ಶಾಸಕರಿಂದ ಕಿಟ್ ವಿತರಣೆ

ಅಳಲು ತೋಡಿಕೊಂಡ ಆಟೋ ಚಾಲಕರು

ಹೊನ್ನಾವರ: ಹೊನ್ನಾವರ ತಾಲೂಕಿನ ನಗರಬಸ್ತಿಕೇರಿ ಜಿಲ್ಲಾ ಪಂಚಾಯತ ಕ್ಷೇತ್ರದ ಬಳ್ಕೂರು ಕೋಡಾಣಿ ಮಾಗೋಡ ನಗರಬಸ್ತಿಕೇರಿ ಕುದ್ರಗಿ ಗ್ರಾಮ ಪಂಚಾಯತ ವ್ಯಾಪ್ತಿಯ 95 ಆಟೋ ಚಾಲಕರಿಗೆ ದಿನಸಿ ಕಿಟ್ ಶಾಸಕ ಲ್ಲಿ ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಸುನೀಲ್ ನಾಯ್ಕ ವಿತರಿಸಿದರು,
ಈ ಸಂದರ್ಭದಲ್ಲಿ ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಮಾತನಾಡಿ ಲಾಕ್ ಡೌನ್‍ನಿಂದ ದೇಶದ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ ಕಷ್ಟದಲ್ಲಿರುವ ಬಡ ಕಾರ್ಮಿಕರಿಗೆ ಈಗಾಗಲೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಇಂದು ಮಂಕಿಯ ಆಟೋ ಚಾಲಕರಿಗೆ ವಿತರಿಸಿದ್ದೇನೆ. ಈ ಕಿಟ್ ನಿಮಗೆ ಒಂದು ವಾರ ಬರಬಹುದು. ಈ ಕಿಟ್ ಕೊಡುವ ಉದ್ದೇಶ ನಿಮ್ಮ ಜೊತೆಗೆ ನಾವಿದ್ದೇವೆ ಎನ್ನುವ ಆತ್ಮಸ್ಥರ್ಯ ತುಂಬುವುದಾಗಿದೆ. ಸರ್ಕಾರದಿಂದ ಸಿಗಬಹುದಾದ ಯೋಜನೆಯನ್ನು ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸರ್ಕಾರ ಈಗಾಗಲೆ ಬ್ಯಾಡ್ಜ್ ಇದ್ದವರಿಗೆ 5 ಸಾವಿರ ನೀಡುವುದಾಗಿ ಘೋಷಣೆ ಮಾಡಿದೆ. ನಾನು ನಿನ್ನೆ ಮುಖ್ಯಮಂತ್ರಿಗಳ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಕೇವಲ ಬ್ಯಾಡ್ಜ್ ಇದ್ದವರಿಗಷ್ಟೆ ಅಲ್ಲ. ಎಲ್ಲಾ ರಿಕ್ಷಾ ಡ್ರೈವರ್‍ಗಳಿಗೂ ಸಿಗಬೇಕು ಎಂದು ಹೇಳಿದ್ದೇನೆ. ಇಂತಹ ಸಂದರ್ಭದಲ್ಲಿ ರಿಕ್ಷಾ ಚಾಲಕರು ಅತ್ಯಂತ ಜಾಗರುಕತೆಯಿಂದ ಇರಬೇಕು. ಮುಂದಿನ ದಿನಗಳಲ್ಲಿ ಕರೋನಾದ ಜೊತೆಗೆ ಜೀವನ ನಡೆಸುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬಳ್ಕೂರ ಗ್ರಾಮ ಪಂಚಾಯತ ಅಧ್ಯಕ್ಷ ಕೇಶವ ನಾಯ್ಕ, ಸದಸ್ಯರಾದ ಗಣಪತಿ ನಾಯ್ಕ ಬಿಟಿ, ವಂದನಾ ಪೈ, ಮುಕಂಡರಾದ ಕೆ ಜಿ ಕರಿಮಣಿ, ವೇಂಕಟೇಶ ಪೈ, ಪಾಂಡುರಂಗ ಬಂಡಾರಕರ, ವೇಂಕಟೇಶ ಭಟ್ಟ, ಚಾಲಕ ಸಂಘದ ಅಧ್ಯಕ್ಷರಾದ ಮಾರುತಿ ನಾಯ್ಕ, ನಾಗರಾಜ ನಾಯ್ಕ, ಪ್ರಶಾಂತ ಹೆಗಡೆ ಇದ್ದರು,

ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

Exit mobile version