Follow Us On

Google News
Uttara Kannada
Trending

ಕಳುವಾದ 24 ಗಂಟೆಯೊಳಗೆ ಬೈಕ್ ಪತ್ತೆ

ಕುಮಟಾ ಪೊಲೀಸರ ಕಾರ್ಯಾಚರಣೆ
ಕುಮಟಾ ಬೇಕರಿ ಸಮೀಪ ನಾಪತ್ತೆಯಾಗಿದ್ದ ಬೈಕ್ ಹೊನ್ನಾವರದ ಕರ್ಕಿ ಸಮೀಪ ಪತ್ತೆ

ಕುಮಟಾ: ಕಳ್ಳತನವಾದ ಬೈಕ್ ಅನ್ನು 24 ಗಂಟೆಯೊಳಗೆ ಕುಮಟಾ ಪೊಲೀಸರು ಪತ್ತೆಹಚ್ಚಿ ಮಾಲೀಕರಿಗೆ ಒಪ್ಪಿಸಿದ ಘಟನೆ ಕುಮಟಾದಲ್ಲಿ ನಡೆದಿದೆ, ಪಟ್ಟಣದ ಹಳೇ ಬಸ್ ನಿಲ್ದಾಣ ಸಮೀಪದ ಪಾನ್ ಅಂಗಡಿಯ ಮಾಲೀಕರೊಬ್ಬರ ಬೈಕ್ ಇದ್ದಕ್ಕಿದ್ದಂತೆ ಕಳುವಾಗಿತ್ತು. ಈ ಬಗ್ಗೆ ಬೈಕ್ ಕಳೆದುಕೊಂಡವರು ಕುಮಟಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಬೈಕ್ ಕಳುವಾಗಿರುವ ಬಗ್ಗೆ ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಕ್ರೈಂ ಪಿಎಸ್‌ಐ ನೇತೃತ್ವದ ತಂಡ ಎಲ್ಲೆಡೆ ಶೋಧ ಕಾರ್ಯ ನಡೆಸಿತ್ತು. ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ಕೂಡ ನಡೆಸಿತ್ತು. ಅಲ್ಲದೆ ಅಕ್ಕಪಕ್ಕ ತಾಲೂಕುಗಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಇದಾದ ಬಳಿಕ ಹೊನ್ನಾವರದ ಕರ್ಕಿ ರೈಲ್ವೆ ನಿಲ್ದಾಣದ ಸಮೀಪ ಬೈಕ್ ಇರುವುದನ್ನು ಪತ್ತೆ ಹಚ್ಚಿದ ಪೊಲೀಸರು 24 ಗಂಟೆಯೊಳಗೆ ವಾರಸುದಾರರಿಗೆ ಬೈಕ್ ತಲುಪಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮಹಿಳಾ ಪಿಎಸ್‌ಐ ಆದ ಸುಧಾ , ಪಿಎಸ್‌ಐಯಾದ ಆನಂದಮೂರ್ತಿ, ರವಿ ಗುಡ್ಡಿ ಹಾಗೂ ಸಿಬ್ಬಂದಿ ಅವರು ಇದ್ದರು.

ವಿಸ್ಮಯ ನ್ಯೂಸ್, ಕುಮಟಾ

Back to top button