Uttara Kannada
Trending

ಹೊನ್ನಾವರದಲ್ಲಿ ಮತ್ತೊಂದು ಕರೊನಾಕೇಸ್

ಹೊನ್ನಾವರ: ಮುಂಬೈದಿAದ ಹೊನ್ನಾವರಕ್ಕೆ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ಹೊನ್ನಾವರ ತಾಲೂಕಿನ ಮೂಡ್ಕಣಿ ಮೂಲದ 24 ವರ್ಷದ ಯುವಕನಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 9 ಕ್ಕೆ ಏರಿದೆ. ಮೇ.18 ರಂದು ಒಂದೇ ಕುಟುಂಬದ ನಾಲ್ವರಲ್ಲಿ ಕೊರೊನಾ ದೃಢಪಟ್ಟ ನಂತರ ನಿಧಾನವಾಗಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು ಬುಧವಾರದ ಪ್ರಕರಣದೊಂದಿಗೆ ಸೋಂಕಿತರ ಸಂಖ್ಯೆ 9 ಕ್ಕೇರಿದೆ. ಎಲ್ಲರೂ ಮಹರಾಷ್ಟçದಿಂದ ಆಗಮಿಸಿದವರಾಗಿದ್ದಾರೆ. ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯಿಂದ ಮೇ.21 ರಂದು ಗಂಟಲ ದ್ರವವನ್ನು ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಬುಧವಾರ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
ಹೊನ್ನಾವರ ತಾಲೂಕಿನಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾದವರ ಸಂಪರ್ಕಕ್ಕೆ ಬಂದಿದ್ದ ಎನ್ನಲಾದ ಮಾಗೋಡ ಮೂಲದ ಯುವಕನ ಲ್ಯಾಬ್ ರಿಪೋರ್ಟ ನೆಗೆಟಿವ್ ಬಂದಿದ್ದು ತಾಲೂಕಿನ ಮಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮುಂಬೈದಿAದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಿದ್ದ ನಾಲ್ವರಲ್ಲಿ ಮೇ.18 ರಂದು ಸೋಂಕಿರುವುದು ದೃಢಪಟ್ಟಿತ್ತು. ನಂತರದ ಬೆಳವಣಿಗೆಯಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದವರ ಜಾಡು ಹುಡುಕಿ ಹೊರಟ ತಾಲೂಕಾಡಳಿತದವರು ಮಾಗೋಡ ಮೂಲದವನಾದ ನಾಲ್ವರು ಸೋಂಕಿತರಲ್ಲಿ ಒಬ್ಬಳಾದ ಮಹಿಳೆಯ ಸಹೋದರ ಕ್ವಾರಂಟೈನ್‌ನಲ್ಲಿದ್ದವರ ಸಂಪರ್ಕಕ್ಕೆ ಬಂದಿರುವುದು ತಿಳಿದು ಆತನನ್ನು ಹಾಗೂ ಆತನ ಕುಟುಂಬದ ಸದಸ್ಯರು, ಸ್ನೇಹಿತರು ಸೇರಿ 8 ಮಂದಿಯನ್ನು ಕ್ವಾರಂಟೈನ್ ಮಾಡಿದ್ದರು.
ಯುವಕ ಕ್ವಾರಂಟೈನ್ ಆಗುವ ಮೊದಲು ತಾಲೂಕಿನ ಬಹಳಷ್ಟು ಕಡೆ ಓಡಾಡಿದ್ದ ಬಗ್ಗೆ ಹಲವರ ಸಂಪರ್ಕಕ್ಕೆ ಬಂದ ಕುರಿತೂ ಮಾತುಗಳು ಕೇಳಿಬಂದಿದ್ದವು. ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಎನ್ನಲಾದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದ್ದೇ ಆದರೆ ಅದು ಸಮುದಾಯಕ್ಕೆ ಹರಡುವ ಅಪಾಯವಿದೆ ಎನ್ನುವ ಕಾರಣಕ್ಕೆ ಯುವಕನ ಗಂಟಲ ದ್ರವದ ಲ್ಯಾಬ್ ರಿಪೋರ್ಟಗಾಗಿ ಇಡೀ ತಾಲೂಕಿನ ಜನರು ಕಾಯುತ್ತಿದ್ದರು. ಕೊನೆಗೂ ಯುವಕನ ರಿಪೋರ್ಟ ನೆಗೆಟಿವ್ ಬಂದಿರುವುದು ಸಾರ್ವಜನಿಕರಲ್ಲಿ ಕೊಂಚ ನಿರಾಳತೆಯನ್ನು ಮೂಡಿಸಿದೆ ಎನ್ನಲಾಗುತ್ತಿದೆ.


ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,

Back to top button