ದೇವಿಯ ಮಂಗಳಸೂತ್ರ ಕದ್ದ ಕಳ್ಳ ಅಂದರ್: ಹಲವು ದೇವಸ್ಥಾನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಈತ
ಗೋಕರ್ಣ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಹನೇಹಳ್ಳಿ ಗ್ರಾಮದ ಶ್ರೀ ಸಂಕದ ಮಹಾಸತಿ ದೇವಸ್ಥಾನದಲ್ಲಿ ಸುಮಾರು 22 ಗ್ರಾಂ ತೂಕದ ಬಂಗಾರದ ಕರಿಮಣಿ ಸರ(ಮಂಗಳಸೂತ್ರ) ಹಾಗೂ ಸುಮಾರು 5000/- ರೂ ಕಾಣಿಕೆ ಹಣ ಕಳ್ಳತನವಾದ ಬಗ್ಗೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ದಿನಾಂಕ 20-01-2021 ರಂದು ಶ್ರೀ ಮಹಾಸತಿ ದೆವಸ್ಥಾನ ಕಳ್ಳತನ ಮಾಡಿದ ಆರೋಪಿತನಾದ ವಿವೇಕಾನಂದ ಎಂದು ತಿಳಿದುಬಂದಿದೆ. ಈತ ಬೋಟಿನ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಅಂಕೋಲಾ ತಾಲೂಕಿನ ಬೆಳಂಬಾರದವನು ಎಂದು ತಿಳಿದುಬಂದಿದೆ. ಈತನನ್ನು ಕುಮಟಾ ತಾಲೂಕಾ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿ ಆರೋಪಿತನಿಂದ 22 ಗ್ರಾಂ ತೂಕದ ಸುಮಾರು 62,000/- ರೂ ಮೌಲ್ಯದ ಬಂಗಾರದ ಮಂಗಳ ಸೂತ್ರ(ಕರಿಮಣಿ ಸರ) ವನ್ನು ವಶಪಡಿಸಿಕೊಂಡು ಆರೋಪಿತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಪ್ರಕರಣದ ಆರೋಪಿತನಿಗೆ ಕಳೆದ ಕೆಲವು ದಿನಗಳ ಹಿಂದೆ ಕುಮಟಾ ಪೊಲಿಸ್ ಠಾಣಾ ವ್ಯಾಪ್ತಿಯ ಕೊಡ್ಕಣಿಯಲ್ಲಿ ದೇವಸ್ಥಾನ ಕಳ್ಳತನ ಪ್ರಕರಣ, ಅಂಕೋಲಾದ ಕೊಗ್ರೆ, ಹೊನ್ನಿಬೈಲ್, ಹಾಗೂ ಹೊನ್ನರಾಕಾ ದೇವಸ್ಥಾನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಗೋಕರ್ಣ ಪೊಲೀಸ್ ಠಾಣೆಯ ಪಿ.ಎಸ್.ಐ ನವೀನ್ ನಾಯ್ಕ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ವಿಸ್ಮಯ ನ್ಯೂಸ್ ಗೋಕರ್ಣ
- ಯಶಸ್ವಿಯಾಗಿ ನಡೆದ ಯುನಿಫೆಸ್ಟ್ : 35 ಕಾಲೇಜುಗಳ 500 ವಿದ್ಯಾರ್ಥಿಗಳು ಭಾಗಿ
- ರಸ್ತೆ ಮಧ್ಯೆ ನಿಂತುಕೊಂಡು ಖಾರದ-ಪುಡಿ ಎರಚಿ ದರೋಡೆ ಮಾಡಿದ್ದ ಕಳ್ಳರು ಕೆಲವೇ ಗಂಟೆಗಳಲ್ಲಿ ಅರೆಸ್ಟ್!
- ಕುಮಟಾ ತಾಲ್ಲೂಕಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ
- ಅಂಕೋಲಾ ಪುರಸಭೆಯ ವಾರ್ಡ್ ನಂ 14ಕ್ಕೆ ನವೆಂಬರ್ 23 ರಂದು ಉಪಚುನಾವಣೆ
- ರಸ್ತೆಗೆ ಅಡ್ಡಲಾಗಿ ಬಂದ ದನ ತಪ್ಪಿಸಲು ಹೋಗಿ ಅಪಘಾತ: ಬೈಕ್ ಸವಾರ ಸಾವು