಿಂದ ಮೈ ಮೇಲೆ ಹೊಡೆದು ಹಲ್ಲೆ ಮಾಡಿದ್ದಲ್ಲದೆ, ಆರೋಪಿತರೆಲ್ಲರು ಸೇರಿ ಸಮವಸ್ತ್ರವನ್ನು ಹರಿದು ಹಾಕಿದ್ದಾರೆ ಎಂದು ಕಮಲಾಕರ ನಾಯ್ಕ ದೂರಿದ್ದಾರೆ.

ಮಂಜುನಾಥ ಹರಿಕಂತ್ರ, ವಿಶಾಲ್ ಪುರುಷೋತ್ತಮ ಬರ್ಗಿ, ಮಂಜುನಾಥ ಮಾಸ್ತಿ ಪಟಗಾರ, ಜಗನ್ನಾಥ ಗಣಪತಿ ಹರಿಕಂತ್ರ ಈ ನಾಲ್ವರು ಆರೋಪಿಗಳಾಗಿದ್ದು, ಇವರಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಹುಡಕಾಟದಲ್ಲಿದ್ದಾರೆ.

ವಿಸ್ಮಯ ನ್ಯೂಸ್, ನಾಗೇಶ್ ದಿವಗಿ ಕುಮಟಾ

Back to top button