ನಮ್ಮನ್ನ ದೇವರೇ ಕಾಪಾಡಬೇಕು. ಜೀವಭಯ ಕಾಡುತ್ತಿದೆ

ಕ್ವಾರಂಟೈನ್ ಕೇಂದ್ರ ಹಲವೆಡೆ ಅವ್ಯವಸ್ಥೆಯ ಆಗರವಾಗಿದೆ.. ಸಮರ್ಪಕ ಮೂಲಭೂತ ಸೌಕರ್ಯಗಳಿಲ್ಲದೆ ಕೇಂದ್ರದಲ್ಲಿದ್ದವರು ಪರದಾಡುಂತಾಗಿದೆ.. ಬಹುತೇಕ ಕೇಂದ್ರಗಳಲ್ಲಿ ಸ್ವಚ್ಛತೆ ಎಂಬುದು ಮರಿಚಿಕೆಯಾಗಿದೆ ಎಂಬ ಮಾತುಗಳು ರಾಜ್ಯದೆಲ್ಲೆಡೆ ಕೇಳಿಬರುತ್ತಿದೆ.. ಈ ಕ್ವಾರಂಟೈನ್ ಕೇಂದ್ರ ಕೂಡಾ ಇದಕ್ಕೆ ಹೊರತಾಗಿಲ್ಲ.. ಕಳೆದ ಒಂದು ವಾರದಿಂದ ನಾವು ಇಲ್ಲಿ ಕ್ವಾರಂಟೈನ್ ಆಗಿದ್ದೇವೆ. ಪಾಸಿಟಿವ್ ಪ್ರಕರಣಗಳು ದಾಖಲಾಗಿನಿಂದ ಯ್ಯಾವುದೆ ಅದ್ದಿಕಾರಿಗಳು ಇಲ್ಲಿಗೆ ಬರುತ್ತಿಲ್ಲ. ಇಲ್ಲಿ ಕಸದ ರಾಸಿಯ್ಯಾಗಿದೆ. ಯ್ಯಾರು ಕಸವನ್ನು ಕ್ಲಿನ್ ಮಾಡುತ್ತಿಲ್ಲ. ಇಲ್ಲಿ ಇರುವುದು ಮೂರು ಟಾಯಲೇಟ್ ಎರಡು ಬಾತರೂಂ.. ಪಾಸಿಟಿವ್ ಬಂದಿರುವ ವ್ಯಕ್ತಿಗಳು ಇದನ್ನೆ ಉಪಯೋಗಿಸಿದ್ದಾರೆ ನಾವು ಅದನೆ ಉಪಯೋಗಿಸುವುದು ಅನಿವಾರ್ಯವಾಗಿದೆ ನಮ್ಮ ಅರೋಗ್ಯದ ಬಗ್ಗೆ ತಾಲೂಕಾಡಳಿತ ಎನು ಕ್ರಮ ತಗೆದು ಕೋಂಡಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದು ಉತ್ತರಕನ್ನಡ ಜಿಲ್ಲೆಯ ಹೊನ್ನವರ ತಾಲೂಕಿನ ಕ್ವಾರಂಟೈನ್ ಕೇಂದ್ರವೊಂದರ ಅವ್ಯಸ್ಥೆಯ ಕಥೆಯಿದು.. ಹೊನ್ನಾವರ ಪಟ್ಟಣದ ಬಿ.ಸಿ.ಎಮ್ ಹಾಸ್ಟೆಲ್‍ನಲ್ಲಿ ಮುಂಬೈನಿಂದ ಬಂದು ಕ್ವಾರಂಟೈನ್‍ನಲ್ಲಿದ್ದವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕ್ವಾರಂಟೈನ್ ಸ್ಥಳಕ್ಕೆ ಯ್ಯಾವುದೆ ಅಧ್ದಿಕಾರಿಗಳು ಮುಖಮಾಡುತ್ತಿಲ್ಲ. ನಮ್ಮ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಹೊನ್ನಾವರದಲ್ಲಿ ಕಳೆದ ಎರಡು ದಿನಗಳ ಹಿಂದೆ ಸೋಮವಾರ ನಾಲ್ಕೂ ಪಾಸಟಿವ್ ಪ್ರಕರಣ ಮತ್ತು ಮಂಗಳವಾರ ಒಂದು ಪ್ರಕರಣಗಳು ದಾಖಲಾಗಿದ್ದು, ಪಾಸಿಟಿವ್ ಬಂದ ವ್ಯಕ್ತಿಗಳ ಜೋತೆಗೆ ಇದ್ದ ವ್ಯಕ್ತಿಗಳಿಗೆ ರೂಂ ಕೂಡಾ ಬದಲಿಸಿಲ್ಲ. ಅಲ್ಲದೆ, ರೂಮ್ ಗಳನ್ನು ಸ್ವಚಗೋಳಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದನ್ನು ಬೇರೆಯಾರೂ ಆರೋಪಿಸಿದ್ದಲ್ಲ. ಕ್ವಾರಂಟೈನ್ ಕೇಂದ್ರದಲ್ಲಿದ್ದರೇ ಈ ಗಂಭೀರ ಆರೋಪವನ್ನು ಮಾಡಿದ್ದಾರೆ. ಕ್ವಾರಂಟೈನ್‍ನಲ್ಲಿದ್ದ ಇನೋರ್ವ ವ್ಯಕ್ತಿ ಮಾತನಾಡಿ ಪಾಸಿಟಿವ್ ಕೇಸಗಳು ಬಂದಾಗಿನಿಂದ ಇಲ್ಲಿಗೆ ಸಂಬಂದ ಪಟ್ಟ ಅದ್ದಿಕಾರಿಗಳು ಇಲ್ಲಿಗೆ ಬಂದಿಲ್ಲಾ ಇಲ್ಲಿಯ ವರೆಗೆ ಸೈನಿಟೈಸರ್ ಸ್ಪರೇ ಮಾಡಿಲ್ಲಾ ಇಲ್ಲಿ ಕಸದ ರಾಶಿಯ್ಯಾಗಿ ಬಿದ್ದಿದೆ. ಇಲ್ಲಿ ನಮಗೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಹೇಳಿದ್ದಾರೆ. ಒಟ್ನಲ್ಲಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಇಲ್ಲಿನ ಜನರ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ..

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ

Exit mobile version